29ನೇ ಹುಟ್ಟುಹಬ್ಬ ಆಚರಿಸಿಕೊಂಡ ವಿರಾಟ್ ಕೊಹ್ಲಿ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಟೀಂ ಇಂಡಿಯಾದ ರನ್‌ ಮಷಿನ್‌ ವಿರಾಟ್ ಕೊಹ್ಲಿ ತಂಡದ ಸದಸ್ಯರೊಂದಿಗೆ ಕೇಕ್‌ ಕತ್ತರಿಸಿ ತಮ್ಮ 29ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ರಾಜ್ ಕೋಟ್ ನಲ್ಲಿ ನಿನ್ನೆ ನಡೆದ ಕಿವೀಸ್ ವಿರುದ್ಧದ ಪಂದ್ಯದಲ್ಲಿ 40 ರನ್ ಗಳ ಅಂತರದಲ್ಲಿ ಭಾರತ ತಂಡ ಸೋಲನ್ನು ಅನುಭವಿಸಿತ್ತು. ಸೋಲಿನ ನಡುವೆಯೂ ಟೀ ಇಂಡಿಯಾ ಆಟಗಾರರು ಕ್ರಿಕೆಟ್ ಮೈದಾನ ಮಾದರಿಯ ಕೇಕ್ ತರಿಸಿ ವಿರಾಟ್ ಕೊಹ್ಲಿಯವರ ಜನ್ಮದಿನವನ್ನು ಆಚರಣೆ ಮಾಡಿದರು.

ಒಂಬತ್ತು ವರ್ಷಗಳ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿರುವ ಕೊಹ್ಲಿ, ತಂಡದ ನಾಯಕನಾಗಿಯೂ ಯಶಸ್ಸು ಗಳಿಸಿದ್ದಾರೆ.

29 ವರ್ಷದ ವಿರಾಟ್‌ ಕೊಹ್ಲಿ ಏಕದಿನ ಪಂದ್ಯಗಳಲ್ಲಿ ಮಾಡಿರುವ ಸಾಧನೆ ಹಲವು ಕ್ರಿಕೆಟಿಗರ ಜೀವಮಾನ ಸಾಧನೆಗೆ ಸಮನಾಗಿದೆ. ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿರುವ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಹಿಂದಿಟ್ಟು ಕೊಹ್ಲಿ(32 ಶತಕ) ಎರಡನೇ ಸ್ಥಾನಕ್ಕೇರಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ನಟ ಕಮಲ ಹಾಸನ್‌ಗೆ ಗುಂಡಿಕ್ಕಿ: ಹಿಂದೂ ಮಹಾಸಭಾ:
http://bit.ly/2h6nwKL
►►ಡಿವೈಡರ್‌ಗೆ ಢಿಕ್ಕಿಯಾದ ಕಾರು: ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮೃತ್ಯು: http://bit.ly/2yw3B35
►►ವಾಟ್ಸ್ಯಾಪ್ ಗ್ರೂಪ್ ವಿರುದ್ದ ಕುಮಟಾ ಪತ್ರಕರ್ತರು ಕೆಂಡ: http://bit.ly/2j1xlxG

Related Tags: Virat Kohli, Happy Birthday, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ