ನಾಪತ್ತೆಯಾಗಿದ್ದ ತಾಯಿ-ಮಗು ಶವ ಪತ್ತೆ

ಕರಾವಳಿ ಕರ್ನಾಟಕ ವರದಿ

ಕಾಸರಗೋಡು:
ನಾಪತ್ತೆಯಾಗಿದ್ದ ತಾಯಿ ಹಾಗೂ ಏಳು ತಿಂಗಳ ಮಗುವಿನ ಮೃತದೇಹ ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾದ ಖೇದಕರ ಘಟನೆ ಬಾಡೂರಿನಲ್ಲಿ ವರದಿಯಾಗಿದೆ.

ಇಲ್ಲಿನ ನಿವಾಸಿ ಪದ್ಮನಾಭ ರೈ ಅವರ ಪತ್ನಿ ಶ್ರುತಿ(28) ಹಾಗೂ ಪುತ್ರ ಏಳು ತಿಂಗಳ ಮಗು ಆಯುಶ್ ಸಾವನ್ನಪ್ಪಿದವರು.

ಶ್ರುತಿ ರಾತ್ರಿ ಊಟ ಮುಗಿಸಿ ಮಗುವಿನೊಂದಿಗೆ ಮಲಗಿದ್ದರು. ಬೆಳಗ್ಗೆ ಮನೆಯವರು ಎದ್ದಾಗ ತಾಯಿ ಮಗು ಇಬ್ಬರು ನಾಪತ್ತೆಯಾಗಿದ್ದರು.

ಅಡುಗೆ ಮನೆಯ ಬಾಗಿಲು ತೆರೆದಿದ್ದು, ಕೂಡಲೇ ಅವರಿಗಾಗಿ ಹುಡುಕಾಟ ನಡೆಸಿದರೂ ಇಬ್ಬರು ಪತ್ತೆಯಾಗಿರಲಿಲ್ಲ. ಬಳಿಕ ಮನೆಯ ಆಸುಪಾಸು ಹುಡುಕಾಡಿದಾಗ ತಾಯಿ ಮಗು ಇಬ್ಬರು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂಬಳೆ ಪೊಲಿಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪದ್ಮನಾಭ ರೈ ಬೋಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಎರಡು ವರ್ಷಗಳ ಹಿಂದೆ ಶ್ರುತಿಯವರನ್ನು ವಿವಾಹವಾಗಿದ್ದರು.

ಈ ಕುರಿತು ಕುಂಬಳೆ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ದೀಪಾವಳಿಯ ದಿನವೇ ದುರಂತ: ಕಾರು ಅಪಘಾತದಲ್ಲಿ ವಿದ್ಯಾರ್ಥಿ, ಇಬ್ಬರು ಮಕ್ಕಳು ಸಾವು:
http://bit.ly/2yyBFdi
►►ಕಾರು ಅಡ್ಡಗಟ್ಟಿ ಗಾಯಕಿಗೆ ಗುಂಡಿಕ್ಕಿ ಕೊಲೆ: http://bit.ly/2yxe8d4
►►ಮತ್ತೊಂದು ವಿವಾದಿತ ಹೇಳಿಕೆ! ಹಿಂದೆ ತಾಜ್ ಮಹಲ್ ಹಿಂದೂ ದೇಗುಲವಾಗಿತ್ತು: http://bit.ly/2gjdXHW

Related Tags: Kasargod, Mother & Child Found Dead in Lake, Badoor, Shruthi, Ayush, Kumble Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ