‘ವಿಶ್ವಾಸದ ಮನೆ’ಯಲ್ಲಿ ಕಾಂಗ್ರೆಸ್ ದೀಪಾವಳಿ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಕಟಪಾಡಿ ಬಳಿ ಶಂಕರಪುರ ‘ವಿಶ್ವಾಸದ ಮನೆ’ಯಲ್ಲಿ ಕಾಪು ಕಾಂಗ್ರೆಸ್ ಹಿಂದುಳಿದ ವರ್ಗದ ವತಿಯಿಂದ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಆಚರಿಸಲಾಯಿತು

ಕಾಪು ಶಾಸಕ ವಿನಯ ಕುಮಾರ ಸೊರಕೆಯವರು ವಿಶ್ವಾಸದ ಮನೆಯಲ್ಲಿನ ಮಾನವೀಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸುವ ಮೂಲಕ ಸಾರ್ಥಕತೆಯನ್ನು ಕಾಣಬೇಕು ಎಂದರು.

ದೀಪಾವಳಿಯನ್ನು ಅನಾಥರ ವಿಶ್ವಾಸದ ಮನೆಯಲ್ಲಿ ಕಾಂಗ್ರೆಸ್ ಪಕ್ಷ ಆಚರಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಸೊರಕೆಯವರು ಅಭಿಪ್ರಾಯ ಪಟ್ಟರು. ವಿಶ್ವಾಸದ ಮನೆಯಲ್ಲಿ ಕೇವಲ ನಮ್ಮ ರಾಜ್ಯದವರಷ್ಟೇ ಅಲ್ಲ, ದೇಶದ ಎಲ್ಲ ಮೂಲೆಗಳಿಂದಲೂ ಮಾನಸಿಕ ಅಸ್ವಸ್ಥರು, ದುರ್ಬಲರನ್ನು ಕರೆತಂದು ಶುಷ್ರೂಶೆ ನೀಡಲಾಗುತ್ತಿದೆ. ನೂರಾರು ಮಂದಿ ಮಾನಸಿಕ ರೋಗಿಗಳು ಇಲ್ಲಿ ಗುಣಮುಖರಾಗಿ ತಮ್ಮ ಮನೆಗಳಿಗೆ ತಮ್ಮ ರಾಜ್ಯಗಳಿಗೆ ತೆರಳಿದ್ದಾರೆ ಎಂದು ಸೊರಕೆಯವರು ವಿಶ್ವಾಸದ ಮನೆಯ ಮಹತ್ತರ ಕಾರ್ಯವನ್ನು ಶ್ಲಾಘಿಸಿದರು.

ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ, ಬೆಳಪು ಪಂಚಾಯತ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಹಿಂದುಳಿದ ವರ್ಗ ಮೋರ್ಚಾದ ಅಧ್ಯಕ್ಷ ದೀಪಕ್ ಎರ್ಮಾಳ್, ಆಶಾ ಕಟಪಾಡಿ. ತಾ.ಪಂ ಸದಸ್ಯರಾದ ಗೀತಾ ವಾಗ್ಲೆ, ರಾಜೇಶ್ ಶೆಟ್ಟಿ, ದಿನೇಶ್ ಕೋಟ್ಯಾನ್ ಫಲಿಮಾರ್, ಕಾಪು ಪುರಸಭಾಧ್ಯಕ್ಷೆ ಸೌಮ್ಯ ಸಂಜೀವ, ಉಪಾಧ್ಯಕ್ಷ ಉಸ್ಮಾನ್, ಹರೀಶ್ ನಾಯಕ್ ಕಾಪು, ಮಾಧವ ಪಾಲನ್. ಪ್ರೆಸಿಲ್ಲಾ ಡಿ’ಮೆಲ್ಲೊ, ಹರೀಶ್ ಶೆಟ್ಟಿ ಪಾಂಗಾಳ, ಅಶೋಕ್ ರಾವ್, ನಾಗೇಶ್ ಸುವರ್ಣ, ಕೇಶವ ಹೆಜಮಾಡಿ ಮುಂತಾದವರು ಇದ್ದರು. ಈ ಸಂದರ್ಭ ಮಕ್ಕಳಿಗೆ, ವೃದ್ಧರಿಗೆ ಸಿಹಿತಿಂಡಿ, ಬಟ್ಟೆ ವಿತರಿಸಲಾಯಿತು.

ಬಡಮನೆಗಳಿಗೆ ಇಪ್ಪತ್ತೈದು ಕೆಜಿ ಅಕ್ಕಿ ನೀಡಿದ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್
ಕಾಪು ಬಳಿ ಮುಳೂರಿನ ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ವತಿಯಿಂದ ಇಪ್ಪತ್ತೈದು ಮನೆಗಳಿಗೆ ಇಪ್ಪತ್ತೈದು ಕೆಜಿ ಅಕ್ಕಿ, ಐದು ಕೆಜಿ ಬೆಳ್ತಿಗೆ ಅಕ್ಕಿ, ಒಂದು ಲೀಟರ್ ಎಳ್ಳೆಣ್ಣೆ ಹಾಗೂ ಬೆಲ್ಲ ವಿತರಿಸಲಾಯಿತು.

ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಕಾರ್ಯದರ್ಶಿ ಧಿರೇಶ್ ಮೂಳೂರು ಅವರು ಬಡವರ ಮನೆಗಳಿಗೆ ಹಣವಂತರಲ್ಲದ ನಾವು ನಿತ್ಯೋಪಯೋಗಿ ವಸ್ತುಗಳನ್ನು ನೀಡುತ್ತಿದ್ದೇವೆ. ದಾನಿಗಳ ಕೊಡುಗೆಯಿಂದ ಬಡವರ ಮನೆ-ಮನ ಬೆಸೆಯುವ ಕಾರ್ಯವನ್ನು ದೀಪಾವಳಿ ಸಂದರ್ಭ ಮಾಡುತ್ತಿದ್ದೇವೆ. ಉಳ್ಳವರು ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸುವ ಸಂದರ್ಭ ಬಡವರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸಂದರ್ಭದಲ್ಲಿ ಮನೆ-ಮನಗಳನ್ನು ಬೆಸೆಯುವ ದೀಪಾವಳಿ ಹಬ್ಬವನ್ನು ಎಲ್ಲರೂ ಖುಶಿಯಿಂದ ಆಚರಿಸುವಂತಾಗಲಿ ಎಂದು ಸಂಘದ ಪ್ರತೀ ಸದಸ್ಯರ ಬೆವರ ಹನಿ ಈ ಕೊಡುಗೆಯಲ್ಲಿದೆ ಎಂದಿದ್ದಾರೆ.

ದುಬೈ ಸಂಚಾಲಕ ಪ್ರಶಾಂತ್ ಸುವರ್ಣ ವಿತರಣೆಗೆ ಚಾಲನೆ ನೀಡಿದರು. ಸಂಘದ ಗೌರವಾಧ್ಯಕ್ಷ ಅಶೋಕ್ ಪುತ್ರನ್, ಮಧುಕಿರಣ್, ಪ್ರತೀಕ್ ಸುವರ್ಣ, ಜಿತೇಶ್ ಕುಮಾರ್, ಸುಕೇಶ್ ಮೂಳೂರು, ನಾಗೇಶ್ ಅಮೀನ್, ಸುನೀಲ್ ಕರ್ಕೇರಾ, ಸುರೇಶ್  ಮೂಳೂರು, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಂಗಳೂರು: ಗಾಂಜಾ ಸೇವಿಸುತ್ತಿದ್ದ ಏಳು ವಿದ್ಯಾರ್ಥಿಗಳ ಬಂಧನ:
http://bit.ly/2zka2C8
►►ಯುಪಿಎ ಕಾಲದಲ್ಲಿ ಉದ್ಘಾಟನೆಯಾಗಿದ್ದ ಸಂಸ್ಥೆಯನ್ನೇ ಮತ್ತೆ ಉದ್ಘಾಟಿಸಿದ ಮೋದಿ! http://bit.ly/2x6MfVy
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ: http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi
►►ಮತ್ತೊಂದು ವಿವಾದಿತ ಹೇಳಿಕೆ! ಹಿಂದೆ ತಾಜ್ ಮಹಲ್ ಹಿಂದೂ ದೇಗುಲವಾಗಿತ್ತು: http://bit.ly/2gjdXHW

Related Tags: Kannada News, Karnataka News, Coastal Karnataka News, Karavali News, Karavali Karnataka, Latest Kannada News, ದೀಪಾವಳಿ, ವಿನಯ್ ಕುಮಾರ್ ಸೊರಕೆ, ಕಾಪು ಕಾಂಗ್ರೆಸ್, ಕನ್ನಡ ಸುದ್ದಿ, ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ