ಮೈಸೂರಿನಲ್ಲಿ ಅಪಘಾತ. ಮಂಗಳೂರು ಉಳ್ಳಾಲದ ಒಂದೇ ಕುಟುಂಬದ ಮೂವರ ದುರ್ಮರಣ

ಕರಾವಳಿ ಕರ್ನಾಟಕ ವರದಿ

ಮೈಸೂರು:
  ಮೈಸೂರು ಸಮೀಪದ ಹುಣಸೂರು ಕೆಲಗಟ್ಟೆ ಅಂಬಲ್ಲಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಉಳ್ಳಾಲದ ಒಂದೇ ಕುಟುಂಬದ ಮೂವರು ದಾರುಣ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 14 ಮಂದಿ ಗಾಯಗೊಂಡಿದ್ದಾರೆ.

ಮೃತರನ್ನು ತೊಕ್ಕೊಟ್ಟು ನಿವಾಸಿ ಹಮೀದ್ (45) ಅವರ ಪುತ್ರ ಹಕೀಬ್ (12) ಮತ್ತು ಮೊಹಮ್ಮದ್ ಇಕ್ಬಾಲ್ (43) ಎಂದು ಗುರುತಿಸಲಾಗಿದೆ.

ಹಮೀದ್ ಕುಟುಂಬ ಸದಸ್ಯರ ಜೊತೆ ಊಟಿಗೆ ಪ್ರವಾಸ ಹೊರಟಿದ್ದರು. ಭಾನುವಾರ ರಾತ್ರಿ ಮಂಗಳೂರಿನಿಂದ ಮಿನಿಬಸ್‌ನಲ್ಲಿ ಹದಿನೇಳು ಜನರು ಪ್ರವಾಸ ಹೊರಟಿದ್ದರು.

ಇಂದು ನಸುಕಿನ ಜಾವ ಮಿನಿಬಸ್ ಮೈಸೂರು-ಹುಣಸೂರು ನಡುವಿನ ಕೆಲಗಟ್ಟೆ ಸಮೀಪ ಹಿಂದಿನಿಂದ ಸರಕು ಲಾರಿಗೆ ಅತಿವೇಗದಲ್ಲಿ ಢಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಿನಿಬಸ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಿಂದಿನ ಸೀಟ್‌ಗಳಲ್ಲಿ ಆಸೀನರಾಗಿದ್ದ ಇತರ 14 ಮಂದಿ ಗಾಯಗೊಂದಿದ್ದು ಅವರನ್ನೆಲ್ಲ ಆಸ್ಪತ್ರೆಗೆ ಸೇರಿಸಲಾಗಿದೆ.

ನಸುಕಿನ ಜಾವದಲ್ಲಿ ಈ ಅಪಘಾತ ಸಂಭವಿಸಿದ ಕಾರಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹರಸಾಹಸಪಡಬೇಕಾಯಿತು. ಮೃತದೇಹಗಳನ್ನು ಹೊರತೆಗೆಯಲು ಸ್ಥಳೀಯರು ಸಹಕರಿಸಿದರು.

ಮೃತದೇಹಗಳನ್ನು ಮೈಸೂರಿನ ಕೆ.ಆರ್.ಎಚ್ ಶವಾಗಾರದಲ್ಲಿ ಇರಿಸಲಾಗಿದ್ದು ಮಂಗಳೂರಿನಿಂದ ಹಮೀದ್ ಕುಟುಂಬದ ನಿಕಟವರ್ತಿಗಳು ಮೈಸೂರಿನತ್ತ ಧಾವಿಸಿದ್ದಾರೆ.


ಇಂದು ಹೆಚ್ಚು ಓದಿದ ಸುದ್ದಿಗಳು
►►ಪ್ರದ್ಯುಮ್ನ ಹತ್ಯೆ ಪ್ರಕರಣಕ್ಕೆ ಮತ್ತೆ ತಿರುವು. ಕೊಲೆಗಾರ ನಾನಲ್ಲ ಎಂದ ಬಂಧಿತ ವಿದ್ಯಾರ್ಥಿ!
http://bit.ly/2zz0uHg
►►ರಾಜಾರಾಂ ತಲ್ಲೂರು ಅವರ ’ನುಣ್ಣನ್ನಬೆಟ್ಟ’ಕ್ಕೆ 'ಅಮ್ಮ' ಪ್ರಶಸ್ತಿ: http://bit.ly/2iWnLbA
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ: http://bit.ly/2AEusqZ
►►ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು: http://bit.ly/2jnx88p
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ: http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm   ►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ: http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe

Related Tags: Myssore Accident, Ullala Family, 3 Dead
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ