ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ: ದಂಡ ತೆತ್ತ ಸಚಿವ ಪ್ರಮೋದ್

ಕರಾವಳಿ ಕರ್ನಾಟಕ ವರದಿ

ಉಡುಪಿ:
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಹೆಲ್ಮೆಟ್ ಹಾಕದೇ ಬೈಕ್‌ ರೈಡ್ ಮಾಡಿದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆಗಿದ್ದು ಸಚಿವರು ದಂಡ ತೆತ್ತಿದ್ದಾರೆ.

ನವಂಬರ್ 9ರಂದು ಉಡುಪಿಯ ಕರ್ಜೆ ಎಂಬಲ್ಲಿ ಶಂಕುಸ್ಥಾಪನೆಯೊಂದಕ್ಕೆ ಆಗಮಿಸಿದ್ದ ಸಚಿವ ಪ್ರಮೋದ್ ಮಧ್ವರಾಜ್ ಕಾರ್ಯಕ್ರಮಕ್ಕೆ ತಡವಿದ್ದ ಕಾರಣ ಸ್ಥಳೀಯರ ಬೈಕ್ ಒಂದರಲ್ಲಿ ಅಲ್ಲಿಯೇ ಆಚೀಚೆ ಸುತ್ತಾಡಿದ್ದರು. ಆದರೆ ಪ್ರಓ ಆಗ ಹೆಲ್ಮೆಟ್ ಧರಿಸಿರಲಿಲ್ಲ.

ಇದನ್ನು ಸ್ಥಳೀಯರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಮಧ್ವರಾಜ್ ಅವರು ವಿರುದ್ಧ ದೂರು ದಾಖಲಿಸಿದ್ದರು.

1988ರ ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆ ಆರೋಪದಡಿ ಸೆಕ್ಷನ್ 177ರ ಅಡಿಯಲ್ಲಿ ಸಚಿವರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ  ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಹೆಲ್ಮೆಟ್ ಧರಿಸದೇ ಸಂಚಾರಿ ನಿಯಮ ಉಲ್ಲಂಘಿಸಿದ ಸಚಿವರು ಸ್ವತಃ ಪೊಲೀಸ್ ಠಾಣೆಗೆ ಬಂದು 100 ರುಪಾಯಿ ದಂಡ ತೆತ್ತಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ತಿಳಿಸಿದ್ದಾರೆ.ಇಂದು ಹೆಚ್ಚು ಓದಿದ ಸುದ್ದಿಗಳು
►►ಬಲವಂತದ ಮತಾಂತರ, ಮದುವೆ, ಐಸಿಸ್‌‌ಗೆ ಮಾರಾಟ ಯತ್ನ: ಯುವತಿ ಹೈಕೋರ್ಟ್‌ಗೆ:
http://bit.ly/2zyNJfw
►►ಲಾರಿ- ರಿಕ್ಷಾ ನಡುವೆ ಅಪಘಾತ: ರಿಕ್ಷಾ ಚಾಲಕ ಮೃತ್ಯು: http://bit.ly/2zPwAiu
►►ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿಗೆ ಥಳಿತ: http://bit.ly/2yorwxd
►►ಲೋಕಸಭೆಗೆ ಮುತ್ತಿಗೆ ಹಾಕಲು ಯಡಿಯೂರಪ್ಪಗೆ ಸಿಎಂ ಸವಾಲು: http://bit.ly/2hkfHB5
►►ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ: http://bit.ly/2zuv98z
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ: http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0

Related Tags: Pramod Madhvaraj, Bike Riding Without Helmet, Udupi Police, Fine
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ