ಗಾಂಧಿಯಿಂದ ಗೌರಿವರೆಗೆ: ಐಎಸ್ಎಫ್ ಕುವೈಟ್ ವಿಚಾರಗೋಷ್ಟಿ
ಜಾತ್ಯತೀತ ಶಕ್ತಿಗಳು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ತೋರುತ್ತಿರುವ ಮೃದು ಧೋರಣೆ ನಿಲ್ಲಿಸಿ ಕಠಿಣ ನಿಲುವು ತಳೆಯುವ ದಿನದಿಂದ ಫ್ಯಾಶಿಸಂ ಅಂತ್ಯ ಆರಂಭವಾಗಲಿದೆ.

ಮೊಹಮದ್ ಹನೀಫ್/ಕರಾವಳಿ ಕರ್ನಾಟಕ ವರದಿ

ಕುವೈಟ್:
ಭಾರತದದಲ್ಲಿ ಫ್ಯಾಶಿಸ್ಟ್ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವ 'ಗಾಂಧಿಯಿಂದ ಗೌರಿವರೆಗೆ' ವಿಚಾರಗೋಷ್ಠಿಯು ಇಂಡಿಯನ್ ಸೋಶಿಯಲ್ ಫೋರಮ್, ಕುವೈಟ್ ವತಿಯಿಂದ ಸಾಲ್ಮಿಯಾದ ರೆಡ್ ಫ್ಲೇಮ್ ಹಾಲಿನಲ್ಲಿ ನಡೆಯಿತು. ಕುವೈಟಿನ ವಿವಿಧ ಭಾಗಗಳಿಂದ ಆಗಮಿಸಿದವಿವಿಧ ಸಂಘಟನೆಗಳ ಪ್ರತಿನಿಧಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ ಕರ್ನಾಟಕ ವಿಭಾಗದಅಧ್ಯಕ್ಷರಾದ ಇಮ್ತಿಯಾಝ್ ಅಹ್ಮದ್ ಅರ್ಕುಳ ಅವರು ಭಾರತದಲ್ಲಿ ಪ್ರಸಕ್ತ ಕಂಡುಬರುತ್ತಿರುವ ಅಸಹಿಷ್ಣುತೆ, ಅದರ ಹುಟ್ಟು, ಬೆಳವಣಿಗೆ, ಕಾರಣ ಮತ್ತು ಪರಿಣಾಮಗಳ ಬಗ್ಗೆ ವಿವರಿಸಿದರು.

ಭಾರತದಲ್ಲಿ ನಡೆಯುತ್ತಿರುವ ಹತ್ಯೆಗಳ ಸೂತ್ರದಾರರಾರು ಎಂಬುವುದು ಇಲ್ಲಿನ ನ್ಯಾಯಾಂಗ ವ್ಯವಸ್ಥೆ, ಅಧಿಕಾರಿ ವರ್ಗ ಮತ್ತು ಸರಕಾರಕ್ಕೆ ತಿಳಿದಿದ್ದರೂ, ಯಾವುದೇ ತನಿಖಾ ಸಂಸ್ಥೆಯ ತನಿಖೆಯು ಹತ್ಯಾಕಾಂಡಗಳನ್ನು ನಡೆಸುತ್ತಿರುವ ಸೂತ್ರದಾರ ಸಂಘಟನೆಯವರೆಗೆ ತಲುಪದಿರುವುದು ಬಹುದೊಡ್ಡ ದುರಂತವೆಂದು ಬಣ್ಣಿಸಿದರು.

ಜಾತ್ಯತೀತ ಶಕ್ತಿಗಳು ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧ ತೋರುತ್ತಿರುವ ಮೃದು ಧೋರಣೆ ನಿಲ್ಲಿಸಿ ಕಠಿಣ ನಿಲುವು ತಳೆಯುವ ದಿನದಿಂದ  ಫ್ಯಾಶಿಸಂ ಅಂತ್ಯ ಆರಂಭವಾಗಲಿದೆ ಎಂದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಬಾಬು ಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಇಂಡಿಯಾದಲ್ಲಿ ಸಂವಿಧಾನವೇ ಅಪಾಯದಲ್ಲಿರುವ ಈ ಸಂದರ್ಭದಲ್ಲಿ ಜಾತ್ಯಾತೀತ ಶಕ್ತಿಗಳು ತಮ್ಮ ಸ್ವಪ್ರತಿಷ್ಟೆಯನ್ನು ಬದಿಗಿಟ್ಟು ಒಂದಾಗಿಹೋರಾಟ ಮಾಡಬೇಕೆಂದು ಕರೆ ನೀಡಿದರು. ಈ ನಿಟ್ಟಿನಲ್ಲಿ ಅನಿವಾಸಿಗಳೆಡೆ ಜಾಗೃತಿಯನ್ನುಮೂಡಿಸುತ್ತಿರುವ ಐಎಸ್ಎಫ್ ನಡೆ ಶ್ಲಾಘನೀಯ ಎಂದರು.

ಇನ್ನೋರ್ವಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ, ಬದ್ರ್ ಅಲ್ ಸಮಾ ಮೆಡಿಕಲ್ ಸೆಂಟರ್ ವ್ಯವಸ್ಥಾಸ್ಥಾಪಕರಾದ ಅಬ್ದುಲ್ ರಜಾಕ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಅಭಿವ್ಯಕ್ತಿ ಸ್ವಾತಂತ್ರ್ಯವು ಮಾನವನ ಮೂಲಭೂತ ಅವಶ್ಯಕತೆಯಾಗಿದ್ದು, ಅದರಲ್ಲೂ ಒಂದುಮಹಿಳೆಯನ್ನು ಜಾತ್ಯತೀತರ ಪರ ಶಬ್ಧವೆತ್ತಿದ ಕಾರಣಕ್ಕಾಗಿ ಅಮಾನವೀಯವಾಗಿ ಕೊಲ್ಲುವುದು ಕೊಲೆಗಡುಕ ಸಂಘಟನೆಯ ನೀಚ ಸ್ವರೂಪವನ್ನು ಬಿಂಬಿಸುತ್ತದೆ ಎಂದು ಖಂಡಿಸಿದರು.

ಇಂಡಿಯನ್ ಸೋಶಿಯಲ್ ಫೋರಮ್ ಮೀಡಿಯೇಟ್ಸ್ ತಂಡದ ಸಂಚಾಲಕರಾದ ಅಶ್ರಫ್ ಕಾಲತ್ತೋಡ್, ಕುವೈಟ್ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ಚಾಪ್ಟರ್ ಅಧ್ಯಕ್ಷರಾದ ಮುಸ್ತಕೀಮ್ ಶಿರೂ ಸಭಿಕರನ್ನುದ್ದೇಶಿಸಿ ಮಾತನಾಡಿದರು.

ಇಂಡಿಯನ್ ಸೋಶಿಯಲ್ ಫೋರಮ್ ಕೇಂದ್ರ ಸಮಿತಿ ಪ್ರಧಾನಕಾರ್ಯದರ್ಶಿಯಾದ ಮುಹಮ್ಮದ್ ರಫೀಕ್ ಮಂಚಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಕ್ಬಾಲ್ಬಡ್ಡೂರು ಆರಂಭದಲ್ಲಿ ಸ್ವಾಗತಗೈದರೆ ತಂಝೀಲ್ ಕಲ್ಲಾಪು ಕಾರ್ಯಕ್ರಮವನ್ನು ನಿರೂಪಿದರು.ಹಂಝ ಉಚ್ಚಿಲ ಅಂತ್ಯದಲ್ಲಿ ಧನ್ಯವಾದವನ್ನಿತ್ತರು. ರಾತ್ರಿಯ ಉಪಾಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ: ಶಾಸಕ ಅಪ್ಪಚ್ಚು ಪೊಲೀಸ್ ವಶ:
http://bit.ly/2zLZ64E
►►ಪ್ಯಾರಡೈಸ್ ಪೇಪರ್ಸ್‌ನಲ್ಲಿ ಮಣಿಪಾಲದ ರಂಜನ್ ಪೈ ಹೆಸರು: http://bit.ly/2i0M3Sc
►►ಖ್ಯಾತ ಯುವ ಡ್ರಮ್ಮರ್ ಮತ್ತು ಡಿಜೆ ಜಿಲ್ ಗೇವಿನ್ ಡಿಸೋಜಾ ಆತ್ಮಹತ್ಯೆ: http://bit.ly/2iHNSD2
►►ಕೊಡವರು, ಕ್ರೈಸ್ತರಿಂದ ಟಿಪ್ಪು ಜಯಂತಿ ವಿರೋಧ: ಮಾಳವಿಕಾ ಅವಿನಾಶ್: http://bit.ly/2ztTkn9
►►ಕೈ ಕೋಳಗಳಿಂದಲೇ ಪೇದೆಗೆ ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿ: http://bit.ly/2AmPfyk
►►ಐಟಿ ಅಧಿಕಾರಿಗಳು ಡಿಕೆಶಿಗೆ ಬಿಜೆಪಿ ಸೇರುವಂತೆ ಹೇಳಿದ್ದರು: ಸಿದ್ದರಾಮಯ್ಯ ಆರೋಪ: http://bit.ly/2AoKSTk
►►ಗಿನ್ನೆಸ್ ವಿಶ್ವ ದಾಖಲೆಗಾಗಿ 1000 ಮೀಟರ್ ಚಿತ್ರ ರಚನೆ: http://bit.ly/2zoWQ2w
►►ಗೌರಿ ಲಂಕೇಶ್ ಕೊಲೆ ಪ್ರಕರಣದ ಸತ್ಯಾಂಶ ಬಯಲಾಗಲಿ: ಚಿಂತಕ ಶಿವಸುಂದರ್: http://bit.ly/2ztjdRZ
►►ಕೊನೆಗೂ ಸಮುದ್ರ ಮಾರ್ಗದ ಮೂಲಕ ಗೋವಾಕ್ಕೆ ರೈಲ್ವೇ ಇಂಜಿನ್: http://bit.ly/2yi6PD9

Related Tags: ISF Kuwait, Gauri Lankesh, Journalist, Gandhiji, Kuwait News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ