ಹೃದಯವಿದ್ರಾವಕ! ಈಜಲು ತೆರಳಿದ್ದ ತಂದೆ ಮಕ್ಕಳು ದಾರುಣ ಸಾವು

ಕರಾವಳಿ ಕರ್ನಾಟಕ ವರದಿ

ಕೊಪ್ಪಳ:
ದೇವಸ್ಥಾವೊಂದರಲ್ಲಿ ಪೂಜೆ ಸಲ್ಲಿಸಿದ ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದ ಹೈದರಾಬಾದ್ ಮೂಲದ ತಂದೆ, ಮಕ್ಕಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಕೆರೆಯಲ್ಲಿ ಘಟಿಸಿದೆ.

ಮೃತರನ್ನು ತಂದೆ ರಾಘವೇಂದ್ರ (35) ಮಕ್ಕಳಾದ ಪವಿತ್ರ (14), ಪವನಿ (12), ಪೌರ್ಣಿಕಾ, ಆಶೀಶ್(14) ಎಂದು ಗುರುತಿಸಲಾಗಿದೆ.

ಹೈದರಾಬಾದ್ ಮೂಲದ ರಾಘವೇಂದ್ರ ಎಂಬವರು ತಮ್ಮ ನಾಲ್ವರು ಮಕ್ಕಳ ಜತೆ ಗಂಗಾವತಿಯಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು.

ಸೋಮವಾರ ಹೇಮಗುಡ್ಡದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಬಳಿಕ ಕೆರೆಗೆ ಈಜಲು ತೆರಳಿದ್ದರು. ಈ ವೇಳೆಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿದ್ದ ಮಕ್ಕಳನ್ನು ರಕ್ಷಿಸಲು ರಾಘವೇಂದ್ರ ಮುಂದಾದಾಗ ಅವರೂ ಸುಳಿಗೆ ಸಿಲುಕಿ ಮಕ್ಕಳೊಂದಿಗೆ ನೀರುಪಾಲಾಗಿದ್ದಾರೆ.


ಐವರ ಮೃತದೇಹವನ್ನು ಈಜುಗಾರರ ಸಹಾಯದಿಂದ ಮೇಲಕ್ಕೆ ತರಲಾಗಿದೆ. ಗಂಗಾವತಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಟಿಪ್ಪು ಜಯಂತಿ ಹಿನ್ನೆಲೆ: ಜಿಲ್ಲೆಯಾದ್ಯಂತ ಸೆಕ್ಷನ್ 144:
http://bit.ly/2yzutiu
►►ಹಿಂದೂ ಭಯೋತ್ಪಾದನೆ ಬಗ್ಗೆ ಮಾತನಾಡುವವರು ದೇಶವಿರೋಧಿಗಳು: ಯೋಗಿ ಆದಿತ್ಯನಾಥ್: http://bit.ly/2j3JpOY
►►ಅವಹೇಳನಕಾರಿ ವ್ಯಂಗ್ಯಚಿತ್ರ ಆರೋಪ: ತಮಿಳುನಾಡು ಕಾರ್ಟೂನಿಸ್ಟ್ ಬಂಧನ: http://bit.ly/2lSwksV
►►ಕರಾಟೆ ರಾಷ್ಟ್ರೀಯ ಚಾಂಪಿಯನ್‌ಶಿಪ್: ಮಂಗಳೂರು ಮೇಯರ್‌ಗೆ ಚಿನ್ನ: http://bit.ly/2zivCbe
►►ಪ್ರದರ್ಶನ ನೀಡುತ್ತಿರುವಾಗಲೇ ಕುಸಿದು ಬಿದ್ದ ದೇಹದಾರ್ಢ್ಯ ಪಟು ಮೃತ್ಯು: http://bit.ly/2hKEbnP
►►ಟೆಕ್ಸಾಸ್‌ ಚರ್ಚ್‌ನಲ್ಲಿ ಯುವಕನಿಂದ ಗುಂಡಿನ ದಾಳಿ. 26 ಮಂದಿಯ ಕಗ್ಗೊಲೆ: http://bit.ly/2zijMOm
►►ನಟ ಕಮಲ ಹಾಸನ್‌ಗೆ ಗುಂಡಿಕ್ಕಿ: ಹಿಂದೂ ಮಹಾಸಭಾ: http://bit.ly/2h6nwKL
►►ಡಿವೈಡರ್‌ಗೆ ಢಿಕ್ಕಿಯಾದ ಕಾರು: ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತ್ಯು: http://bit.ly/2yw3B35
►►ವಾಟ್ಸ್ಯಾಪ್ ಗ್ರೂಪ್ ವಿರುದ್ದ ಕುಮಟಾ ಪತ್ರಕರ್ತರು ಕೆಂಡ: http://bit.ly/2j1xlxG

Related Tags: Koppal, Hemadagudda Lake, Drown in Lake, Five Death, Gangavathi Police, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ