ವಾಟ್ಸ್ಯಾಪ್‌ನಲ್ಲಿ ತ್ರಿವಳಿ ತಲಾಖ್. ಸಂತ್ರಸ್ತ ಮಹಿಳೆಯಿಂದ ಆತ್ಮಹತ್ಯೆ ಬೆದರಿಕೆ
ಅಲೀಘಡ್ ಮುಸ್ಲಿಂ ವಿವಿಯ ಪ್ರಾಧ್ಯಾಪಕರಿಂದ ವಾಟ್ಸ್ಯಾಪ್ ಮೂಲಕ ತ್ರಿವಳಿ ತಲಾಖ್. ಸಂತ್ರಸ್ತ ಮಹಿಳೆಯಿಂದ ನ್ಯಾಯಕ್ಕಾಗಿ ಪ್ರಧಾನಿಗೆ ಮೊರೆ. ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ

ಕರಾವಳಿ ಕರ್ನಾಟಕ ವರದಿ

ಅಲೀಘಡ್
: ತ್ರಿವಳಿ ತಲಾಖ್ ಪದ್ದತಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಹೊರತಾಗಿಯೂ ಅಲಿಘಡ್ ಮುಸ್ಲಿಮ್ ವಿವಿಯ ಪ್ರೊಫೆಸರ್ ಓರ್ವರು ತಮ್ಮ ಪತ್ನಿಗೆ ವಾಟ್ಸ್ಯಾಪ್ ಮೂಲಕ ತಲಾಖ್ ನೀಡಿದ್ದಾರೆ.

ಅಲಿಘಡ್ ಮುಸ್ಲಿಮ್ ವಿವಿಯ ಪ್ರೊಫೆಸರ್ ಖಾಲಿದ್ ಬಿನ್ ಯೂಸುಫ್ ಖಾನ್ ತಮ್ಮ ಪತ್ನಿ ಯಾಸ್ಮೀನ್ ಖಾಲಿದ್ ಅವರಿಗೆ ಈ ರೀತಿ ತಲಾಖ್ ನೀಡಿದ್ದಾರೆ.

ವಾಟ್ಸ್ಯಾಪ್ ಮೂಲಕ ಗಂಡನಿಂದ ತಲಾಖ್ ಸಂದೇಶ ಪಡೆದಿರುವ ಯಾಸ್ಮೀನ್ ಖಾಲಿದ್ ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಡಿಸೆಂಬರ್ 11ರ ಒಳಗೆ ನನಗೆ ನ್ಯಾಯ ಸಿಗದಿದ್ದರೆ ಅಲಿಘಡ್ ಮುಸ್ಲಿಮ್ ವಿವಿಯ ಉಪಕುಲಪತಿಗಳ ನಿವಾಸದ ಎದುರಿಗೆ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಒಡ್ಡಿದ್ದಾರೆ.

ಕಳೆದ 27 ವರ್ಷಗಳಿಂದ ಅಲಿಘಡ್ ಮುಸ್ಲಿಮ್ ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಖಾಲಿದ್ ತನ್ನ ಪತ್ನಿ ತನ್ನ ಮೇಲೆ ಕಳೆದ ಎರಡು ದಶಕಗಳ ಕಾಲದಿಂದ ದೌರ್ಜನ್ಯ ನಡೆಸುತ್ತಿದ್ದಾರೆ, ಆಕೆ ಮದುವೆಯ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳ ಬಗ್ಗೆಯೂ ನನಗೆ ಸುಳ್ಳು ಹೇಳಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.

ನಾನು ನನ್ನ ಪತ್ನಿಗೆ ಮೂರನೆಯ ತಲಾಖ್ ಅನ್ನೂ ನೀಡಲಿದ್ದು ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಖಾಲಿದ್ ಹೇಳಿದ್ದಾರೆ.

ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ತ್ರಿವಳಿ ತಲಾಖ್ ಪದ್ದತಿ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಹೇಳಿದ್ದು ತ್ರಿವಳಿ ತಲಾಖ್ ಅನ್ನು ರದ್ದು ಮಾಡಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು:
http://bit.ly/2jnx88p
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ: http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm  
►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ:
http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್:  http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw

Related Tags: Triple Talaq, Whatsapp, Supreme Court Judgement, Khalid, Yasmeen, Alighar Muslim University
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ