ಎರಡನೇ ಏಕದಿನ ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ

ಕರಾವಳಿ ಕರ್ನಾಟಕ ವರದಿ

ಪುಣೆ:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 6 ವಿಕೆಟ್‌ಗಳ ಜಯ ದಾಖಲಿಸಿದೆ.

ಗೆಲ್ಲಲು 231 ರನ್‌ಗಳ ಸುಲಭ ಸವಾಲನ್ನು ಪಡೆದ ಭಾರತ 46 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 232 ರನ್ ಹೊಡೆಯುವ ಮೂಲಕ ಗುರಿ ಮುಟ್ಟಿತು.

ಭಾರತದ ಪರ ಶಿಖರ್ ಧವನ್ 68 ರನ್(84 ಎಸೆತ, 5 ಬೌಂಡರಿ, 2 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೆ 64 ರನ್( 92 ಎಸೆತ, 4 ಬೌಂಡರಿ) ವಿರಾಟ್ ಕೊಹ್ಲಿ 29 ರನ್(29 ಎಸೆತ, 3 ಬೌಂಡರಿ, 1 ಸಿಕ್ಸರ್, ಹಾರ್ದಿಕ್ ಪಾಂಡ್ಯ 30 ರನ್ (31 ಎಸೆತ, 2 ಬೌಂಡರಿ, 1 ಸಿಕ್ಸರ್), ಧೋನಿ ಔಟಾಗದೆ 18 ರನ್( 21 ಎಸೆತ, 3 ಬೌಂಡರಿ) ಹೊಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಕಿವೀಸ್‌ ನಾಡಿನ ತಂಡಕ್ಕೆ ಭುವನೇಶ್ವರ್‌ ಕುಮಾರ್‌ ಸಿಂಹ ಸ್ಪಪ್ನವಾದರು.





ಇನ್‌ಸ್ವಿಂಗ್‌ ಮತ್ತು ಯಾರ್ಕರ್‌ ಎಸೆತಗಳ ಮೂಲಕ ಎದುರಾಳಿಗಳ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದ ಅವರು ತಂಡಕ್ಕೆ ಮೇಲುಗೈ ತಂದುಕೊಟ್ಟರು. ಅವರಿಗೆ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ಯಜುವೇಂದ್ರ ಚಾಹಲ್ ಉತ್ತಮ ಬೆಂಬಲ ನೀಡಿದರು. ಇವರು ತಲಾ ಎರಡು ವಿಕೆಟ್‌ ಗಳಿಸಿದರು. ಹಾರ್ದಿಕ್ ಪಾಂಡ್ಯ ಒಂದು ವಿಕೆಟ್ ಉರುಳಿಸಿದರು.

ನ್ಯೂಜಿಲೆಂಡ್ ಪರ ಟಾಮ್ ಲಥಾಮ್ 38, ಹೆನ್ರಿ ನಿಕೊಲ್ಸ್ 42, ಕೊಲಿನ್ ಡೆ ಗ್ರಾಡ್‍ಹೋಮ್ 41, ಸ್ಯಾಟ್ನಾರ್ 29 ರನ್ ಹೊಡೆದರು.

Related Tags: India vs New Zealand 2017, 2nd ODI in Pune, India Win, Sports News, Cricket News, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ