ಪ್ರದ್ಯುಮ್ನ ಹತ್ಯೆ ಪ್ರಕರಣಕ್ಕೆ ಮತ್ತೆ ತಿರುವು. ಕೊಲೆಗಾರ ನಾನಲ್ಲ ಎಂದ ವಿದ್ಯಾರ್ಥಿ!

ಕರಾವಳಿ ಕರ್ನಾಟಕ ವರದಿ

ಗುರುಗ್ರಾಮ:
ರಾಯನ್ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಬಂಧಿಸಿದ್ದ ವಿದ್ಯಾರ್ಥಿ ತನ್ನ ಹೇಳಿಕೆಯನ್ನು ಬದಲಾಯಿಸಿದ್ದಾನೆ.

ಕೊಲೆ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ನನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಜಿಲ್ಲಾ ಮಕ್ಕಳ ಹಿತರಕ್ಷಣಾ ಸಮಿತಿ ಮತ್ತು ಸಿಬಿಐ ಅಧಿಕಾರಿಗಳ ಮುಂದೆ ಆತ ಹೇಳಿಕೆ ನೀಡಿದ್ದು ಪ್ರಕರಣ ಇನ್ನಷ್ಟು ಗೋಜಲಾಗಿದೆ.

ಕಳೆದ ವಾರ ಇದೇ ಶಾಲೆಯ ಹನ್ನೊಂದನೆಯ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ್ದ ಸಿಬಿಐ ಆತನೇ ಪರೀಕ್ಷೆ ಮುಂದೂಡುವ ಉದ್ದೇಶದಿಂದ ಕೊಲೆ ಮಾಡಿದ್ದಾನೆ ಎಂದು ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು.

ಪ್ರದ್ಯುಮ್ನ ಠಾಕೂರ್ ನನ್ನು ಹತ್ಯೆ ಮಾಡಿರುವುದಾಗಿ ನ್ಯಾಯಾಲಯದ ಮುಂದೆನೀಡಿದ್ದ ಹೇಳಿಕೆಯನ್ನು ಈಗ ಬಾಲಾಪರಾಧಿ ವಿದ್ಯಾರ್ಥಿ ಹಿಂಪಡೆದಿದ್ದು ಸಿಬಿಐ ತನಿಖೆಗೆ ಹಿನ್ನಡೆ ಉಂಟು ಮಾಡಿದೆ.

ಸಿಬಿಐ ಸೂಕ್ತವಾದ ಸಾಕ್ಷಿಗಳನ್ನು ಒದಗಿಸುವ ತನಕ ನ್ಯಾಯಾಲಯ ಬಾಲಾಪರಾಧಿಯ ಹೇಳಿಕೆಯನ್ನು ಪರಿಗಣನೆ ಮಾಡುವುದಿಲ್ಲ.

ಸೆಪ್ಟೆಂಬರ್ 8ರಂದು ಬೆಳಗ್ಗೆ ಎಂಟು ಗಂಟೆಗೆ ಶಾಲೆಗೆ ಹೋದೆ. ಸ್ನೇಹಿತನನ್ನು ಭೇಟಿ ಮಾಡಿ ನಂತರ, ಸಂಗೀತ ಶಿಕ್ಷಕರನ್ನು ಭೇಟಿಯಾಗಲು ಹೋದೆ. ಶಿಕ್ಷಕರು ಅಲ್ಲಿ ಇಲ್ಲದ ಕಾರಣ ವಾಶ್ ರೂಂಗೆ ಹೋದೆ. ಅಲ್ಲಿ ರಕ್ತ ಮತ್ತು ಮೃತ ದೇಹ ನೋಡಿ ಓಡಿಬಂದೆ ಎಂದು ಈಗ ವಿದ್ಯಾರ್ಥಿ ಹೊಸ ಹೇಳಿಕೆ ನೀಡಿದ್ದಾನೆ.
ಸೆ.8ರಂದು 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮ್ನ ಠಾಕೂರ್ ಮೃತದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿತ್ತು. ಮೊದಲು ಈ ಕೊಲೆ ಪ್ರಕರಣದ ತನಿಖೆಗೆ ಹರ್ಯಾಣ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ನಂತರ ತನಿಖೆ ಸಿಬಿಐಗೆ ಹಸ್ತಾಂತರವಾಗಿತ್ತು.

ಇದನ್ನೂ ಓದಿ:
►►ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ತಿರುವು, 11ನೇ ತರಗತಿ ವಿದ್ಯಾರ್ಥಿ ಬಂಧನ:
http://bit.ly/2hl8g0q
►►ಹಸ್ತಮೈಥುನ ಮಾಡಿದ್ದು ನೋಡಿದ. ಅದಕ್ಕೆ ಕೊಂದೆ: ಶಾಲಾ ಬಾಲಕನ ಕೊಲೆಗೆ ಹೊಸ ಟ್ವಿಸ್ಟ್: http://bit.ly/2xzJJeB
►►ಕತ್ತು ಸೀಳಿ ಬಾಲಕನ ಬರ್ಬರ ಕೊಲೆ: ಆರೋಪಿ ಬಸ್ ಕಂಡಕ್ಟರ್ ಹೇಳಿದ್ದೇನು: http://bit.ly/2xZpvYF
►►ಹೃದಯ ವಿದ್ರಾವಕ! ಶಾಲಾ ಶೌಚಾಲಯದಲ್ಲಿ 2ನೇ ತರಗತಿ ಬಾಲಕನ ಕತ್ತು ಸೀಳಿ ಕೊಲೆ: http://bit.ly/2wOsV2w

ಇಂದು ಹೆಚ್ಚು ಓದಿದ ಸುದ್ದಿಗಳು
►►ರಾಜಾರಾಂ ತಲ್ಲೂರು ಅವರ ’ನುಣ್ಣನ್ನಬೆಟ್ಟ’ಕ್ಕೆ 'ಅಮ್ಮ' ಪ್ರಶಸ್ತಿ:
http://bit.ly/2iWnLbA
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ: http://bit.ly/2AEusqZ
►►ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು: http://bit.ly/2jnx88p
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ: http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm   ►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ: http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ