ಹಿರಿಯ ಪತ್ರಕರ್ತ, ಪರಿಸರ ಹೋರಾಟಗಾರ ಜಯಂತ್ ಪಡುಬಿದ್ರಿ ಇನ್ನಿಲ್ಲ

ಕರಾವಳಿ ಕರ್ನಾಟಕ ವರದಿ

ಪಡುಬಿದ್ರಿ:
ಕರಾವಳಿಯ ಹಿರಿಯ ಪತ್ರಕರ್ತ, ಸೃಜನಶೀಲ ಲೇಖಕ ಮತ್ತು ಪರಿಸರ ಹೋರಾಟಗಾರ ಜಯಂತ್ ಪಡುಬಿದ್ರಿ (58) ನಿಧನರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಪೀಡಿತರಾಗಿದ್ದ ಜಯಂತ್ ಪಡುಬಿದ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

ಉದಯವಾಣಿ ದೈನಿಕದ ಮೂಲಕ ತಮ್ಮ ಪತ್ರಕರ್ತ ವೃತ್ತಿ ಜೀವನ ಆರಂಭಿಸಿದ್ದ ಜಯಂತ್ ಪಡುಬಿದ್ರಿ ಹನ್ನೆರಡು ವರ್ಷಗಳ ಕಾಲ ಉದಯವಾಣಿಯಲ್ಲಿ ಕೆಲಸ ಮಾಡಿದ್ದರು.

ಪರಿಸರ ಹೋರಾಟಕ್ಕೆ ಇಳಿದ ಬಳಿಕ ಉದಯವಾಣಿ ಪತ್ರಿಕೆಯ ಜೊತೆಗಿನ ಅವರ ವೃತ್ತಿಜೀವನ ಕೊನೆಗೊಂಡಿತ್ತು. ಬಳಿಕ ಜಯಂತ್ ಜನವಾಹಿನಿ, ಜಯಕಿರಣ ಮುಂತಾದ ಪತ್ರಿಕೆಗಳಿಗಾಗಿ ದುಡಿದಿದ್ದರು.

ವಸ್ತುನಿಷ್ಟ ಮತ್ತು ನಿಷ್ಟೂರ ವರದಿಗಳಿಗೆ ಪ್ರಸಿದ್ದರಾಗಿದ್ದ ಜಯಂತ್ ಪಡುಬಿದ್ರಿ ತಮ್ಮ ವರದಿಗಳು, ಲೇಖನಗಳು ಮತ್ತು ಅಂಕಣಗಳ ಮೂಲಕ ಕರಾವಳಿ ಭಾಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ತುಳು ಭಾಷೆ, ತುಳುನಾಡ್ನ ಸಂಸ್ಕೃತಿಗಳ ಬಗ್ಗೆ ವಿಶೇಷ ಆಸಕ್ತಿ ಇಟ್ಟುಕೊಂಡಿದ್ದ ಜಯಂತ್ ಈ ಕುರಿತು ಅಧ್ಯಯನ ನಡೆಸಿದ್ದರು.

ಪತ್ರಕರ್ತನಾಗಿ ಉದಯವಾಣಿಯಲ್ಲಿ ಕೆಲಸ ಮಡುತ್ತಿರುವಾಗಲೆ ಜಯಂತ್ ಪರಿಸರ ಹೋರಾಟಗಳಲ್ಲಿ ತೊಡಗಿಸಿಕೊಂಡು ಕರಾವಳಿಗೆ ಲಗ್ಗೆ ಇಡುತ್ತಿದ್ದ ಕೈಗಾರಿಕೆಗಳ ವಿರುದ್ಧ ಹೋರಾಟ ರೂಪಿಸಿ ಸಕ್ರಿಯವಾಗಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.

ಮೂಲ್ಕಿ-ಮೂಡಬಿದಿರೆ ಪ್ರದೇಶದಲ್ಲಿ ಎಂಜಲ್ ಹಾರ್ಡ್ ಪೈಂಟ್ಸ್ ಕಾರ್ಖಾನೆ ಅಸ್ಥಿತ್ವಕ್ಕೆ ಬರುತ್ತದೆ ಎಂಬ ಸುದ್ದಿ ತಿಳಿದಾಗ ರೂಪುಗೊಂಡ ಜಯಂತ್ ಅವರ ಪರಿಸರವಾದಿ ಹೋರಾಟ ಬಳಿಕ ಇಂತಹ ಅನೇಕ ಬೃಹತ್ ಕೈಗಾರಿಕೆಗಳ ವಿರುದ್ಧವೂ ಮುಂದುವರಿಯಿತು.

ಎಂಆರ್‌ಪಿಲ್, ಕೊಜೆಂಟ್ರಿಕ್ಸ್ ಮುಂತಾದವುಗಳ ವಿರುದ್ಧವೂ ಜಯಂತ್ ಹೋರಾಟ ಮಾಡಿದ್ದರು. ಜಯಂತ್ ಪಡುಬಿದ್ರಿ ಅವರ ವೃತ್ತಿ ಮತ್ತು ಹೋರಾಟಗಳಿಂದ ಅನೇಕ ಮಂದಿ ಪ್ರಭಾವಿತರಾಗಿದ್ದರು.

ಅವಿವಾಹಿತರಾಗಿರುವ ಜಯಂತ್ ಪಡುಬಿದ್ರಿ ತಮ್ಮ 58ನೆಯ ವಯಸ್ಸಿನಲ್ಲಿಯೇ ನಿಧನ ಹೊಂದಿದ್ದು ಕರಾವಳಿಯ ಮಟ್ಟಿಗೆ ತುಂಬಲಾರದ ನಷ್ಟವಾಗಿದೆ. ಅವರ ಅಂತ್ಯ ಸಂಸ್ಕಾರ ಇಂದು ನಡೆಯಲಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►`ಕಲ್ಯಾಣಮಸ್ತು': ಅರ್ಚಕರನ್ನು ಮದುವೆಯಾದರೆ ಸಿಗಲಿದೆ 3 ಲಕ್ಷ ರೂ. ಗಿಫ್ಟ್!:
http://bit.ly/2xSeirz
►►ಎಲ್ಲದಕ್ಕೂ ಲವ್ ಜಿಹಾದ್ ಅನ್ನಬೇಡಿ. ಅನೀಸ್ - ಶೃತಿ ಮದುವೆಗೆ ಹೈಕೋರ್ಟ್ ಮಾನ್ಯತೆ: http://bit.ly/2zoIYBL
►►ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರ ಫೋಟೋ ಸಲ್ಲದು: ಉಲೂಮ್ http://bit.ly/2xQufyn
►►ಮಾದಕ ವ್ಯಸನಿ ಮಗನ ಕೊಂದು ನೇಣಿಗೆ ಶರಣಾದ ತಂದೆ: http://bit.ly/2ys47yb

Related Tags: Jayanth Padubidri Death, Journalist Jayanth Padubidri, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ