ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡಿ: ಹರ್ಯಾಣಾ ಸಿಎಂಗೆ ಸಿದ್ದರಾಮಯ್ಯ ಮನವಿ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತಿ’ ಚಿತ್ರದ ಸುತ್ತ ವಿವಾದ ಎದ್ದಿರುವಾಗಲೆ ನಟಿ ದೀಪಿಕಾ ಪಡುಕೋಣೆಗೆ ರಕ್ಷಣೆ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ  ಹರಿಯಾಣ ಸಿಎಂ ಮನೋಹರಲಾಲ್ ಖಟ್ಟರ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ. 

ದೀಪಿಕಾ ಪಡುಕೋಣೆ ಅವರಿಗೆ ರಕ್ಷಣೆ ನೀಡಬೇಕೆಂದು ಕೋರಿ ಸಿದ್ದರಾಮಯ್ಯ ಅವರಿಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಬೆಳಗಾವಿ ಸುವರ್ಣಸೌಧದಲ್ಲಿ ಸಚಿವ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ>

 ಆಕೆ ನಮ್ಮ ನೆಲದ ಹೆಣ್ಣು ಮಗಳು. ಅವರ ತಂದೆ ಅಂತರಾಷ್ಷ್ರೀಯ ಕ್ರೀಡಾಪಟು ನಮ್ಮ ರಾಜ್ಯದವರು. ಅವರ ರಕ್ತ ದೀಪಿಕಾ ಪಡುಕೋಣೆ. ಅಂತಹ ಹೆಣ್ಣು ಮಗಳನ್ನು ಕೊಲ್ಲುವ ಮಾತನಾಡಿದ್ದಾರೆ. ಇದು ಅಕ್ಷಮ್ಯ ಅಪರಾಧ. ಭೂಮಿಯನ್ನೆ ತಾಯಿ ಅನ್ನೋ ಸಂಸ್ಕಾರ ನಮ್ಮದು. ಇವರು ತಲೆ ಕಡಿರಿ ಮೂಗು ಕುಯ್ರಿ ಎನ್ನುತ್ತಿದ್ದಾರೆ. ಕೂಡಲೆ ಕೇಂದ್ರ ಸರ್ಕಾರ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕು. ಈ ಕುರಿತು ರಾಜ್ಯದಲ್ಲಿ ಸಿಎಂ ಹಾಗೂ ಗೃಹ ಸಚುವರಿಗೂ ಮನವಿ ಮಾಡಿದ್ದೇನೆ ಎಂದರು.

ಒಂದು ವೇಳೆ ಅವರು ಇಲ್ಲಿಗೆ ಬಂದಾಗ ವಿಪಕ್ಷದವರು ಏನಾದರು ತೊಂದರೆ ಮಾಡಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬಹುದು. ಆದ್ದರಿಂದ ಸೂಕ್ತ ರಕ್ಷಣೆ ಕೊಡಿ ಎಂದಿದ್ದೇನೆ ಅಂತ ಡಿಕೆಶಿ ಹೇಳಿದ್ದಾರೆ.

ಇದನ್ನೂ ಓದಿ:
►►’ಪದ್ಮಾವತಿ’ ಬಿಡುಗಡೆ ಮುಂದೂಡಿಕೆ. ನಿರ್ಮಾಪಕರ ನಿರ್ಧಾರ:
http://bit.ly/2ix7dI4
►►’ಪದ್ಮಾವತಿ’ಗೆ ಬೆದರಿಕೆ: ದೀಪಿಕಾ ಪಡುಕೋಣೆ ಕುಟುಂಬಕ್ಕೆ ಭದ್ರತೆ: http://bit.ly/2zYG2xk

ಇಂದು ಹೆಚ್ಚು ಓದಿದ ಸುದ್ದಿಗಳು
►►’ಪದ್ಮಾವತಿ’ಗೆ ಬೆದರಿಕೆ: ದೀಪಿಕಾ ಪಡುಕೋಣೆ ಕುಟುಂಬಕ್ಕೆ ಭದ್ರತೆ:
http://bit.ly/2zYG2xk
►►ಭಾರತ-ಶ್ರೀಲಂಕಾ: ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ: http://bit.ly/2zU43ri
►►ಶೋಭಾ ’ವಿದ್ಯುತ್ ಖರೀದಿ ಹಗರಣ’ ಇಂದು ವರದಿ ಮಂಡನೆ: http://bit.ly/2zWc6DW
►►ಇಂದಿರಾ ಕ್ಯಾಂಟೀನ್‌ಗೆ ಬಿಬಿಸಿ ಭಾರೀ ಶ್ಲಾಘನೆ. 'ಅಮ್ಮ’ ಕ್ಯಾಂಟೀನ್‌ಗಿಂತ ರುಚಿ ಇದೆಯಂತೆ ಆಹಾರ: http://bit.ly/2jK6pD9
►►ಉಡುಪಿ ಬಿ. ಆರ್. ಶೆಟ್ಟರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ. ಉಸ್ತುವಾರಿ ಸಚಿವರಿಗೂ ಅನುಮಾನ ಉಂಟಂತೆ?: http://bit.ly/2hBU3sq
►►’ಪದ್ಮಾವತಿ’ ಬಿಡುಗಡೆ ಮುಂದೂಡಿಕೆ. ನಿರ್ಮಾಪಕರ ನಿರ್ಧಾರ: http://bit.ly/2ix7dI4
►►ಮಧ್ವರಾಜ್‌ ನೀನು ಬಿಜೆಪಿ ಸೇರುತ್ತೀಯಾ? ಮಾಧ್ಯಮದೆದುರೇ ಪ್ರಮೋದ್‌ಗೆ ಸಿದ್ದರಾಮಯ್ಯ ಪ್ರಶ್ನೆ: http://bit.ly/2iyFlmI

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ