ಪೆಟಾದಿಂದ ತಕರಾರು: ಮೂಡುಬಿದಿರೆ ಕಂಬಳದಲ್ಲಿ ಹಿಂಸೆಯ ಆರೋಪ. ವಿಡಿಯೊ ಸುಪ್ರೀಂ‌ಗೆ

ಕರಾವಳಿ ಕರ್ನಾಟಕ ವರದಿ 
 
ಮಂಗಳೂರು:
ಮೂಡುಬಿದಿರೆಯಲ್ಲಿ ಶನಿವಾರ ನಡೆದ ಕೋಟಿ– ಚೆನ್ನಯ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗಿದ್ದು ಈ ಕುರಿತ ವಿಡಿಯೊವನ್ನು  ಸುಪ್ರೀಂಕೋರ್ಟ್‌ಗೆ ಸಲ್ಲಿಸುವುದಾಗಿ ಪೆಟಾ ಹೇಳಿದೆ.
ಪ್ರಾಣಿ ದಯಾ ಸಂಘಟನೆ (ಪೆಟಾ) ಕಾರ್ಯಕರ್ತರು ಕಂಬಳಕ್ಕೆ ಭೇಟಿ ನೀಡಿ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಕಂಬಳದಲ್ಲಿ ನಡೆದ ಹಿಂಸೆಗೆ ಸಂಬಂಧಿಸಿದ ವಿಡಿಯೊ ಮತ್ತು ಛಾಯಾಚಿತ್ರಗಳನ್ನು ಸೋಮವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸುವುದಾಗಿ ಹೇಳಿದೆ.

ರಕ್ತ ಸುರಿಯುತ್ತಿದ್ದ ಗಾಯಗಳೊಂದಿಗೆ ಕೋಣಗಳನ್ನು ಕಂಬಳದಲ್ಲಿ ಓಡಿಸಲಾಗಿದೆ, ಅವುಗಳನ್ನು ಕಂಬಳದ ಅಂಗಣಕ್ಕೆ ತರುವ ಮುನ್ನವೇ ತೀವ್ರತರವಾಗಿ ಹಿಂಸಿಸಲಾಗಿತ್ತು ಎಂಬುದನ್ನು ಇದು ಖಚಿತಪಡಿಸುತ್ತದೆ ಎಂದು ಸಂಘಟನೆ ಆರೋಪಿಸಿದೆ. 

ಕಂಬಳದಲ್ಲಿ ಕೋಣಗಳನ್ನು ಕ್ರೂರವಾಗಿ ಹಿಂಸಿಸಲಾಗಿದೆ. ಪ್ರಾಣಿಗಳ ರಕ್ಷಣೆಗೆ ಯಾವ ಕ್ರಮಗಳನ್ನೂ ಅಲ್ಲಿ ಕೈಗೊಂಡಿರಲಿಲ್ಲ. ಕೋಣಗಳ ಓಟದ ಮೇಲೆ ಜೂಜು ಕೂಡ ನಡೆದಿದೆ. ಕೋಣಗಳಿಗೆ ಸುಪ್ರೀಂಕೋರ್ಟ್‌ನ ರಕ್ಷಣೆಯ ಅಗತ್ಯವಿದೆ ಎಂದು ಪೆಟಾ ಆರೋಪಿಸಿದೆ.

ಕಂಬಳದಲ್ಲಿ ಪಾಲ್ಗೊಂಡಿದ್ದ 100ಕ್ಕೂ ಹೆಚ್ಚು ಕೋಣಗಳನ್ನು ಹಿಂಸಿಸಿರುವುದನ್ನು ದೃಢಪಡಿಸುವ ಸಾಕ್ಷ್ಯಗಳು ನಮ್ಮ ಬಳಿ ಇವೆ. ಈ ಎಲ್ಲ ದಾಖಲೆಗಳನ್ನೂ ನ್ಯಾಯಾಲಯದ ಮುಂದಿಟ್ಟು, ಕರ್ನಾಟಕ ಸರ್ಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ (ತಿದ್ದುಪಡಿ ಮಸೂದೆ)–2017 ಅನ್ನು ರದ್ದುಗೊಳಿಸುವಂತೆ ಮನವಿ ಮಾಡುತ್ತೇವೆ ಎಂದು ಪೆಟಾ ಪಬ್ಲಿಕ್‌ ಪಾಲಿಸಿ ವಿಭಾಗದ ಮುಖ್ಯಸ್ಥ ನಿಕುಂಜ್‌ ಶರ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು 100 ಕೋಣಗಳನ್ನು ಬಲವಂತವಾಗಿ ಕಂಬಳದಲ್ಲಿ ಓಡಿಸುವ ಉದ್ದೇಶದಿಂದ ಕೋಲಿನಿಂದ ಹೊಡೆದು, ತಿವಿಯಲಾಗಿದೆ. ಬಾಲವನ್ನು ತಿರುವಿ ಹಿಂಸಿಸಲಾಗಿದೆ. ಹಲವು ಕೋಣಗಳ ತೊಡೆ ಭಾಗದಲ್ಲಿ ಕೆಂಪಾದ ಬಾಸುಂಡೆಗಳಿದ್ದವು ಎಂದೂ ಪೆಟಾ ಆರೋಪ ಮಾಡಿದೆ.

ಕರ್ನಾಟಕ ಸರ್ಕಾರ ಪ್ರಾಣಿ ಹಿಂಸೆ ತಡೆ ಕಾಯ್ದೆ (ತಿದ್ದುಪಡಿ ಮಸೂದೆ)–2017ರ ಮೂಲಕ ಕಂಬಳಕ್ಕೆ ಅವಕಾಶ ಕಲ್ಪಿಸಿದೆ. ಇದನ್ನು ಪ್ರಶ್ನಿಸಿ ಪೆಟಾ ಸಲ್ಲಿಸಿರುವ ಅರ್ಜಿಯನ್ನು ನವೆಂಬರ್‌ 6ರಂದು ಸುಪ್ರೀಂಕೋರ್ಟ್‌ ವಿಚಾರಣೆಗೆ ಸ್ವೀಕರಿಸಿದೆ. ಕಂಬಳಕ್ಕೆ ಅವಕಾಶ ಕಲ್ಪಿಸಿರುವ ಸುಗ್ರೀವಾಜ್ಞೆಯನ್ನು ರದ್ದುಗೊಳಿಸುವಂತೆ ಪೆಟಾ ಈ ಅರ್ಜಿಯಲ್ಲಿ ಕೋರಿದೆ. ಸೋಮವಾರ ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ
►►ಕಂಬಳ ಮತ್ತು ಜಾತಿ ವಿನಾಶ:
http://bit.ly/2jQvQ1L

ಇಂದು ಹೆಚ್ಚು ಓದಿದ ಸುದ್ದಿಗಳು
►►ಕುಂದಾಪುರ: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲ, ಹಾಲಾಡಿ ಬಣದ ಶಕ್ತಿ ಪ್ರದರ್ಶನ ಜಾತ್ರೆ:
http://bit.ly/2zGfaCd
►►ಚಿತ್ರಕೂಟ್ ವಿಧಾನಸಭಾ ಚುನಾವಣೆ. ಕಾಂಗ್ರೆಸ್‌ಗೆ ಭರ್ಜರಿ ಜಯ. ಬಿಜೆಪಿಗೆ ಆಘಾತ: http://bit.ly/2hrSaC3
►►ಮಾಧ್ಯಮಗಳ ಸೋಲು ಸರ್ವಾಧಿಕಾರದ ಗೆಲವು: http://bit.ly/2ADmiza
►►'ಗೋ ರಕ್ಷಕ' ದಳದಿಂದ ಮತ್ತೋರ್ವ ವ್ಯಾಪಾರಿಯ ಕಗ್ಗೊಲೆ: http://bit.ly/2AzSFOe
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್:  http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw

Related Tags: Kambala, PETA, Koti-Chennayya Kambala, Moodabidire, Supreme Court
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ