ಶಾಸಕ ಮೊಯ್ದಿನ್ ಬಾವಾ ನಿಂದೆ: ಆರೋಪಿಗಳ ಸೆರೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಶಾಸಕ ಮೊಯ್ದಿನ್ ಬಾವಾ ಅವರನ್ನು ಫೇಸ್‌ಬುಕ್ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಶಬ್ದಗಳಿಂದ ನಿಂದಿಸಿದ ಆರೋಪಿಗಳನ್ನು ಪಣಂಬೂರು ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಎಂದು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ನಿಯೋಗವು ಪಣಂಬೂರು ಪೊಲೀಸರಿಗೆ ಮನವಿ ನೀಡಿತ್ತು.

ಯತೀಶ್ ಪೆರುವಾಯಿ ಮತ್ತು ಅಶ್ವಥ್ ಕುಮಾರ್ ಕೊಡಿಯಾಲ್ ಬೈಲ್ ಎಂಬವರನ್ನು ಶಾಸಕ ಬಾವಾ ಅವರನ್ನು ಫೇಸ್‌ಬುಕ್ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿಯಾಗಿ ನಿಂದಿಸಿರುವ ಆರೋಪದಲ್ಲಿ ಬಂಧಿಸಲಾಗಿದೆ.

ಇವರು ಶಾಸಕ ಮೊಯ್ದಿನ್ ಬಾವಾ ಅವರಿಗೆ ಭಯೋತ್ಪಾದಕರ ಸಂಪರ್ಕವಿದೆ ಎಂದು ಅಪಪ್ರಚಾರ ಮಾಡಿದ್ದಲ್ಲದೇ ಅಂಗರಗುಂಡಿ ಪರಿಸರವು ಜೆಹಾದಿಗಳು ಮತ್ತು ದನಕಳ್ಳರ ಕೇಂದ್ರವಾಗಿದೆ ಎಂದು ಆರೋಪಿಸಿದ್ದಾರೆ ಎನ್ನಲಾಗಿತ್ತು.

ಸುರತ್ಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಲಾ ಕಾಮತ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹ್ಯಾರಿಸ್ ಬೈಕಂಪಾಡಿ, ಯುವ ಕಾಂಗ್ರೆಸ್ ಉಪಾಧ್ಯಕ್ಷ ಉತ್ತಮ್ ಆಳ್ವಮ್ ಸರ್ಫುದ್ದೀನ್, ಫೈಸಲ್ ಅಂಗರಗುಂಡಿ, ಆಶಾ ಶೆಟ್ಟಿ, ಶಿಶಿಲಾ ಶೆಟ್ಟಿ. ಇಲ್ಯಾಸ್ ಮುಂತಾದವರು  ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪೊಲೀಸರಿಗೆ ಮನವಿ ನೀಡಿದ ಬೆನ್ನಲ್ಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಂಗ್ರೆಸ್ ವಿದ್ಯಾರ್ಥಿ ಬ್ರಿಗೇಡ್ ಜಿಲ್ಲಾಧ್ಯಕ್ಷರಾಗಿ ಎಲ್‌ಸ್ಟನ್ ನೊರೊನ್ಹಾ:
http://bit.ly/2AyLruK
►►ಬಳ್ಳಾರಿ ಬಿಜೆಪಿ ಕಚೇರಿ ಎದುರೇ ಟಿಪ್ಪು ಜಯಂತಿ: http://bit.ly/2zCXasp
►►ಟಿಪ್ಪು ಜಯಂತಿಗೆ ಹಾಜರಾಗದ ಉಸ್ತುವಾರಿ ಪ್ರಮೋದ್ ಮಧ್ವರಾಜ್: http://bit.ly/2AzsUi0
►►ಉಡುಪಿ: ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಪ್ರತಿಭಟನೆ http://bit.ly/2hizWPD
►►ಕಾರವಾರ: ಟಿಪ್ಪು ಜಯಂತಿ ವಿರೋಧಿಸಿ ಹಿಂಜಾವೇ ಪ್ರತಿಭಟನೆ http://bit.ly/2ht1JRb
►►ಇತಿಹಾಸವನ್ನೇ ಸೃಷ್ಠಿಸಿದ ಟಿಪ್ಪು ಹೆಸರು ಕೆಡಿಸಲಾಗುತ್ತಿದೆ: ಸಚಿವ ರಮಾನಾಥ ರೈ http://bit.ly/2hZD3Nn
►►ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ ಆನಂದ್ ಸಿಂಗ್ http://bit.ly/2Aq5fj5
►►ಟಿಪ್ಪು ಜಯಂತಿ ವಿರೋಧ: ಶಾಸಕ ಅಪ್ಪಚ್ಚು ರಂಜನ್ ಪೊಲೀಸ್ ವಶ http://bit.ly/2zLZ64E
►►ಕೊಡವರು, ಕ್ರೈಸ್ತರಿಂದ ಟಿಪ್ಪು ಜಯಂತಿ ವಿರೋಧ: ಮಾಳವಿಕಾ ಅವಿನಾಶ್ http://bit.ly/2ztTkn9
►►ಟಿಪ್ಪು ಜಯಂತಿ ಹಿನ್ನೆಲೆ: ಜಿಲ್ಲೆಯಾದ್ಯಂತ ಸೆಕ್ಷನ್ 144: http://bit.ly/2yzutiu

Related Tags: Anti-Rowdy Squad of Panambur, Ashwath Kumar, Yathish Arrest, Offensive Facebook Post Against MLA Mohiuddin Bava, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಮೊಯ್ದಿನ್ ಬಾವಾ,ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಶಾಸಕ, ಫೇಸ್ ಬುಕ್ ಅವಹೇಳನ, ಕರಾವಳಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ