ಯುಪಿಎ ಕಾಲದಲ್ಲಿ ಉದ್ಘಾಟನೆಯಾಗಿದ್ದ ಸಂಸ್ಥೆಯನ್ನೇ ಮತ್ತೆ ಉದ್ಘಾಟಿಸಿದ ಮೋದಿ!

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಈಗಾಗಲೇ ಅಸ್ಥಿತ್ವದಲ್ಲಿದ್ದ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು (ಎಐಐಎ) ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಉದ್ಘಾಟನೆ ಮಾಡಿದ್ದಾರೆ ಎಂಬ ಸೋಜಿಗದ ಸಂಗತಿ ಈಗ ಬೆಳಕಿಗೆ ಬಂದಿದೆ.

ದೇಶದ ಮೊದಲ ಆಯುರ್ವೇದ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸುತ್ತಿರುವುದಾಗಿ ಪ್ರಧಾನಮಂತ್ರಿಯವರ ಕಚೇರಿಯ ಟ್ವಿಟರ್‌ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿತ್ತು. ಆದರೆ ದಾಖಲೆಗಳ ಪ್ರಕಾರ, 7 ವರ್ಷಗಳ ಹಿಂದೆಯೇ ಉಪಿಎ ಸರ್ಕಾರದ ಅವಧಿಯಲ್ಲಿ ಎಐಐಎ ಸ್ಥಾಪನೆಯಾಗಿತ್ತು ಎಂಬುದು ತಿಳಿದುಬಂದಿದೆ.

2010ರ ಅಕ್ಟೋಬರ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂದಿನ ರಾಜ್ಯ ಖಾತೆ ಸಚಿವರಾಗಿದ್ದ ಎಸ್‌. ಗಾಂಧಿಸೆಲ್ವನ್ ಅವರು ಎಐಐಎ ಉದ್ಘಾಟನೆ ಮಾಡಿದ್ದಾಗಿ ಕೇಂದ್ರ ಸರ್ಕಾರದ ಪ್ರೆಸ್‌ ಇನ್‌ಫಾರ್‌ಮೆಷನ್ ಬ್ಯೂರೋದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಗೊಂಡಿದೆ.

ಯುಪಿಎ ಸರ್ಕಾರದ ಮಿತ್ರ ಪಕ್ಷವಾಗಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮುಖಂಡರಾದ ಗಾಂಧಿಸೆಲ್ವನ್ 2009ರಿಂದ 2013ರ ವರೆಗೆ ಯುಪಿಎ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಕಳೆದ ಏಳು ವರ್ಷಗಳಿಂದ ಅನೇಕ ರೋಗಿಗಳು ಎಐಐಎ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನನ್ನ ತಾಯಿಗೆ ಉಚಿತ ಚಿಕಿತ್ಸೆ ಕೊಡಿಸಿದ್ದೇನೆ ಎಂದು ಪತ್ರಕರ್ತರೊಬ್ಬರು ಜಾಲತಾಣವೊಂದರಲ್ಲಿ ಉಲ್ಲೇಖಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಎಐಐಎಯನ್ನು ಮಂಗಳವಾರ ಉದ್ಘಾಟಿಸಿದ್ದ ಮೋದಿ ಅವರು, ಪರೋಕ್ಷವಾಗಿ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ತನ್ನ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸದಿದ್ದರೆ ಯಾವುದೇ ದೇಶವೂ ಮುಂದುವರಿಯಲು ಸಾಧ್ಯವಿಲ್ಲ. ಬ್ರಿಟಿಷರ ಕಾಲದಲ್ಲಿ ಆಯುರ್ವೇದವನ್ನು ಕಡೆಗಣಿಸಲಾಗಿತ್ತು. ಸ್ವಾತಂತ್ರ್ಯ ಬಂದ ನಂತರವೂ ಆಯುರ್ವೇದವನ್ನು ಕಡೆಗಣಿಸಲಾಯಿತು. ಆದರೆ ನಾವು ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ ಸೇವೆಯ ಜತೆಗೆ ಆಯುರ್ವೇದವನ್ನು ವಿಲೀನ ಮಾಡುತ್ತೇವೆ’ ಎಂದು ಹೇಳಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ:
http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi
►►ಕಾರು ಅಡ್ಡಗಟ್ಟಿ ಗಾಯಕಿಗೆ ಗುಂಡಿಕ್ಕಿ ಕೊಲೆ: http://bit.ly/2yxe8d4
►►ಮತ್ತೊಂದು ವಿವಾದಿತ ಹೇಳಿಕೆ! ಹಿಂದೆ ತಾಜ್ ಮಹಲ್ ಹಿಂದೂ ದೇಗುಲವಾಗಿತ್ತು: http://bit.ly/2gjdXHW

 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ