ಕುಂದಾಪುರದಲ್ಲಿ ಪರಿವರ್ತನಾ ಯಾತ್ರೆ: ಬಿಜೆಪಿ ಬಣಗಳ ನಡುವೆ ಮಾರಾಮಾರಿ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ನಗರದಲ್ಲಿಂದು ನಡೆದ ಭಿಜೆಪಿಯ ಪರಿವರ್ತನಾ ಯಾತ್ರೆ ಮೂಲ ಬಿಜೆಪಿಗರು ಮತ್ತು ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಣಗಳ ನಡುವೆ ಮಾರಾಮಾರಿಯ ಸಭೆಯಾಗಿ ಪರಿವರ್ತನೆಯಾಯಿತು.

ಪರಿವರ್ತನಾ ಯಾತ್ರೆ ಘೋಷಣೆಯಾದ ದಿನದಿಂದಲೇ ಪರಸ್ಪರ ಬಲಾಬಲವನ್ನು ಪ್ರದರ್ಶಿಸಬೇಕೆಂದು ಕಾದು ಕೂತಂತಿದ್ದ ಎರಡು ಬಣಗಳು ಇಂದು ಅಕ್ಷರಶಃ ಜಟಾಪಟಿಗೆ ಇಳಿದುಬಿಟ್ಟರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ ಹಗ್ಡೆ, ಸಂಸದೆ ಶೋಭಾ ಕರಂದ್ಲಾಜೆ ಮುಂತಾದ ನಾಯಕರಿದ್ದ ಸಭೆಯಲ್ಲಿ ಕುಂದಾಪುರ ಬಿಜೆಪಿ ಮತ್ತು ಬಿಜೆಪಿಗೆ ಸೇರಲು ತುದಿಗಾಲಲ್ಲಿ ನಿಂತಿರುವ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಬೆಂಬಲಿಗರ ನಡುವಿನ ಭಿನ್ನಾಭಿಪ್ರಾಯ, ಒಳಜಗಳ ಬೀದಿಗೆ ಬಂದು ನಿಂತಿತು.

ಹಾಲಾಡಿಗೆ ಮುಕ್ತಿ ನೀಡಿ, ಬಿಜೆಪಿಗೆ ಶಕ್ತಿ ನೀಡಿ
ಬಿಜೆಪಿ ನಾಯಕರು ಮುಂದಿನ ಸಾಲಿನಲ್ಲಿ ಸಭಿಕರೊಂದಿಗೆ ಕುಳಿತಿದ್ದ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಹೊಗಳಲು ಆರಂಭಿಸುತ್ತಿದ್ದಂತೆಯೆ ಹಾಲಾಡಿ ವಿರೋಧಿಗಳು ಮತ್ತು ಮೂಲ ಬಿಜೆಪಿಯ ಕೆಲವು ಕಾರ್ಯಕರ್ತರು ಹಾಲಾಡಿ ಅವರ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದರು.

ಬಿಜೆಪಿ ಕಾರ್ಯಕರ್ತರು ತಮ್ಮ ಬಳಿ ಇದ್ದ ಪ್ಲೆಕಾರ್ಡ್‌ಗಳಲ್ಲಿ 'ಹಾಲಾಡಿಗೆ ಮುಕ್ತಿ ನೀಡಿ, ಬಿಜೆಪಿಗೆ ಶಕ್ತಿ ನೀಡಿ', 'ಹಾಲಾಡಿಗೆ ಬಿಜೆಪಿ ಅನಿವಾರ್ಯ, ಬಿಜೆಪಿಗೆ ಹಾಲಾಡಿ ಅಲ್ಲ', 'ಮನೆಯಲ್ಲಿ ಕೂರುವ ಎಂಎಲ್‌ಎ ಸಾಕು, ಕೆಲಸ ಮಾಡುವ ಎಂಎಲ್‌ಎ ಬೇಕು', 'ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು' ಎಂದು ಬರೆದಿದ್ದನ್ನು ಸಭೆಯಲ್ಲಿ ಪ್ರದರ್ಶಿಸಿದರು. ಈ ವೇಳೆ ಕೊಂಚ ಮಟ್ಟಿಗೆ ಘರ್ಷಣೆಯ ವಾತಾವರಣ ನಿರ್ಮಾಣಗೊಂಡಿತು.


ಹಾಲಾಡಿ ವಿರೋಧಿಗಳು ಬಿಜೆಪಿಗೆ ಬೇಡ ಎಂದ ಯಡಿಯೂರಪ್ಪ

ಈ ನಡುವೆ ಮಧ್ಯಪ್ರವೇಶಿಸಿದ ಮಾಜಿ ಮ್ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಾಡಿ ಅವರ ಪರವಾಗಿ ಮಾತನಾಡಿ ಹಾಲಾಡಿ ಅವರ ವಿರೋಧಿಗಳು ಪಕ್ಷಕ್ಕೆ ಬೇಕಾಗಿಲ್ಲ ಎಂದು ಖಾರವಾಗಿ ಹೇಳಿದರು. 'ಹಾಲಾಡಿ ಶ್ರೀನಿವಾಸ ಶೆಟ್ಟರು ಬಿಜೆಪಿಗೆ ಬರುವುದನ್ನು ವಿರೋಧಿಸುವ ಯಾರೇ ಆಗಲಿ ಅವರ ಮೇಲೆ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ, ಪಕ್ಶ್ಃಅಕ್ಕೆ ಗೂಂಡಾ ಸಂಸ್ಕೃತಿ ಬೇಕಾಗಿಲ್ಲ' ಎಂದು ಘೋಷಿಸಿದರು. ಹಾಲಾಡಿ ವಿರೋಧಿಗಳು ಈ ಸಭೆಯಲ್ಲಿದ್ದರೆ ಅವರು ಹೊರನಡೆಯಬಹುದು ಎಂದು ಎಚ್ಚರಿಕೆಯನ್ನೂ ಯಡಿಯೂರಪ್ಪ ಕೊಟ್ಟರು.

ತಾಂತ್ರಿಕ ಕಾರಣಗಳಿಂದ ಹಾಲಾಡಿ ಈಗ ಬಿಜೆಪಿ ಸೇರುತ್ತಿಲ್ಲ. ಆದರೆ ಜನವರಿ ವೇಳೆಗೆ ಅವರು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು. ಹಾಲಾಡಿ ಶ್ರೀನಿವಾಸ ಶೆಟ್ಟರೆ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಇದೇ ಸಂದರ್ಭದಲ್ಲಿ ಅವರು ಘೋಷಿಸಿದರು.

ಲಘು ಲಾಠಿ ಪ್ರಹಾರ
ಸಭೆ ನಡೆದ ಬಳಿಕ ಮತ್ತೆ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರು ಗುಂಪುಗಳನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.ಇದನ್ನೂ ಓದಿ
►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ: http://bit.ly/2zGfaCd
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ: http://bit.ly/2h1lSrg
►►ಶಾಸಕ ಹಾಲಾಡಿ ಕಾಂಗ್ರೆಸ್ ಪಕ್ಷಕ್ಕೆ? ಸಿಎಂ ಸಿದ್ದರಾಮಯ್ಯ ಆಹ್ವಾನ: http://bit.ly/2jxVwnr
►►ಹಾಲಾಡಿ ಬಿಜೆಪಿ ಸೇರುವುದು ಜನದ್ರೋಹ: http://bit.ly/2h1lSrg
►►ಏಕತಾ ಸಮಾವೇಶದಲ್ಲಿ ಕಾಣಿಸಿಕೊಂಡ ಹಾಲಾಡಿ. ಬಿಜೆಪಿಗೆ ಮರಳಲು ಗೆಟ್ಟಿಂಗ್ ರೆಡಿ: http://bit.ly/2gAysiA
►►ಬಿಜೆಪಿಯಲ್ಲಿ ಸ್ಪೋಟಗೊಂಡ ಅಸಮಾಧಾನ: ಹಾಲಾಡಿಗೆ ಮಂಡಿಯೂರಿದ ಬಿಜೆಪಿ ಹೈಕಮಾಂಡ್: http://bit.ly/1QSpclG

►►ಕುಂದಾಪುರ ಬಿಜೆಪಿ: ಸಂಭ್ರಮಾಚರಣೆಯಲ್ಲೂ ಬಣ ರಾಜಕೀಯ: http://bit.ly/2mm5MMn
►►ಕೋಟಿ-ಚೆನ್ನಯ? ಮುದಿಯಾನೆ? ಕುಂದಾಪುರ ಬಿಜೆಪಿ ಕಛೇರಿಗೆ ಮೊದಲ ಬಾರಿ ಜೆ.ಪಿ ಬಂದಾಗ!: http://bit.ly/2nKa1p4
►►ಹಾಲಾಡಿ, ಹೆಗ್ಡೆ ಬೇಡ ಎಂಬ ಅಧಿಕಾರ ಯಾರಿಗೂ ಇಲ್ಲ: ಶೋಭಾ: http://bit.ly/2if1x2X
►►ತೆಕ್ಕಟ್ಟೆ ಬಿಜೆಪಿ ಕಛೇರಿ ಉದ್ಘಾಟನೆಯಲ್ಲೂ ಭಿನ್ನಮತ: ಕೇಸರಿ ಶಾಲು ಮುಚ್ಚಿಕೊಂಡ ಜೆಪಿ: http://bit.ly/2ohfBw4
►►ಹಾಲಾಡಿ ಬೆಂಬಲಿಗರು ಕೇಳಿದ್ದಕ್ಕೆ ಟಿಕೆಟ್: ಕೋಟ: http://bit.ly/20yuyVZ

ಇಂದು ಹೆಚ್ಚು ಓದಿದ ಸುದ್ದಿಗಳು
►►ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು: http://bit.ly/2jnx88p
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ: http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm  
►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ: http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್:  http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw

Related Tags: BJP Parivartana Rally, Kundapur, Haladi Shrinivash Shetty, B. S. Yeddiyurappa
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ