ಲೋಕಸಭೆಗೆ ಮುತ್ತಿಗೆ ಹಾಕಲು ಯಡಿಯೂರಪ್ಪಗೆ ಸಿಎಂ ಸವಾಲು

ಕರಾವಳಿ ಕರ್ನಾಟಕ ವರದಿ

ವಿಜಯಪುರ:
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಿಸುವ ವಿಚಾರದ ಕುರಿತು ಪ್ರಧಾನಿ ಮೋದಿ ಎದುರು ಯಡಿಯೂರಪ್ಪ ಮಾತನಾಡುತ್ತಿಲ್ಲ. ಸಾಲ ಮನ್ನಾ ಮಾಡಿ ಎಂದು ವಿಧಾನಸೌಧ ಮುತ್ತಿಗೆ ಹಾಕುತ್ತೇನೆ ಎನ್ನುವ ಯಡಿಯೂರಪ್ಪ ಲೋಕಸಭೆ ಮುತ್ತಿಗೆ ಹಾಕಿ ತೋರಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲೆಸೆದರು.

ವಿಜಯಪುರದಲ್ಲಿ ಮಾತನಾಡಿದ ಸಿಎಂ, ರೈತರ ಸಾಲ ಮನ್ನಾ ಎನ್ನುವುದನ್ನು ಯಡಿಯೂರಪ್ಪ ಲಾಲಿ ಪಾಪ್ ಮಾಡಿದ ಹಾಗೆ ಮಾಡಿದ್ದಾರೆ.

ರೈತರ ಬಗ್ಗೆ ಹಿತ ಯಡಿಯೂರಪ್ಪಗೆ ಏನೂ ಗೊತ್ತು. ನಾನು 80 ರ ದಶಕದಿಂದಲೇ ಹಸಿರು ಶಾಲು ಹೊದ್ದುಕೊಂಡು ಹೋರಾಟ ಮಾಡಿಕೊಂಡು ಬಂದವನು ಎಂದು ಸಿಎಂ ಹೇಳಿದ್ದಾರೆ.

ಶೀಘ್ರದಲ್ಲೇ ಮೀನುಗಾರರ ಸಾಲ ಮನ್ನಾ ಮಾಡುವುದಾಗಿಯೂ ಸಿಎಂ ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

ಅಚ್ಚೆ ದಿನ್ ಆಯೆಂಗೆ ಎಂದು ಈ ಹಿಂದೆ ಮೋದಿ ಹೇಳಿದ್ದರು. ಬಂತೇನ್ರಿ ಅಚ್ಚೆ ದಿನ್ ಎಂದು ಜನರಿಗೆ ಕೇಳಿದ ಸಿದ್ದರಾಮಯ್ಯ ಅಚ್ಚೆ ದಿನ್ ಬಂದಿದ್ದು ಅಂಬಾನಿ, ಅದಾನಿ, ಜಯ್ ಷಾ, ರಾಮದೇವ್ ಬಾಬಾಗೆ ಮಾತ್ರ ಎಂದು ಲೇವಡಿಯಾಡಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ:
http://bit.ly/2zuv98z
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ: http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0
►►ಉಡುಪಿ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ http://bit.ly/2hizWPD
►►ಕಾರವಾರ: ಟಿಪ್ಪು ಜಯಂತಿ ವಿರೋಧಿಸಿ ಹಿಂಜಾವೇ ಪ್ರತಿಭಟನೆ http://bit.ly/2ht1JRb
►►ಇತಿಹಾಸವನ್ನೇ ಸೃಷ್ಠಿಸಿದ ಟಿಪ್ಪು ಹೆಸರು ಕೆಡಿಸಲಾಗುತ್ತಿದೆ: ಸಚಿವ ರಮಾನಾಥ ರೈ http://bit.ly/2hZD3Nn
►►ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ ಆನಂದ್ ಸಿಂಗ್ http://bit.ly/2Aq5fj5

Related Tags: Yeddiyurappa, Siddharamaiah, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ