ರಾಜಾರಾಂ ತಲ್ಲೂರು ಅವರ ’ನುಣ್ಣನ್ನಬೆಟ್ಟ’ಕ್ಕೆ 'ಅಮ್ಮ' ಪ್ರಶಸ್ತಿ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಕರಾವಳಿಯ ಹಿರಿಯ ಪತ್ರಕರ್ತ ಮತ್ತು ಅಂಕಣಕಾರ ರಾಜಾರಾಂ ತಲ್ಲೂರು ಅವರ ಅಂಕಣ ಬರಹಗಳ ಸಂಕಲನ ’ನುಣ್ಣನ್ನಬೆಟ್ಟ’ ಅಮ್ಮ ಪ್ರಶಸ್ತಿಗೆ ಪಾತ್ರವಾಗಿದೆ.  ರಾಜಾರಾಂ ಕನ್ನಡದ ಹೆಸರಾಂತ ವೆಬ್ ಮ್ಯಾಗಝೀನ್ 'ಅವಧಿ'ಯಲ್ಲಿ ಬರೆಯುತ್ತಿದ್ದ ’ನುಣ್ಣನ್ನಬೆಟ್ಟ’  ಅಂಕಣದ ಬರಹಗಳನ್ನು ಅದೇ ಹೆಸರಿನಲ್ಲಿ ಪುಸ್ತಕರೂಪದಲ್ಲಿ ಪ್ರಕಟಿಸಲಾಗಿದೆ.

ಇದಲ್ಲದೆ ಎಂ ಆರ್ ಕಮಲಾ ಅವರ ‘ಮಾರಿಬಿಡಿ’ ಕವನ ಸಂಕಲನ, ಗಿರೀಶ್ ಜಕಾಪುರೆ ಅವರ ‘ನಾಜಿ ನರಮೇಧ’ ಅನುವಾದ, ಎಚ್ ಆರ್ ಸುಜಾತಾ ಅವರ ‘ನೀಲಿ ಮೂಗಿನ ನತ್ತು’ ಪ್ರಬಂಧ ಸಂಕಲನ, ರೇಖಾ ಕಾಖಂಡಕಿ ಅವರ ಕಾದಂಬರಿ ‘ದೈವಸ್ವತ’ಕ್ಕೂ  ಪ್ರಶಸ್ತಿ ಘೋಷಿಸಲಾಗಿದೆ. ಸೇಡಂನ ಅಮ್ಮ ಪ್ರತಿಷ್ಠಾನದ `ಅಮ್ಮ ಪ್ರಶಸ್ತಿ’ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಈ ಪ್ರಶಸ್ತಿಗಳನ್ನು ಪ್ರಕಟಿಸಿದ್ದಾರೆ.
 
ಮುಂಗಾರು ದಿನ ಪತ್ರಿಕೆಯ ಮೂಲಕ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ರಾಜಾರಂ ತಲ್ಲೂರು ಅಂದಿನ ದಿನಗಳಲ್ಲಿ ತುಂಬಾ ಪ್ರಸಿದ್ಧವಾಗಿದ್ದ 'ಪಟ್ಟಾಂಗ' ಪತ್ರಿಕೆಯ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಉದಯವಾಣಿಯಲ್ಲಿ ರಾಜಾರಂ ತಲ್ಲೂರು ಅವರು ನಿರ್ವಹಿಸುತ್ತಿದ್ದ 'ಆರೋಗ್ಯ ವಾಣಿ' ಪುರವಣಿ ಅಪಾರ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರಸ್ತುತ ಉಡುಪಿಯಲ್ಲಿ ವಾಸವಾಗಿರುವ ರಾಜಾರಾಂ ತಲ್ಲೂರು ತಮ್ಮ 'ತಲ್ಲೂರು ಫ್ಯಾಮಿಲಿ ಟ್ರಸ್ಟ್' ಮೂಲಕ ಕುಂದಾಪುರ ತಾಲೂಕಿನ ತಲ್ಲೂರಿನಲ್ಲಿ ಆರಂಭಿಸಿರುವ ವಿಶೇಷಚೇತನ ಮಕ್ಕಳ ಶಾಲೆ ಸಮೇತ ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ. ಅತ್ಯಂತ ಕ್ಲಿಷ್ಟ ವಿಚಾರಗಳನ್ನೂ ಅತ್ಯಂತ ಸರಳವಾಗಿ ನಿರೂಪಿಸುವುದು ರಾಜಾರಂ ತಲ್ಲೂರು ಅವರ ಬರಹಗಳ ವೈಶಿಷ್ಟ್ಯವಾಗಿದೆ. 

ಪ್ರಶಸ್ತಿಯು ತಲಾ 5000 ರೂ. ನಗದು ಪ್ರಶಸ್ತಿ ಫಲಕವನ್ನು ಹೊಂದಿದೆ. ನವೆಂಬರ್ 26 ರಂದು ಸಂಜೆ 5.30ಕ್ಕೆ ಸೇಡಮ್‍ನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಜರುಗುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ:
http://bit.ly/2AEusqZ
►►ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು: http://bit.ly/2jnx88p
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ: http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm   ►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ: http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe

Related Tags: Nunnanna Betta, Rajaram Tallur, Amma Award, Avadhi, Column, Udupi, Pattanga
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ