ಟಿಪ್ಪು ಜಯಂತಿ ಆಹ್ವಾನ. ನನ್ನ ಹೆಸರು ಹಾಕಬೇಡಿ: ಶೋಭಾ ಕರಂದ್ಲಾಜೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ಟಿಪ್ಪು ಜಂಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಿರುವ ಸಂಸದೆ ಶೋಭಾ ಕರಂದ್ಲಾಜೆ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಜಿಲ್ಲಾಧಿಕಾರಿಗಳಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.  ಟಿಪ್ಪು ಕನ್ನಡ ಹಾಗೂ ಹಿಂದೂ ವಿರೋಧಿಯಾಗಿದ್ದು ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರು ಸೇರಿಸಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಕೂಡ ಇದೇ ರೀತಿಯ ನಿರ್ಣಯವನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ತಿಳಿದುಬಂದಿದೆ.

ಕಾಂಗ್ರೆಸ್‌ ಸರ್ಕಾರ ಟಿಪ್ಪು ಜಯಂತಿ ಸಂಘಟಿಸಲು ಉತ್ಸುಕವಾಗಿದೆ. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕಬಾರದು ಎಂದು ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರು ಟ್ವೀಟ್‌ ಮಾಡಿದ್ದಾರೆ.

ಟಿಪ್ಪು ಕನ್ನಡ ವಿರೋಧಿ ಮತ್ತು ಹಿಂದೂ ವಿರೋಧಿಯಾಗಿದ್ದ. ಎಲ್ಲಾ ಕನ್ನಡಿಗರು ಟಿಪ್ಪು ಜಯಂತಿಯನ್ನು ವಿರೋಧಿಸುತ್ತಾರೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸರ್ಕಾರ ಟಿಪ್ಪು ಜಯಂತಿ ಆಚರಿಸಬಾರದು ಎಂದಿರುವ ಶೋಭಾ ಕರಂದ್ಲಾಜೆ ಅವರು, ಸರ್ಕಾರ ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದು ಆಪಾದಿಸಿದ್ದಾರೆ.

ಇದನ್ನೂ ಓದಿ:
►►ಟಿಪ್ಪು ಜಯಂತಿಗೆ ನನ್ನ ಹೆಸರು ಹಾಕಬೇಡಿ: ಸಚಿವ ಅನಂತ ಕುಮಾರ ಹೆಗಡೆ
http://bit.ly/2yVBQk2

ಇಂದು ಹೆಚ್ಚು ಓದಿದ ಸುದ್ದಿಗಳು
►►ಕಾಲಿಗೆ ಗುಂಡು ಹಾರಿಸಿ ಕುಖ್ಯಾತ ರೌಡಿಶೀಟರ್ ಬಂಧನ
http://bit.ly/2zEuXRi
►►ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸಾವು: http://bit.ly/2gyP3rE
►►ಹಿರಿಯ ಪತ್ರಕರ್ತ, ಪರಿಸರ ಹೋರಾಟಗಾರ ಜಯಂತ್ ಪಡುಬಿದ್ರಿ ಇನ್ನಿಲ್ಲ http://bit.ly/2gvzr8o
►►ಎಲ್ಲದಕ್ಕೂ ಲವ್ ಜಿಹಾದ್ ಅನ್ನಬೇಡಿ. ಅನೀಸ್ - ಶೃತಿ ಮದುವೆಗೆ ಹೈಕೋರ್ಟ್ http://bit.ly/2zoIYBL
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ: http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi

Related Tags: Tippu Jayanti, Tipu Birthday Celebrations, Invitation, Shobha Karandlaje, Udupi-Chikmagalur MP
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ