ಯುವರಾಜ್ ಸಿಂಗ್ ವಿರುದ್ಧ ಅತ್ತಿಗೆ ಆಕಾಂಕ್ಷಾರಿಂದ ಕೇಸ್

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಭಾರತದ ಖ್ಯಾತ ಕ್ರಿಕೆಟಿಗ, ಆಲ್‌ರೌಂಡರ್ ಯುವರಾಜ್ ಸಿಂಗ್, ಸಹೋದರ ಜೋರಾವರ್ ಸಿಂಗ್ ಮತ್ತು ತಾಯಿ ಶಬ್ನಂ ಸಿಂಗ್ ವಿರುದ್ಧ ಯುವರಾಜ್ ಸಿಂಗ್ ಸಹೋದರ ಜೋರಾವರ್ ಪತ್ನಿ ಹಾಗೂ ಹಿಂದಿ ಬಿಗ್ ಬಾಸ್ ಸೀಸನ್-10 ಸ್ಪರ್ಧಿ ಆಕಾಂಕ್ಷಾ ಶರ್ಮಾ ಕೌಟುಂಬಿಕ ಹಿಂಸೆಯ ಕೇಸ್ ದಾಖಲಿಸಿದ್ದಾರೆ.

ಪ್ರಕರಣದ ಮೊದಲ ವಿಚಾರಣೆಯನ್ನು ಇದೇ ಅ.21ಕ್ಕೆ ನಿಗದಿಸಲಾಗಿದೆ. ಈ ಬಗ್ಗೆ ಯಾವುದೇ ಹೇಳಿಕೆಯನ್ನು ತಾನು ನೀಡಲಾರೆ ಎಂದು ಆಕಾಂಕ್ಷಾ ಹೇಳಿದ್ದಾರೆ. ಆಕಾಂಕ್ಷಾ ಅವರ ವಕೀಲೆ ಸ್ವಾತಿ ಸಿಂಗ್, ಪ್ರಕರಣ ದಾಖಲಾಗಿರುವುದನ್ನು ದೃಢೀಕರಿಸಿದ್ದಾರೆ.

ಕೌಟುಂಬಿಕ ಹಿಂಸೆ ಎಂದರೆ ಕೇವಲ ದೈಹಿಕ ಹಿಂಸೆ ಎಂದರ್ಥ ಅಲ್ಲ. ಅದು ಮಾನಸಿಕ ಮತ್ತು ಹಣಕಾಸು ಹಿಂಸೆಯನ್ನು ಕೂಡ ಒಳಗೊಂಡಿರುತ್ತದೆ. ಇದಕ್ಕೆ ಯುವರಾಜ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ.

ಜೋರಾವರ್ ಮತ್ತು ಅವರ ತಾಯಿ ನನ್ನ ಕಕ್ಷಿದಾರಳಿಗೆ ಹಿಂಸೆ ಕೊಡುವಾಗ ಯುವರಾಜ್ ಮೂಕ ಪ್ರೇಕ್ಷಕನಾಗಿದ್ದರು. ಹಾಗಾಗಿ ಅವರು ಕೂಡ ಹಿಂಸೆ ನೀಡಿದವರೇ ಆಗಿರುತ್ತಾರೆ ಎಂದು ನ್ಯಾಯವಾದಿ ಸ್ವಾತಿ ಸಿಂಗ್ ಹೇಳಿದ್ದಾರೆ.

ಜೋರಾವರ್ ಮತ್ತು ಅವರ ತಾಯಿ ಆಕಾಂಕ್ಷಾಗೆ ಮಗುವನ್ನು ಪಡೆಯಬೇಕೆಂಬ ಒತ್ತಡ ಹೇರುತ್ತಿದ್ದರು. ಯುವರಾಜ್ ಕೂಡ ಆಕಾಂಕ್ಷಾಗೆ ಮಗು ಪಡೆಯುವಂತೆ ಹೇಳುತ್ತಿದ್ದರು.

ಯುವರಾಜ್ ತನ್ನ ಸಹೋದರ ಮತ್ತು ತಾಯಿಯ ಜತೆ ಸೇರಿಕೊಂಡು ಆಕಾಂಕ್ಷಾಗೆ ಹಿಂಸೆ ನೀಡಿರುತ್ತಾರೆ ಎಂದು ಸ್ವಾತಿ ಸಿಂಗ್ ಹೇಳಿದ್ದು, ಗುರುಗ್ರಾಮ್‌ನಲ್ಲಿ ಯುವರಾಜ್ ಕುಟುಂಬದ ವಿರುದ್ಧ ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಮಂಗಳೂರು: ಲಾಂಡ್ರಿ ಅಂಗಡಿಗೆ ಬೆಂಕಿ:
http://bit.ly/2ysO7fh
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ: http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi
►►ಕಾರು ಅಡ್ಡಗಟ್ಟಿ ಗಾಯಕಿಗೆ ಗುಂಡಿಕ್ಕಿ ಕೊಲೆ: http://bit.ly/2yxe8d4

Related Tags: Yuvraj Singh, Shabnam Singh, Zoravar Singh, Akanksha Sharma, Domestic Violence, Bigg Boss 10 Contestant Akanksha Singh. Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ, ಯುವರಾಜ್
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ