ಭ್ರಷ್ಟಾಚಾರ: ಮುಕ್ತ ಚರ್ಚೆಗೆ ಬನ್ನಿ. ಯಡಿಯೂರಪ್ಪಗೆ ಮುಖ್ಯಮಂತ್ರಿ ಆಹ್ವಾನ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಭ್ರಷ್ಟಾಚಾರದ ಆರೋಪದ ಕುರಿತು ಮುಕ್ತ ಚರ್ಚೆಗೆ ಬನ್ನಿ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಇತರ ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದ್ದಾರೆ.

ಭ್ರಷ್ಟಾಚಾರ ಆರೋಪದ ಬಗ್ಗೆ ಮುಕ್ತ ಸಾರ್ವಜನಿಕ ಚರ್ಚೆಗೆ ಬರುವಂತೆ ನಾನು ಬಿಜೆಪಿ ಮುಖಂಡರನ್ನು ಕರೆಯುತ್ತೇನೆ, ಆದರೆ ಅವರಿಗೆ ಬರಲು ಧೈರ್ಯವಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ, ಭ್ರಷ್ಟಾಚಾರದ ಆರೋಪದ ಮೇಲೆ ಹಲವು ಬಿಜೆಪಿ ನಾಯಕರು ಜೈಲಿಗೆ ಹೋಗಿ ಬಂದಿದ್ದಾರೆ. ಆದರೆ ಅವರಿಗೆ ನಾಚಿಕೆಯಿಲ್ಲ. ಯಡಿಯೂರಪ್ಪನವರಿಂದ ಹಿಡಿದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಹಾಲಪ್ಪ, ಜನಾರ್ದನ ರೆಡ್ಡಿ ಮತ್ತು ಆನಂದ್ ಸಿಂಗ್ ಅವರವರೆಗೆ ಜೈಲಿಗೆ ಹೋದವರೇ. ವಿಧಾನಸಭೆ ಕಲಾಪದ ವೇಳೆ ಪೋರ್ನ್ ಸಿನಿಮಾ ನೋಡಿ ಸಿಕ್ಕಿಹಾಕಿಕೊಂಡು ತಮ್ಮ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದಾರೆ. ಇದು ಬಿಜೆಪಿಯವರ ಸಂಸ್ಕೃತಿ ಎಂದು ಟೀಕಿಸಿದರು.

ಪಕ್ಷ ಅಧಿಕಾರಕ್ಕೆ ಬರಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಮ್ಯಾಜಿಕ್ ಕೆಲಸ ಮಾಡುತ್ತದೆ ಎಂದು ಇಲ್ಲಿನ ಬಿಜೆಪಿ ನಾಯಕರು ಅಂದುಕೊಂಡಿದ್ದಾರೆ. ಆದರೆ ಅದು ನಡೆಯುವುದಿಲ್ಲ. ಅಮಿತ್ ಶಾ ಅವರ ಮ್ಯಾಜಿಕ್ ಕರ್ನಾಟಕದಲ್ಲಿ ನಡೆಯುವುದಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಆದರೆ ಬಡವರ ಪರ ಯಾವ ಬಿಜೆಪಿ ಸರ್ಕಾರಗಳು ಯೋಜನೆಗಳನ್ನು ಆರಂಭಿಸಿವೆ? ಕರ್ನಾಟಕವನ್ನು ಹಸಿವು ಮುಕ್ತ ಮಾಡಲು ನಾವು ಪ್ರಯತ್ನಪಟ್ಟಿದ್ದೇವೆ ಎಂದು ಸಿದ್ದರಾಮಯ್ಯ ನುಡಿದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ಪೊಲೀಸರಿಗೆ ದಂಡ ತೆತ್ತ ಸಚಿವ ಪ್ರಮೋದ್ ಮಧ್ವರಾಜ್: 
http://bit.ly/2zQvx1L
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ: http://bit.ly/2zyNJfw
►►ಲಾರಿ- ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕ ಮೃತ್ಯು: http://bit.ly/2zPwAiu
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿಗೆ ಥಳಿತ: http://bit.ly/2yorwxd
►►ಲೋಕಸಭೆಗೆ ಮುತ್ತಿಗೆ ಹಾಕಲು ಯಡಿಯೂರಪ್ಪಗೆ ಸಿಎಂ ಸವಾಲು: http://bit.ly/2hkfHB5
►►ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ: http://bit.ly/2zuv98z
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ: http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0

Related Tags: Siddaramiah Dares B S Yadiyurappa, Corruption charges, Open Debate
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ