ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ: ಶಾಸಕ ಅಪ್ಪಚ್ಚು ಪೊಲೀಸ್ ವಶ

ಕರಾವಳಿ ಕರ್ನಾಟಕ ವರದಿ

ಮಡಿಕೇರಿ:
ಟಿಪ್ಪು ಜಯಂತಿ ವಿರೋಧಿಸಿ ಕೊಡಗು ಜಿಲ್ಲೆಯಲ್ಲಿ ಬಂದ್ ನಡೆಯುತ್ತಿದ್ದು, ಗಾಳಿಬೀಡಿನಲ್ಲಿ ಕೆಎಸ್ಆರ್‌ಟಿಸಿ ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದು ಗಾಜು ಪುಡಿ ಮಾಡಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಟಿಪ್ಪು ಸುಲ್ತಾನ್ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಮುಂದಾದ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಡಗದಾಳುವಿನಿಂದ ಸೋಮವಾರಪೇಟೆಗೆ ಹೋಗುತ್ತಿದ್ದ ಸರಕಾರಿಗೆ ಬಸ್ಸಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಅದ್ದೂರು ಕಟ್ಟೆಯಲ್ಲೂ ಬಸ್ಸಿಗೆ ಕಲ್ಲೆಸೆದು ಹಾನಿಗೈಯಲಾಗಿದೆ.

ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಾದ್ಯಂತ ಶನಿವಾರ ಬೆಳಿಗ್ಗೆ ಆರು ಗಂಟೆ ತನಕ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ ಸುಮಾರು ಇನ್ನೂರಕ್ಕೂ ಮಿಕ್ಕಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.ರಸ್ತೆಯಲ್ಲಿ ಕಡಿದುರುಳಿಸಲಾಗಿದ್ದ ಮರಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಇದನ್ನೂ ಓದಿ
►►ಕೊಡವರು, ಕ್ರೈಸ್ತರಿಂದ ಟಿಪ್ಪು ಜಯಂತಿ ವಿರೋಧ: ಮಾಳವಿಕಾ ಅವಿನಾಶ್
http://bit.ly/2ztTkn9
►►ಟಿಪ್ಪು ಜಯಂತಿ ಹಿನ್ನೆಲೆ: ಜಿಲ್ಲೆಯಾದ್ಯಂತ ಸೆಕ್ಷನ್ 144: http://bit.ly/2yzutiu

ಇಂದು ಹೆಚ್ಚು ಓದಿದ ಸುದ್ದಿಗಳು
►►ಪ್ಯಾರಡೈಸ್ ಪೇಪರ್ಸ್‌ನಲ್ಲಿ ಮಣಿಪಾಲದ ರಂಜನ್ ಪೈ ಹೆಸರು:
http://bit.ly/2i0M3Sc
►►ಖ್ಯಾತ ಯುವ ಡ್ರಮ್ಮರ್ ಮತ್ತು ಡಿಜೆ ಜಿಲ್ ಗೇವಿನ್ ಡಿಸೋಜಾ ಆತ್ಮಹತ್ಯೆ: http://bit.ly/2iHNSD2
►►ಕೈ ಕೋಳಗಳಿಂದಲೇ ಪೇದೆಗೆ ಹಲ್ಲೆ ನಡೆಸಿದ ವಿಚಾರಣಾಧೀನ ಕೈದಿ: http://bit.ly/2AmPfyk
►►ಐಟಿ ಅಧಿಕಾರಿಗಳು ಡಿಕೆಶಿಗೆ ಬಿಜೆಪಿ ಸೇರುವಂತೆ ಹೇಳಿದ್ದರು: ಸಿದ್ದರಾಮಯ್ಯ ಆರೋಪ: http://bit.ly/2AoKSTk
►►ಗಿನ್ನೆಸ್ ವಿಶ್ವ ದಾಖಲೆಗಾಗಿ 1000 ಮೀಟರ್ ಚಿತ್ರ ರಚನೆ: http://bit.ly/2zoWQ2w
►►ಗೌರಿ ಲಂಕೇಶ್ ಕೊಲೆ ಪ್ರಕರಣದ ಸತ್ಯಾಂಶ ಬಯಲಾಗಲಿ: ಚಿಂತಕ ಶಿವಸುಂದರ್: http://bit.ly/2ztjdRZ
►►ಕೊನೆಗೂ ಸಮುದ್ರ ಮಾರ್ಗದ ಮೂಲಕ ಗೋವಾಕ್ಕೆ ರೈಲ್ವೇ ಇಂಜಿನ್: http://bit.ly/2yi6PD9

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ, ಅಪ್ಪಚ್ಚು ರಂಜನ ಬಂಧನ, ಬಸ್ಸುಗಳಿಗೆ ಕಲ್ಲೆಸೆತ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ