ದನದ ವ್ಯಾಪಾರಿಯ ಗುಂಡಿಕ್ಕಿ ಕೊಲೆಗೈದು ರೈಲ್ವೇ ಹಳಿ ಮೇಲೆ ಎಸೆದ 'ಗೋ ರಕ್ಷಕ' ದಳ
ದನ ದಾಗಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿದ ''ಗೋ ರಕ್ಷಕ'' ದಳದ ಹಂತಕರು ಇದೊಂದು ಅಪಘಾತವೆಂದು ಬಿಂಬಿಸಲು ಶವವನ್ನು ರೈಲ್ವೇ ಹಳಿಯ ಮೇಲೆ ಎಸೆದು ಪರಾರಿಯಾಗಿದ್ದಾರೆ

ಕರಾವಳಿ ಕರ್ನಾಟಕ ವರದಿ

ಅಲ್ವರ್ (ರಾಜಸ್ಥಾನ):
ದನ ದಾಗಾಟ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯೋರ್ವನನ್ನು ಗುಂಡಿಕ್ಕಿ ಕೊಲೆ ಮಾಡಿದ ಗೋರಕ್ಷಕ ದಳದ ಕಟುಕರು ಬಳಿಕ ದೇಹವನ್ನು ರೈಲ್ವೇ ಹಳಿಯ ಮೇಲೆ ಎಸೆದು ಪರಾರಿಯಾಗಿದೆ.

ಈ ದಾರುಣ ಘಟನೆ ರಾಜಸ್ಥಾನದ ಅಲ್ವರ್ ಜಿಲ್ಲೆಯ ಗೋವಿಂಧ್ ಗಡ್ ಸಮೀಪದ ಫಹಾರಿ ಎಂಬ ಹಳ್ಳಿಯಲ್ಲಿ ನಡೆದಿದೆ.

ಹರ್ಯಾಣದ ಮೇವಟ್‌ನಿಂದ ರಾಜಸ್ಥಾನದ ಭರತ್‌ಪುರಕ್ಕೆ ದನಗಳನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಉಮ್ಮರ್ (43) ಮತ್ತು ಇತರ ಇಬ್ಬರನ್ನು ಅಡ್ಡಗಟ್ಟಿದ ಗೋರಕ್ಷಕ ದಳದ ಸದಸ್ಯರು ಮೂವರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಇತರ ಇಬ್ಬರು ತಪ್ಪಿಸಿಕೊಂಡು ಹೋದರೂ ಉಮ್ಮರ್ ಅವರಿಗೆ ಗುಂಡಿಕ್ಕಿ ಕೊಲೆಗೈಯ್ಯಲಾಗಿದೆ. ಬಳಿಕ ಉಮ್ಮರ್ ಶವವನ್ನು ರೈಲ್ವೇ ಹಳಿಯ ಮೇಲೆ ಎಸೆದು ಹೋಗಲಾಗಿದ್ದು ಇದು ರೈಲೆಗೆ ಸಿಕ್ಕು ಸತ್ತ ಪ್ರಕರಣ ಎಂದು ಬಿಂಬಿಸಲು ಯತ್ನ ನಡೆದಿತ್ತು.

ಪೊಲಿಸರಿಗೆ ರೈಲ್ವೆ ಹಳಿಯ ಮೇಲೆ ಶವ ದೊರೆತಿದ್ದು ಪೊಲೀಸರು ಈ ವಿಷಯದಲ್ಲಿ ಭಾರಿ ಗೋಪ್ಯತೆ ಕಾಪಾಡಿದ್ದರು. ಆದರೆ ಕುಟುಂಬಿಕರ ಒತ್ತಡದ ಬಳಿಕವಷ್ಟೆ ರಾಜಸ್ಥಾನ ಪೊಲೀಸರು ಉಮ್ಮರ್ ಸತ್ತಿದ್ದು ಗುಂಡೇಟಿನಿಂದ ಎಂದು ಖಚಿಪತಡಿಸಿದ್ದಾರೆ. ಆದರೆ ಕೊಲೆ ನಡೆದು ಎರಡು ದಿನವಾದರೂ ಪೊಲೀಸರು ಎಫ್‌ಐಆರ್ ದಾಖಲಿಸಿಲ್ಲ.

ಈ ಘಟನೆ ಮೇವಟ್ ಸಮುದಾಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು ಎಫ್‌ಐಆರ್ ದಾಖಲಿಸುವ ವರೆಗೆ ಶವವನ್ನು ಪಡೆಯುವುದಿಲ್ಲ ಮತ್ತು ಹೂಳುವುದಿಲ್ಲ ಎಂದು ಉಮ್ಮರ್ ಸಂಬಂಧಿಗಳು ಹೇಳಿದ್ದಾರೆ.

ಈ ಹಿಂದೆ ರಾಜಸ್ಥಾನದಲ್ಲಿ ನಡೆದ ಇನ್ನೋರ್ವ ಹೈನುಗಾರ ಪೆಹ್ಲೂ ಖಾನ್ ಅವರ ಕೊಲೆಯಂತೆ ಈ ಕೊಲೆಯೂ ಆಗಕೂಡದು, ಹೀಗಾಗಿ ಪ್ರಬಲ ಹೋರಾಟ ರೂಪಿಸುವುದಾಗಿ ಮೇವಟ್ ಸಮುದಾಯ ಎಚ್ಚರಿಕೆ ನೀಡಿದೆ. ಹೈನುಗಾರ ಪೆಹ್ಲೂ ಖಾನ್ ಅವರನ್ನು ಬೀದಿಯಲ್ಲಿ ಗೋರಕ್ಷಕರು ದೊಣ್ಣೆಗಳಿಂದ ಬಡಿದು ಸಾಯಿಸಿದ್ದರೂ ಪೊಲೀಸರು ಬಂಧಿತ ಎಲ್ಲ ಆರೋಪಿಗಳು ನಿರಪರಾಧಿಗಳು ಎಂದು ಅವರನ್ನು ಬಿಡುಗಡೆಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.ಇದನ್ನೂ ಓದಿ
►►ಬಿಜೆಪಿ ಶಾಸಕನೇ ದನದ ಮಾಂಸ ರಫ್ತು ವ್ಯಾಪಾರಿ!
http://bit.ly/1Ln9UnO
►►ಗೋಹತ್ಯೆ ನಿಷೇಧ ಕಾನೂನು ಇಲ್ಲ
http://bit.ly/1VLJlzH
►►ದನದ ಮಾಂಸ ತಿಂದರೆಂದು ಕೊಂದೇ ಹಾಕಿದರು! http://bit.ly/1LNZq1k
►►ದಾದ್ರಿ: ವದಂತಿ ಹಬ್ಬಿಸಲು ಅರ್ಚಕನ ಮೇಲೆ ಒತ್ತಡ http://bit.ly/1JJuzNn
►►ಆರೋಪಿಗಳಿಗೂ ನ್ಯಾಯ ಕೊಡಿಸುವೆ: ಕೇಂದ್ರ ಸಚಿವ: bit.ly/1Vu0ayN
►►ಹತ್ಯೆಗೆ ಮೂರು ದಿನ ಮೊದಲು ಪಾಕಿಸ್ತಾನಿ ಎಂದಿದ್ದರು
http://bit.ly/1OdHrmZ
►►ಅಖ್ಲಾಖ್ ಕುಟುಂಬದ ರಕ್ಷಣೆ: ವಾಯುಸೇನೆ http://bit.ly/1OeNKqg
►►ಕೊಲೆಗಾರರು ಹುಡುಗಿಯ ಮೈ ಕೂಡ ಮುಟ್ಟಿಲ್ಲ ಗೊತ್ತಾ? http://bit.ly/1Lb7Dfn
►►ದಾದ್ರಿಯಲ್ಲೆ ನಡೆಯಿತು ಇನ್ನೊಂದು ಗಲಭೆಗೆ ಸಂಚು! http://bit.ly/1hnK8no
►►ಗೋಹತ್ಯೆ ಮಾಡಿದವರ ಕೊಲೆಗೆ ವೇದಗಳ ಆದೇಶ http://bit.ly/1NOi5Mt

 

 ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್: 
http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw
►►ಲಾರಿ- ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕ ಮೃತ್ಯು: http://bit.ly/2zPwAiu
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿಗೆ ಥಳಿತ: http://bit.ly/2yorwxd
►►ಲೋಕಸಭೆಗೆ ಮುತ್ತಿಗೆ ಹಾಕಲು ಯಡಿಯೂರಪ್ಪಗೆ ಸಿಎಂ ಸವಾಲು: http://bit.ly/2hkfHB5
►►ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ: http://bit.ly/2zuv98z
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ: http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0

Related Tags: Cow Vigilants Kill Ummar, Cow Transport, Go Hatya, Beef Politics, Alwar, Rajasthan, Mewat Community
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ