ಇರಾಕ್-ಇರಾನ್: 7.3 ತೀವ್ರತೆಯ ಭೂಕಂಪ, 129 ಸಾವು

ಕರಾವಳಿ ಕರ್ನಾಟಕ ವರದಿ

ಇರಾಕ್ :
ಇರಾಕ್ - ಇರಾನ್ ಗಡಿಪ್ರದೇಶದಲ್ಲಿ ರಾತ್ರಿ ಸ್ಥಳೀಯ ಸಮಯ 9.30ಗೆ ಭಾರಿ ಭೂಕಂಪ ಸಂಭವಿಸಿದ್ದು 129 ಮಂದಿ ಸಾವಿಗೀಡಾಗಿರುವ ಕಳವಳಕಾರಿ ಸಂಗತಿ ವರದಿಯಾಗಿದೆ. ಇರಾನ್ ಮಾಧ್ಯಮ ಸಂಸ್ಥೆ IRNA ಪ್ರಕಾರ ಈ ಭೂಕಂಪದಲ್ಲಿ ‘ಖಸ್ರ್-ಎ-ಶೆರೀನ್’ ನಗರದಲ್ಲಿ  6 ಮಂದಿ ಸಾವಿಗೀಡಾಗಿದ್ದಾರೆ. ಎಂಟು ಹಳ್ಳಿಗಳಿಗೆ ವ್ಯಾಪಕ ಹಾನಿಯಾಗಿದೆ.

ವಿದ್ಯುತ್ ಮತ್ತು ನೀರಿನ ಸಂಪರ್ಕ ಕಡಿದುಹೋಗಿದೆ ಎಂದು ಘರ್ಸ್ ಇ ಶಿರಿನ್ ಗವರ್ನರ್ ಫರಾಮರ್ಜ್ ಅಕ್ಬರಿ ಹೇಳಿದ್ದಾರೆ. ಹದಿನಾಲ್ಕು ಪ್ರಾಂತ್ಯಗಳಲ್ಲಿ ಭೂಕಂಪದ ದುಷ್ಪರಿಣಾಮಗಳಾಗಿವೆ. ಒಟ್ಟು ಹನ್ನೆರಡಕ್ಕೂ ಅಧಿಕ ಮಂದಿಗೆ ಸಾವಿಗೀಡಾಗಿದ್ದಾರೆ.

ಇರಾಕ್ ಅಧಿಕಾರಿಗಳ ಪ್ರಕಾರ ಕುರ್ದಿಸ್ತಾನ್ ಭಾಗದಲ್ಲಿ ಓರ್ವ ಮೃತ ಪಟ್ಟಿದ್ದು, ಪ್ರಮುಖ ನಗರ ಸುಲೈಮೇನಿಯಾದ ಎಪ್ಪತ್ತೈದು ಕಿ.ಮೀ ಹೊರಗೆ ದರ್ಬಂದಿಖಾನ್ ಪ್ರದೇಶದಲ್ಲಿ 50 ಮಂದಿಗೆ ಗಾಯಗಳಾಗಿವೆ.

ರಿಕ್ಟರ್ ಮಾಪನದಲ್ಲಿ  7.3 ತೀವ್ರತೆಯ ಭೂಕಂಪ ಸಂಭವಿಸಿದೆ. ಟರ್ಕಿ, ಕುವೈಟ್  ಗಳಲ್ಲಿ ಭೂಕಂಪದ ಅನುಭವ ಆಗಿದೆ.

ಇರಾಕ್ ನಗರ ಹಲಾಭಾಜ್ ನಿಂದ ಮುವತ್ತೆರಡು ಕಿ.ಮೀ ಹೊರಗೆ ಭೂಕಂಪನದ ಕೇಂದ್ರ ಬಿಂದು ಇದ್ದು, ಇರಾನ್ ಗಡಿ ಭಾಗದಲ್ಲಿ 7.2 ತೀವ್ರತೆಯ ಭೂಕಂಪನ  ಸಂಭವಿಸಿದೆ. ಇರಾನ್ ಭೂಕಂಪನಶಾಸ್ತ್ರ ಕೇಂದ್ರ ಪ್ರಕಾರ  ಅಜ್ಗಲೇಹ್ ಬಳಿ 7.3 ತೀವ್ರತೆಯ ಭೂಕಂಪನವುಂಟಾಗಿದೆ.
ಇರಾಕ್ ರಾಜಧಾನಿ ಬಾಗ್ದಾದ್ ಸೇರಿದಂತೆ ಇರಾಕ್ ನಲ್ಲಿ ಭೂಕಂಪ ವ್ಯಾಪಕವಾಗಿತ್ತು ಎಂದು ಅಮೇರಿಕದ ಜಿಯೋಲೊಜಿಕಲ್ ಸರ್ವೇ ವರದಿ ತಿಳಿಸಿದೆ.

ಕುವೈಟ್: ಮನೆ ಬಿಟ್ಟು ಓಡಿದ ಜನರು
ಕುವೈಟ್ ಮತ್ತು ದುಬೈಗಳಲ್ಲಿ ಭೂಕಂಪದ ಪರಿಣಾಮ ಕಟ್ಟಡಗಳು ತರಗೆಲೆಯಂತೆ ಅಲುಗಾಡಿದ ಅನುಭವವಾಗಿದ್ದು, ಕುವೈಟ್ ನಲ್ಲಿ ಜನರು ತಾವು ನೆಲೆಸಿದ್ದ ಕಟ್ಟಡಗಳಿಂದ ಹೊರಗೆ ಓಡಿದರು. ಈ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದವು. ಕುವೈಟ್ ನಲ್ಲಿ ನಾಲ್ಕರಿಂದ ಐದು ಡಿಗ್ರಿ ತೀವೃತೆಯ ಭೂಕಂಪ ಜರುಗಿದೆ ಎಂದು ಸಂಬಂಧಿತ ಕುವೈಟ್ ರಾಷ್ಟ್ರೀಯ ಇಲಾಖೆ ತಿಳಿಸಿದೆ.
ಅಗ್ನಿಶಾಮಕ ದಳಕ್ಕೆ ನಲವತ್ತಕ್ಕೂ ಅಧಿಕ ಮಂದಿ ಕರೆ ಮಾಡಿ ತಾವು ಭೂಕಂಪನದ ಭಯಾನಕ ಅನುಭವಕ್ಕೆ ಒಳಗಾಗಿದ್ದೇವೆ ಎಂದು ಜನರು ತಿಳಿಸಿದ್ದರು. ಆದರೆ ಕುವೈಟ್ ನಲ್ಲಿ ಭೂಕಂಪನದ ಪರಿಣಾಮ ಯಾವುದೇ ಅನಾಹುತಗಳಾಗಿಲ್ಲ. ಭೂಕಂಪನದಿಂದ ಟ್ರಾಫಿಕ್ ಸಮಸ್ಯೆಗಳೂ ಆಗಿಲ್ಲ. ಆದರೆ ಭೂಕಂಪನದ ಅನುಭವದಿಂದ ಕುವೈಟ್ ಜನರು ಭಯಭೀತರಾಗಿ ನಿದ್ರೆ ಇಲ್ಲದ ರಾತ್ರಿ ಕಳೆದಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಪು ಬೀಚ್‌ನಲ್ಲಿ ಆರಂಭಗೊಂಡಿದೆ ಸ್ಕೂಬಾ ಡೈವಿಂಗ್ ಸಾಹಸ ಜಲಕ್ರೀಡೆ:
http://bit.ly/2zA9BHf
►►ಮೂಡುಬಿದಿರೆ ಕಂಬಳದಲ್ಲಿ ಪೆಟಾದಿಂದ ಹಿಂಸೆಯ ಆರೋಪ: http://bit.ly/2hoFkRm  
►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ:
http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್:  http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw

Related Tags: Dozens killed, 7.3 magnitude earthquake, Iran-Iraq border region, earth tremor kuwait, Kuwait Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ