ಮೊಗೇರ ಸಮುದಾಯ ಪರಿಶಿಷ್ಟ ಪಂಗಡಕ್ಕೆ: ಸುಪ್ರೀಂ ಮಹತ್ತರ ಆದೇಶ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಕರ್ನಾಟಕದ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿರುವ ಮೊಗೇರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸುಪ್ರಿಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.

ಈ ಹಿಂದೆ ಮೊಗೇರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಕರ್ನಾಟಕ ಹೈ ಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿ ಹೈ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.

ಅಡಿಕೆ ತೋಟಗಳಲ್ಲಿ ಕೂಲಿ ಅರಸಿ ಬಂದಿದ್ದ ಮೊಗೇರ ಸಮುದಾಯವು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದೆ. ಇದನ್ನು ಪರಿಗಣಿಸದೆಯೇ ನೀಡಲಾಗಿದ್ದ ಸೌಲಭ್ಯವನ್ನು ರದ್ದುಪಡಿಸಲಾಗಿತ್ತು.

ಸೌಲಭ್ಯ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಉತ್ತರ ಕನ್ನಡ ಜಿಲ್ಲಾ ಮೊಗೇರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2011ರ ನವೆಂಬರ್‌ 29ರಂದು ಮೊಗೇರ ಸಮುದಾಯದ ಪರ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.


ಇಂದು ಹೆಚ್ಚು ಓದಿದ ಸುದ್ದಿಗಳು
►►ಲೋಕಸಭೆಗೆ ಮುತ್ತಿಗೆ ಹಾಕಲು ಯಡಿಯೂರಪ್ಪಗೆ ಸಿಎಂ ಸವಾಲು:
http://bit.ly/2hkfHB5
►►ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ: http://bit.ly/2zuv98z
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ: http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0
►►ಉಡುಪಿ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ http://bit.ly/2hizWPD
►►ಕಾರವಾರ: ಟಿಪ್ಪು ಜಯಂತಿ ವಿರೋಧಿಸಿ ಹಿಂಜಾವೇ ಪ್ರತಿಭಟನೆ http://bit.ly/2ht1JRb
►►ಇತಿಹಾಸವನ್ನೇ ಸೃಷ್ಠಿಸಿದ ಟಿಪ್ಪು ಹೆಸರು ಕೆಡಿಸಲಾಗುತ್ತಿದೆ: ಸಚಿವ ರಮಾನಾಥ ರೈ http://bit.ly/2hZD3Nn
►►ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ ಆನಂದ್ ಸಿಂಗ್ http://bit.ly/2Aq5fj5

Related Tags: Supreme Court Declares Mogera Community, Scheduled Caste, Supreme Court, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ