ಇಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ ಯತ್ನ: ಆರೋಪಿಗೆ ಥಳಿತ
ರಾತ್ರಿ ಎರಡು ಗಂಟೆ ತನಕ ಪಾರ್ಟಿ ಮಾಡಿ ಕುಡಿತದ ಅಮಲಿನಲ್ಲಿ ವಿದ್ಯಾರ್ಥಿನಿಯ ಮನೆಗೆ ನುಗ್ಗಿ ಕೋಣೆಗೆ ಎಳೆದೊಯ್ದ ಆರೋಪಿ ಪೊಲೀಸ್ ವಶಕ್ಕೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಹತ್ತೊಂಬರ ಹರಯದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಕಾರು ಚಾಲಕನನ್ನು ವಿದ್ಯಾರ್ಥಿನಿಯ ಗೆಳೆಯರು ಹಿಡಿದು ಥಳಿಸಿ ಸೋಲದೇವನಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಶರತ್ (26) ಮನೆಗೆ ನುಗ್ಗಿ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ. ತಡರಾತ್ರಿ ಎರಡು ಗಂಟೆ ಸುಮಾರಿಗೆ ಆರೋಪಿ ಈ ಕೃತ್ಯ ಎಸಗಿದ್ದು, ಸಂತ್ರಸ್ತೆಯ ಕುತ್ತಿಗೆ ಅದುಮಿ ಕೊಲೆಗೆ ಯತ್ನಿಸಿದ್ದ.

ವಿದ್ಯಾರ್ಥಿನಿಯು ಈ ಘಟನೆಯ ಬಳಿಕ ಆಘಾತಕ್ಕೆ ಒಳಗಾಗಿದ್ದಾಳೆ. ಪೋಷಕರು ಕಾಲೇಜು ಬಿಡಿಸಿ ಮಗಳನ್ನು ಮನೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿ ಶರತ್ ಭದ್ರಾವತಿಯವನಾಗಿದ್ದು, ಒಂದೂವರೆ ವರ್ಷದಿಂದ ಕೊಡಿಗೇಹಳ್ಳಿಯಲ್ಲಿ ನೆಲೆಸಿದ್ದ.

ಸಂತ್ರಸ್ತ ವಿದ್ಯಾರ್ಥಿನಿ ವಾಸವಿದ್ದ ಕಟ್ಟಡದಲ್ಲೇ ಶರತ್ ಗೆಳೆಯನ ಮನೆ ಇದೆ. ರಾತ್ರಿ ಸ್ನೇಹಿತನ ಮನೆಗೆ ಬಂದಿದ್ದ ಆರೋಪಿ 2 ಗಂಟೆವರೆಗೂ ಪಾರ್ಟಿ ಮಾಡಿದ್ದು, ಕುಡಿತದ ಅಮಲಿನಲ್ಲಿ ಸಂತ್ರಸ್ತೆಯ ಮನೆಯ ಬಾಗಿಲು ಬಡಿದಿದ್ದಾನೆ. ಬಾಗಿಲು ತೆರೆಯುತ್ತಿದ್ದಂತೆ ಒಳಗೆ ನುಗ್ಗಿ ದೌರ್ಜನ್ಯ ಎಸಗಿದ್ದಾನೆ.

ಶರತ್ ತಾನು ದೊಡ್ಡ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಿಕೊಂಡಿದ್ದನಲ್ಲದೇ ನನ್ನನ್ನು ಮದುವೆಯಾದರೆ ನಿನಗೆ ಎಲ್ಲ ಸೌಕರ್ಯ ಮಾಡಿಕೊಡುವೆ ಎಂದು ಹೇಳುತ್ತ ವಿದ್ಯಾರ್ಥಿನಿಯನ್ನು ಕೋಣೆಗೆ ಎಳೆದುಕೊಂಡು ಹೋಗಿ ಆಕೆಯನ್ನು ವಿವಸ್ತ್ರಗೊಳಿಸಲು ಯತ್ನಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಆತನಿಂದ ಕಷ್ಟಪಟ್ಟು ತಪ್ಪಿಸಿಕೊಂಡು ಕೋಣೆಯ ಬಾಗಿಲನ್ನು ಸಂತ್ರಸ್ತೆ ಲಾಕ್ ಮಾಡಿದ್ದು, ಬಳಿಕ ಗೆಳೆಯನಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆ 3.30ರ ಸುಮಾರಿಗೆ ಆಕೆಯ ಮನೆಗೆ ತೆರಳಿದ ಸ್ನೇಹಿತರು, ಆರೋಪಿಗೆ ಹಿಗ್ಗಾಮುಗ್ಗಾ ಥಳಿಸಿ ಠಾಣೆಗೆ ಎಳೆದೊಯ್ದು ಪೊಲೀಸರ ವಶಕ್ಕೆ ನೀಡಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಇತಿಹಾಸವನ್ನೇ ಸೃಷ್ಠಿಸಿದ ಟಿಪ್ಪು ಹೆಸರು ಕೆಡಿಸಲಾಗುತ್ತಿದೆ: ರಮಾನಾಥ ರೈ:
http://bit.ly/2hZD3Nn
►►ಹಿರಿಯ ನಾಗರಿಕರ ಮನೆಬಾಗಿಲಲ್ಲೇ ಬ್ಯಾಂಕ್ ಸೇವೆ: ಆರ್‌ಬಿ‍ಐ: http://bit.ly/2maECwx
►►ಪಕ್ಷದ ನಿಲುವು ಧಿಕ್ಕರಿಸಿ ಟಿಪ್ಪು ಜಯಂತಿ ಉದ್ಘಾಟಿಸಿದ ಬಿಜೆಪಿ ಶಾಸಕ: http://bit.ly/2Aq5fj5
►►ಕೇಂದ್ರದ ನೋಟು ರದ್ಧತಿ ವಿರುದ್ಧ ಬಿಜೆಪಿ ಸಂಸದನಿಂದಲೇ ಚಾಟಿ!: http://bit.ly/2hZW16t
►►ಗಾಂಧಿಯಿಂದ ಗೌರಿವರೆಗೆ: ಐಎಸ್ಎಫ್ ಕುವೈಟ್ ವಿಚಾರಗೋಷ್ಟಿ http://bit.ly/2yNtT0O
►►ಪ್ಯಾರಡೈಸ್ ಪೇಪರ್ಸ್ನಲ್ಲಿ ಮಣಿಪಾಲದ ರಂಜನ್ ಪೈ ಹೆಸರು: http://bit.ly/2i0M3Sc
►►ಖ್ಯಾತ ಯುವ ಡ್ರಮ್ಮರ್ ಮತ್ತು ಡಿಜೆ ಜಿಲ್ ಗೇವಿನ್ ಡಿಸೋಜಾ ಆತ್ಮಹತ್ಯೆ: http://bit.ly/2iHNSD2

Related Tags: Rape Attempt, Engineering Student, Accused Arrested, Bangalore, Soladevana Halli, Accused Sharath, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ