ಮಂಗಳೂರು: ಲಾಂಡ್ರಿ ಅಂಗಡಿಗೆ ಬೆಂಕಿ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಬಿಜೈಯಲ್ಲಿ ಲಾಂಡ್ರಿ ಅಂಗಡಿಯೊಂದರಲ್ಲಿ ಬೆಂಕಿ ಆಕಸ್ಮಿಕದಿಂದ ಭಾರೀ ನಷ್ಟ ಸಂಭವಿಸಿದೆ. ದುಬಾರಿ ಸೀರೆಗಳು ಮತ್ತಿತರ ಬಟ್ಟೆಗಳು ಮತ್ತು ಸೊತ್ತು ಬೆಂಕಿಗಾಹುತಿಯಾಗಿದ್ದು ಒಂದು ಲಕ್ಷ ರೂ. ಹಾನಿ ಅಂದಾಜಿಸಲಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದರಿಂದ ಬೆಂಕಿ ಅನಾಹುತವಾಗಿದೆ ಎನ್ನಲಾಗಿದೆ. ಅಗ್ನಿಶಾಮಕ ದಳ ಸಿಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ಕದ್ರಿ ಪೊಲೀಸರು ರೆನ್ವಿಕ್ ಎಂಬವರ ಒಡೆತನದ ಮೈ ಆಂಗರ್ ಎಂಬ ಈ ಅತ್ಯಾಧುನಿಕ ಲಾಂಡ್ರಿಯಲ್ಲಿ ಸಂಭವಿಸಿದ ಬೆಂಕಿ ಅನಾಹುತದ ಬಗ್ಗೆ ಪ್ರಕರಣ ದಾಖಲಿಸಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ತೊಕ್ಕೊಟ್ಟು ಜಂಕ್ಷನ್ ಬಳಿ ಬಾಂಬೆ ಬಝಾರ್ ಎಂಬ ಬೃಹತ್ ಬಟ್ಟೆ ಮಳಿಗೆ ಬೆಂಕಿ ಆಕಸ್ಮಿಕದಿಂದ ಸುಟ್ಟು ಕರಕಲಾದ ಘಟನೆ ವರದಿಯಾಗಿದ್ದನ್ನು ಸ್ಮರಿಸಬಹುದಾಗಿದೆ.



ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಮುಂಬೈಯ ಬದ್ರುದ್ದೀನ್ ಎಂಬವರಿಗೆ ಸೇರಿದ ಬಾಂಬೆ ಕಾಟನ್ ಬಝಾರ್ ಮಳಿಗೆಗೆ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ್ದರಿಂದ ಬೆಂಕಿ ತಗುಲಿತು ಎಂದು ಶಂಕಿಸಲಾಗಿತ್ತು.

ಇಂದು ಹೆಚ್ಚು ಓದಿದ ಸುದ್ದಿಗಳು
►►ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ:
http://bit.ly/2yyilNa
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು: http://bit.ly/2yyBFdi
►►ಕಾರು ಅಡ್ಡಗಟ್ಟಿ ಗಾಯಕಿಗೆ ಗುಂಡಿಕ್ಕಿ ಕೊಲೆ: http://bit.ly/2yxe8d4
►►ಮತ್ತೊಂದು ವಿವಾದಿತ ಹೇಳಿಕೆ! ಹಿಂದೆ ತಾಜ್ ಮಹಲ್ ಹಿಂದೂ ದೇಗುಲವಾಗಿತ್ತು: http://bit.ly/2gjdXHW

Related Tags: Fire in Shop, Laundry Shop, Bijai Laundry Shop, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕದ್ರಿ ಪೊಲೀಸ್, ಲಾಂಡ್ರಿ ಅಂಗಡಿ ಬೆಂಕಿ, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ