ಮತ್ತೆ ಐಸಿಸಿ ಏಕದಿನ ರ‍್ಯಾಂಕಿಂಗ್‌‌ನಲ್ಲಿ ಕೊಹ್ಲಿ ನಂಬರ್ ಒನ್

ಕರಾವಳಿ ಕರ್ನಾಟಕ ವರದಿ

ಮುಂಬೈ:
ಭಾರತ ತಂಡದ ನಾಯಕ, ರನ್ ಮೆಶಿನ್ ಎಂದೇ ಖ್ಯಾತರಾದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟಕ್ಕೆ ಏರಿದ್ದಾರೆ. ಅಲ್ಲದೇ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆಯನ್ನೂ ಮುರಿದಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಜೀವನಶ್ರೇಷ್ಠ 889 ರೇಟಿಂಗ್ಸ್ ಅನ್ನು ಕೊಹ್ಲಿ ಪಡೆದುಕೊಂಡಿದ್ದು, ಈ ಹಿಂದೆ 887 ರೇಟಿಂಗ್ಸ್ ಪಡೆದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದ್ದರು.

ಭಾನುವಾರ ಸಚಿನ್ ದಾಖಲೆಯನ್ನು ಮುರಿದು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅತಿ ಹೆಚ್ಚು ರೇಟಿಂಗ್ಸ್ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಎಬಿಡಿ ವಿಲಿಯರ್ಸ್ 872 ರೇಟಿಂಗ್ ಪಡೆದು ಮೂರನೇ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾದ ಡೇವಿಡ್ ವಾರ್ನರ್ 865 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.


799 ರೇಟಿಂಗ್ ಪಡೆದು ರೋಹಿತ್ ಶರ್ಮಾ 7ನೇ ಸ್ಥಾನದಲ್ಲಿದ್ದರೆ, 730 ರೇಟಿಂಗ್ ಪಡೆದು ಧೋನಿ 11ನೇ ಸ್ಥಾನದಲ್ಲಿದ್ದಾರೆ. ಶಿಖರ್ ಧವನ್ 15ನೇ ಸ್ಥಾನದಲ್ಲಿದ್ದು, 708 ರೇಟಿಂಗ್ ಪಡೆದುಕೊಂಡಿದ್ದಾರೆ.

ಟಿ 20 ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 729 ರೇಟಿಂಗ್ ಪಡೆಯುವ ಮೂಲಕ ಜಸ್‍ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದರೆ, ಏಕದಿನ ಬೌಲಿಂಗ್ ಪಟ್ಟಿಯಲ್ಲಿ 719 ರೇಟಿಂಗ್ ಪಡೆದು 3ನೇ ಸ್ಥಾನದಲ್ಲಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಬೆಣ್ಣೆ ತಿಂದು ಬೇರೆಯವರ ಬಾಯಿಗೆ ಒರೆಸುವುದು ಕಾಂಗ್ರೆಸ್ ಸಂಸ್ಕೃತಿ: ಸಚಿವ ಹೆಗಡೆ:
http://bit.ly/2ihxFo0
►►ನ್ಯಾಯಾಲಯದ ಆವರಣದಲ್ಲಿ ಸಂಶಯಾಸ್ಪದ ಸಾವು: http://bit.ly/2hpRXfi
►►ವೈದೇಹಿ, ಶ್ಯಾನಭಾಗ್ ಸೇರಿ 62 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ: http://bit.ly/2lx6TNi

Related Tags: Virat Kohli Takes Back No.1, Position in ICC ODI Rankings, AB de Villiers, Sachin Tendulkar, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ