ನಾನು ಹಿಂದೂ ವಿರೋಧಿಯಲ್ಲ. ಅತಿರಥ ಚಿತ್ರಕ್ಕೆ ಅಡ್ಡಿ ಬೇಡ: ಚೇತನ್ ಮನವಿ
Nov 27 2017 3:39AM
ಕರಾವಳಿ ಕರ್ನಾಟಕ ವರದಿ

ಬೆಂಗಳೂರು: ನಾನು ಹಿಂದೂ ವಿರೋಧಿ ಅಲ್ಲ, ಆದರೆ ಹಿಂದುತ್ವದ ವಿರೋಧಿ. ಎಲ್ಲ ಧರ್ಮಗಳನ್ನು ಸಹಿಷ್ಣುತೆಯಿಂದ ಕಾಣುವುದೇ ಹಿಂದೂ ಧರ್ಮ. ಬಹುತ್ವವನ್ನು ಬಿಟ್ಟು ಏಕರೂಪಿ ಅಜೆಂಡಾ ಹೇರಲು ಹೊರಟವರನ್ನು ಮಾತ್ರ ನಾನು ಪ್ರಶ್ನೆ ಮಾಡಿದ್ದೇನೆ ಎಂದು ನಟ ಚೇತನ್ ಹೇಳಿದ್ದಾರೆ.
ನಟ ಚೇತನ್ ಹಿಂದೂ ವಿರೋಧಿ ಎಂದು ಆರೋಪಿಸಿ ಇತ್ತೀಚೆಗೆ ಬಿಡುಗಡೆಯಾಗಿರುವ ಅವರ 'ಅತಿರಥ' ಚಿತ್ರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಪೋಸ್ಟರ್ ಹರಿಯುತ್ತಿವೆ. ಲಿಂಗಾಯತ ಧರ್ಮ ಹೋರಾಟದಲ್ಲಿ ಪಾಲ್ಗೊಂಡಿರುವ ಚೇತನ್ ಪ್ರಗತಿಪರರ ಜೊತೆ ತಮ್ಮನ್ನು ಗುರುತಿಸಿಕೊಂಡಿರುವುದೂ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ನಟ ಚೇತನ್ ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
'ನಾನು ಹಿಂದೂ ವಿರೋಧಿ ಎಂದು ಆಪಾದಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಅತಿರಥ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕಲೆಗೆ ಅಡ್ಡಿಪಡಿಸಬೇಡಿ. ನಾನು ಹಿಂದೂ ವಿರೋಧಿ ಎಂಬ ಅಭಿಪ್ರಾಯ ಇದ್ದರೆ ನೇರವಾಗಿ ಚರ್ಚೆಗೆ ಬನ್ನಿ' ಎಂದು ಚೇತನ್ ಹೇಳಿದ್ದಾರೆ.
'ಸಿನಿಮಾ ಕೇವಲ ಒಬ್ಬ ನಟನನ್ನು ಅವಲಂಬಿಸಿರುವುದಿಲ್ಲ. ನಿರ್ಮಾಪಕ, ನಿರ್ದೇಶಕರು ಹಣ ಹಾಕಿರುತ್ತಾರೆ. ಹಲವಾರು ಮಂದಿ ಇದಕ್ಕೆ ಶ್ರಮ ವಹಿಸಿರುತ್ತಾರೆ. ನೂರಾರು ಕಾರ್ಮಿಕರು ಚಿತ್ರಕ್ಕಾಗಿ ಕೆಲಸ ಮಾಡಿರುತ್ತಾರೆ. ಅವರೆಲ್ಲರ ಜೀವನವೂ ಆ ಚಿತ್ರದ ಮೇಲೆ ಅವಲಂಬಿತವಾಗಿರುತ್ತದೆ. ಕಲೆಗೆ ಅಡ್ಡಿಪಡಿಸುವುದು ಒಳ್ಳೆಯ ಸಂಸ್ಕೃತಿಯಲ್ಲ. ನಾನು ಹಿಂದೂ ವಿರೋಧಿ ಅಲ್ಲ, ಆದರೆ ಹಿಂದುತ್ವದ ವಿರೋಧಿ. ಈ ರೀತಿ ಪ್ರಶ್ನಿಸುವಂತಹ ಗುಣ ಬೆಳೆದಿದ್ದು ಸಹ ಬಸವಣ್ಣ, ಕುವೆಂಪು ಅಂತಹವರು ಹುಟ್ಟಿದ ಕರ್ನಾಟಕದ ಈ ಮಣ್ಣಿನಲ್ಲೇ ಎಂದು ಚೇತನ್ ಹೇಳಿದ್ದಾರೆ.
ನವೆಂಬರ್ 24ರಂದು ಬಿಡುಗಡೆಯಾದ ಅತಿರಥ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಇದೆ. ಚಿತ್ರ ಆರೋಗ್ಯ ಮತ್ತು ಶಿಕ್ಷಣ ವ್ಯಾಪಾರೀಕರಣದಿಂದ ಆಗಿರುವ ಸಮಸ್ಯೆಗಳ ಕುರಿತು ಸಾಮಾಜಿಕ ಸಂದೇಶ ನೀಡುತ್ತದೆ. ಆದರೆ, ಚಾಮರಾಜನಗರದಲ್ಲಿ ನಗರಸಭೆ ಸದಸ್ಯರೊಬ್ಬರು ಫ್ಲೆಕ್ಸ್ಗಳನ್ನು ಹರಿದು, ಚಿತ್ರ ಪ್ರದರ್ಶಿಸದಂತೆ ಚಿತ್ರಮಂದಿರ ಮಾಲೀಕರಿಗೆ ಒತ್ತಡ ಹಾಕಿದ್ದಾರೆ. ಇದು ಸರಿಯಲ್ಲ. ಚಿತ್ರದ ನಿರ್ದೇಶಕ ಮಹೇಶ್ ಬಾಬು, ಚೇತನ್ ಹಿಂದೂ ವಿರೋಧಿ ಅಲ್ಲ. ಅಲ್ಲದೆ, ಚಾಮರಾಜನಗರ ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡಿದ್ದಾರೆ. ನಾವು ಇದರ ವಿರುದ್ಧ ಕಾನೂನು ಮೂಲಕವೂ ಹೋರಾಟ ಮಾಡುತ್ತೇವೆ’ ಎಂದು ಚೇತನ್ ಹೇಳಿದರು.
ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ ಎಂದು ಆರೋಪಿಸಿ ಚಾಮರಾಜನಗರದಲ್ಲಿ ಅಜಾದ್ ಹಿಂದ್ ಸೇನಾ ಕಾರ್ಯಕರ್ತರು ಚೇತನ್ ನಟನೆಯ ಅತಿರಥ ಚಿತ್ರದ ಪೋಸ್ಟರ್ ಗಳನ್ನು ಹರಿದು ಪ್ರತಿಭಟನೆ ನಡೆಸಿದ್ದಾರೆ.





ಇಂದು ಹೆಚ್ಚು ಓದಿದ ಸುದ್ದಿಗಳು
►►ದಾರಿಯಲ್ಲಿ ಬಿದ್ದಿದ್ದ 36ಸಾವಿರ ರೂ. ಮರಳಿಸಿದ ಶಿಕ್ಷಕ: http://bit.ly/2joP0fv
►►ನಕ್ಸಲ್ ಗುಂಡಿಗೆ ಕರ್ನಾಟಕ ಯೋಧ ಬಲಿ: http://bit.ly/2k6uQLi
►►ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ 300 ವಿಕೆಟ್ ಗಳಿಕೆ. ಆರ್ ಅಶ್ವಿನ್ ವಿಶ್ವ ದಾಖಲೆ: http://bit.ly/2BgvJ70
►►ಸುಳ್ಯ: ಅಪಘಾತಕ್ಕೆ ಯುವಕ ಬಲಿ: http://bit.ly/2n6Xgpf
►►ಸ್ವಾಮಿಜಿಗಳ ನಡುವಿನ ಅಸಮಾನತೆ ಮೊದಲು ತೊಲಗಲಿ: ಮಾದಾರ ಚೆನ್ನಯ್ಯ ಸ್ವಾಮೀಜಿ http://bit.ly/2Af2x1d
►►ಅಪಹೃತ ಸಫ್ವಾನ್ ಕೊಲೆ ಶಂಕೆ. ಇಬ್ಬರ ಬಂಧನ: http://bit.ly/2zGbROm
►►ಜಿಗ್ನೇಶ್ ಮೇವಾನಿ ಗುಜರಾತ್ ಚುನಾವಣಾ ಕಣಕ್ಕೆ: http://bit.ly/2BfGmHv
►►ಸಂಧಾನದ ಮಾತಿಲ್ಲ, ತೋಳಿನ ಶಕ್ತಿಯ ಮೇಲೆ ಮಂದಿರ ನಿರ್ಮಾಣ: http://bit.ly/2n7XPiL
►►'ಗುಜರಾತ್ ಮಾದರಿಯನ್ನು' ಮಾದರಿ ಎನ್ನಲು ಸಾಕ್ಷ್ಯ ಇಲ್ಲ: http://bit.ly/2A9U5SU
Related Tags: Kannada Actor Chethan, Athiratha Kannada Movie