ಭಾರತ-ಶ್ರೀಲಂಕಾ: ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ

ಕರಾವಳಿ ಕರ್ನಾಟಕ ವರದಿ

ಕೋಲ್ಕತ್ತಾ:
ಟೀಂ ಇಂಡಿಯಾ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿದೆ.

ಕೋಲ್ಕತ್ತಾದ ಈಡೆನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನ ನಿಜಕ್ಕೂ ಹಲವು ರೋಚಕಗಳಿಗೆ ಸಾಕ್ಷಿಯಾಯಿತು.

ಶ್ರೀಲಂಕಾಗೆ ಗೆಲುವಿಗಾಗಿ 26.3 ಎಸೆತಗಳಲ್ಲಿ 231 ರನ್ ಗಳನ್ನು ನೀಡಲಾಗಿತ್ತು. ಮೊದಲಿಗೆ ಪಂದ್ಯ ಡ್ರಾ ಆಗುವುದಿತ್ತು. ಆದರೆ ಟೀಂ ಇಂಡಿಯಾ ವೇಗಿಗಳ ಮಾರಕ ದಾಳಿಯಿಂದಾಗಿ ಪಂದ್ಯ ಭಾರತದ ಪರ ತಿರುಗಿತು. ಆದರೆ ಮಂದ ಬೆಳಕಿನಿಂದಾಗಿ ಅಂಪೈರ್ ಗಳು ಪಂದ್ಯವನ್ನು ಬೇಗ ನಿಲ್ಲಿಸಿದ್ದರಿಂದ ಮೂರೇ ವಿಕೆಟ್ ಗಳಿಂದ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು.

ಮಳೆಯ ಕಾರಣದಿಂದಾಗಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗಳಿಗೆ ಆಲ್ ಔಟ್ ಆಯಿತು. ನಂತರ ಇನ್ನಿಂಗ್ಸ್ ಪ್ರಾರಂಭಿಸಿದ ಶ್ರೀಲಂಕಾ 294 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ 122 ರನ್ ಗಳ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 352 ರನ್ ಪೇರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಶ್ರೀಲಂಕಾಗೆ 26.3 ಓವರ್ ಗಳಲ್ಲಿ 231 ರನ್ ಟಾರ್ಗೆಟ್ ನೀಡಲಾಗಿತ್ತು.

ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ 104 ರನ್ ಗಳಿಸಿದರು. ಶಿಖರ್ ಧವನ್ 94, ಕೆಎಲ್ ರಾಹುಲ್ 79 ರನ್ ಗಳಿಸಿದ್ದಾರೆ.

ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಲಂಕಾದ ಆರಂಭಿಕರು ವೈಫಲ್ಯ ಕಂಡದರು. ಈ ವೇಳೆ ಚಾಂಡಿಮಲ್ 20, ಡಿಕ್ವೆಲ್ಲಾ 27 ರನ್ ಗಳಿಸಿ ತಂಡ ಸೋಲಿನ ಸುಳಿಯಿಂದ ಪಾರಾಗಲು ನೆರವಾದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಶೋಭಾ ’ವಿದ್ಯುತ್ ಖರೀದಿ ಹಗರಣ’ ಇಂದು ವರದಿ ಮಂಡನೆ:
http://bit.ly/2zWc6DW
►►ಇಂದಿರಾ ಕ್ಯಾಂಟೀನ್‌ಗೆ ಬಿಬಿಸಿ ಭಾರೀ ಶ್ಲಾಘನೆ. 'ಅಮ್ಮ’ ಕ್ಯಾಂಟೀನ್‌ಗಿಂತ ರುಚಿ ಇದೆಯಂತೆ ಆಹಾರ: http://bit.ly/2jK6pD9
►►ಉಡುಪಿ ಬಿ. ಆರ್. ಶೆಟ್ಟರ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ. ಉಸ್ತುವಾರಿ ಸಚಿವರಿಗೂ ಅನುಮಾನ ಉಂಟಂತೆ?: http://bit.ly/2hBU3sq
►►’ಪದ್ಮಾವತಿ’ ಬಿಡುಗಡೆ ಮುಂದೂಡಿಕೆ. ನಿರ್ಮಾಪಕರ ನಿರ್ಧಾರ: http://bit.ly/2ix7dI4
►►ಮಧ್ವರಾಜ್‌ ನೀನು ಬಿಜೆಪಿ ಸೇರುತ್ತೀಯಾ? ಮಾಧ್ಯಮದೆದುರೇ ಪ್ರಮೋದ್‌ಗೆ ಸಿದ್ದರಾಮಯ್ಯ ಪ್ರಶ್ನೆ: http://bit.ly/2iyFlmI
►►ಲಿಂಗಾಯತರಿಗೆ ಮೋಸ ಮಾಡಿದರೆ ವಿಧಾನಸಭೆಯಿಂದ ಆಚೆ ಹಾಕ್ತಾರಂತೆ ಚೇತನ್! http://bit.ly/2zSKgIX
►►ಹೆಂಡತಿ ನೋಡಿಕೊಳ್ಳಲು ಆಗದವರಿಂದ ಇನ್ನೊಬ್ಬರ ಸಿ.ಡಿ: ಮೋದಿ ಕುರಿತು ಹಾರ್ದಿಕ್ : http://bit.ly/2zeXK2j
►►ಖಾಸಗಿ ವೈದ್ಯರ ಮುಷ್ಕರ: ರಾಣೆ ಬೆನ್ನೂರಿನಲ್ಲಿ ಕುಂದಾಪುರದ ಹಸುಳೆ ಮೃತ್ಯು: http://bit.ly/2A9wORA
►►ಖಾಸಗಿ ವೈದ್ಯರ ಜೊತೆ ಸಂಧಾನ ಯಶಸ್ವಿ. ಮುಷ್ಕರ ಅಂತ್ಯ: http://bit.ly/2j3MsDh
►►ಲಾರಿ-ಸ್ಕೂಟಿ ಅಪಘಾತ: ಮಹಿಳಾ ಪೇದೆ ಸಾವು: http://bit.ly/2zaosJo

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ