ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಹಬ್ಬ ಆಚರಣೆ

ಕರಾವಳಿ ಕರ್ನಾಟಕ ವರದಿ

ಶ್ರೀನಗರ:
ಪ್ರಧಾನಿ ನರೇಂದ್ರ ಮೋದಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದು, ಅಲ್ಲಿಯೇ ಗಡಿಯಲ್ಲಿರುವ ಯೋಧರೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಮೂಲಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ಗುರೇಜ್ ಸೆಕ್ಟರ್‌ಗೆ ಭೇಟಿ ನೀಡಿದ್ದು, ಅಲ್ಲಿನ ಗಡಿ ನಿಯಂತ್ರಣ ರೇಖೆ ಎಲ್ ಒಸಿಯಲ್ಲಿರುವ ಸೇನಾ ಕ್ಯಾಂಪ್‌ಗೆ ಭೇಟಿ ನೀಡಿ ಯೋಧರಿಗೆ ದೀಪಾವಳಿ ಹಬ್ಬದ  ಶುಭಕೋರಿದ್ದಾರೆ ಎಂದು ತಿಳಿದುಬಂದಿದೆ.

ನರೇಂದ್ರ ಮೋದಿ ಅವರು 2ನೇ ಬಾರಿಗೆ ಕಾಶ್ಮೀರಕ್ಕೆ ಆಗಮಿಸಿ ಯೋಧರೊಂದಿಗೆ ದೀಪಾವಳಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. 

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು, ಈ ವೇಳೆ ಸೈನಿಕರಿಗೆ ಸಿಹಿ ಹಂಚಿ ಹಬ್ಬದ ಶುಭಾಶಯ ಕೋರಿದ್ದಾರೆ.

2014ರಲ್ಲಿ ಅಂದರೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಪ್ರಧಾನಿ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಿ ಯೋಧರಿಗೆ ಹಬ್ಬದ ಶುಭಾಶಯ ತಿಳಿಸಿದ್ದರು,

ಇದೀಗ  2  ವರ್ಷಗಳ ಬಳಿಕ ಮತ್ತೆ ಗಡಿಯಲ್ಲಿರುವ ಸೈನಿಕರ ಭೇಟಿ ಮಾಡಿ ಸೈನಿಕರಿಗೆ ಪ್ರಧಾನಿ ಮೋದಿ ಹಬ್ಬದ ಶುಭಕೋರಿದ್ದಾರೆ. 2015ರಲ್ಲಿ ಪಂಜಾಬ್ ನಲ್ಲಿರುವ ಭಾರತ-ಪಾಕಿಸ್ತಾನದ ಗಡಿ ಪ್ರದೇಶಕ್ಕೆ ತೆರಳಿ ಪ್ರಧಾನಿ ಮೋದಿ ದೀಪಾವಳಿ  ಆಚರಿಸಿಕೊಂಡಿದ್ದರು.

2016ರಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿನ ಸೈನಿಕರನ್ನು ಭೇಟಿ ದೀಪಾವಳಿ ಆಚರಿಸಿಕೊಂಡಿದ್ದರು.
 
ಇಂದು ಹೆಚ್ಚು ಓದಿದ ಸುದ್ದಿಗಳು
►►ಯುಪಿಎ ಕಾಲದಲ್ಲಿ ಉದ್ಘಾಟನೆಯಾಗಿದ್ದ ಸಂಸ್ಥೆಯನ್ನೇ ಮತ್ತೆ ಉದ್ಘಾಟಿಸಿದ ಮೋದಿ! http://bit.ly/2x6MfVy
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ: http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi
►►ಕಾರು ಅಡ್ಡಗಟ್ಟಿ ಗಾಯಕಿಗೆ ಗುಂಡಿಕ್ಕಿ ಕೊಲೆ: http://bit.ly/2yxe8d4
►►ಮತ್ತೊಂದು ವಿವಾದಿತ ಹೇಳಿಕೆ! ಹಿಂದೆ ತಾಜ್ ಮಹಲ್ ಹಿಂದೂ ದೇಗುಲವಾಗಿತ್ತು: http://bit.ly/2gjdXHW

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ