ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್: ಮೇರಿ ಕೋಮ್‌ಗೆ ಚಿನ್ನದ ಮುಕುಟ

ಕರಾವಳಿ ಕರ್ನಾಟಕ ವರದಿ

ಹೋ ಚಿ ಮಿನ್ ಸಿಟಿ(ವಿಯೆಟ್ನಾಂ):
ಐದು ಬಾರಿ ವಿಶ್ವ ಚಾಂಪಿಯನ್ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತದ ಹೆಮ್ಮೆಯ ಬಾಕ್ಸಿಂಗ್ ತಾರೆ ಮೇರಿ ಕೋಮ್ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.

ವಿಯೆಟ್ನಾಂನಲ್ಲಿ ನಡೆದ ಫೈನಲ್ ನಲ್ಲಿ ಉತ್ತರ ಕೊರಿಯಾದ ಕಿಮ್ ಹೈಯಾಂಗ್ ಮಿ ವಿರುದ್ಧ ಮೇರಿ ಕೋಮ್ 5-0 ಅಂತರದ ಜಯ ದಾಖಲಿಸಿದರು.

2014 ರ ಏಷ್ಯನ್ ಕ್ರೀಡಾಕೂಟದ ಬಳಿಕದಲ್ಲಿ ಇದು ಮೇರಿ ಕೋಮ್ ಅವರ ಮೊದಲ ಅಂತರರಾಷ್ಟ್ರೀಯ ಚಿನ್ನದ ಪದಕ ಆಗಿದೆ. ಹಾಗೆಯೇ ಈ ವರ್ಷದ ಅವಧಿಯಲ್ಲಿ ಅವರ ಮೊದಲ ಪದಕ ಇದಾಗಿದೆ.

ನಿನ್ನೆ ನಡೆದ ಪಂದ್ಯದಲ್ಲಿ ಮೇರಿ, ಜಪಾನ್ ನ ಸಬಾಸಾ ಕೊಮುರಾ ಅವರನ್ನು  5-0 ಅಂತರದಲ್ಲಿ ಮಣಿಸಿ ಫೈನಲ್ ತಲುಪಿದ್ದರು. ಆರನೇ ಬಾರಿ ವಿಶ್ವ ಬಾಕ್ಸಿಂ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು.

ಮುವತ್ತೈದು ವರ್ಷದ ರಾಜ್ಯಸಭಾ ಸದಸ್ಯೆ ಮೇರಿ ಕೋಂ ಅವರು 2012ರಲ್ಲಿ ಐವತ್ತೊಂದು ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಒಲಿಂಪಿಕ್ಸ್ ನಲ್ಲಿ ಕಂಚು ಜಯಿಸಿದ್ದರು. ಅದು ವರ್ಷ ಬಳಿಕ ನಲವತ್ತೆಂಟು ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದರು.


 ಇಂದು ಹೆಚ್ಚು ಓದಿದ ಸುದ್ದಿಗಳು:
►►ರಾಯನ್ಸ್ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಹೊಸ ತಿರುವು. 11ನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ ಸಿಬಿಐ:
http://bit.ly/2hl8g0q
►►ದಂಡ ಕಟ್ಟಲಾರೆ ಎಂದು ಬಸ್ ಎದುರು ಮಲಗಿದ ಆಟೋ ಚಾಲಕ! http://bit.ly/2yGvbuo
►►ಸ್ಥಳೀಯರ ಎಚ್ಚರಿಕೆ ಕಡೆಗಣಿಸಿ ನೀರುಪಾಲಾದ ಬಾಲಕರು: http://bit.ly/2zFnS6j
►►ಆಧಾರ್‌ ಜೋಡಿಸದ ಮೊಬೈಲ್‌ ಡಿಸ್‌ಕನೆಕ್ಟ್ ಇಲ್ಲ: http://bit.ly/2hl52Kj
►►ಕಂಬಳಕ್ಕೆ ಸದ್ಯಕ್ಕಿಲ್ಲ ಆತಂಕ: ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ: http://bit.ly/2zCjMfe
►►ಪತಿ-ಪತ್ನಿಯಿಂದ ಆತ್ನಹತ್ಯೆಯ ಯತ್ನ. ಪತಿ ಮೃತ. ಪತ್ನಿ ಗಂಭೀರ: http://bit.ly/2zCmyBh
►►ಟಿಪ್ಪು ಜಯಂತಿ ಹಿನ್ನೆಲೆ: ಜಿಲ್ಲೆಯಾದ್ಯಂತ ಸೆಕ್ಷನ್ 144: http://bit.ly/2yzutiu

Related Tags: MC Mary Kom, Asian Women''s Boxing Championships, Kim Hyang Mi, North Korea, India, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಎಂ ಸಿ ಮೇರಿ ಕೋಮ್, ಏಷ್ಯನ್ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್, ಕಿಮ್ ಹೈಯಾಂಗ್ ಮಿ, ಕರಾವಳಿಕರ್ನಾಟಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ