ಕಾರು ಅಡ್ಡಗಟ್ಟಿ ಗಾಯಕಿಗೆ ಗುಂಡಿಕ್ಕಿ ಕೊಲೆ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಹರಿಯಾಣದ ಗಾಯಕಿ ಹರ್ಷಿತಾ ದಹಿಯಾ ಅವರನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಪಾಣಿಪತ್‌ನಲ್ಲಿರುವ ಇಸ್ರಾನಾ ಗ್ರಾಮದಲ್ಲಿ ವರದಿಯಾಗಿದೆ.

ಗಾಯಕಿ ಹರ್ಷಿತಾ ತಮ್ಮ ಕಾರ್ಯಕ್ರಮ ಮುಗಿಸಿ ದೆಹಲಿಯ ನರೇಲಾದಲ್ಲಿರುವ ನಿವಾಸಕ್ಕೆ ಮರಳುತ್ತಿದ್ದ ವೇಳೆ ನಾಲ್ವರು ದುಷ್ಕರ್ಮಿಗಳ ಗುಂಪೊಂದು ಏಕಾಏಕಿ ಗುಂಡಿನ ದಾಳಿ ನಡೆಸಿದೆ.

ನಾಲ್ವರು ದುಷ್ಕರ್ಮಿಗಳು ಹರ್ಷಿತಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಹಿಂಬಾಲಿಸಿದ್ದು, ಚಾಮ್ರಾರಾ ಬಳಿ ಕಾರು ಬರುತ್ತಿದ್ದಂತೆಯೇ ಅಡ್ಡಗಟ್ಟಿ ಗುಂಡಿಕ್ಕಿ ಕೊಲೆಗೈದು ಪರಾರಿಯಾಗಿದ್ದಾರೆ.

ಹರ್ಷಿತಾ  ಮೃತದೇಹವನ್ನು ಪಾಣಿಪತ್‌ನ ಸಾರ್ವಜನಿಕ ಆಸ್ಪತ್ರೆಯಲ್ಲಿರಿಸಲಾಗಿದೆ. ಹತ್ಯೆಗೆ ಕಾರಣಗಳು ಇನ್ನಷ್ಟೇ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.


ಇತ್ತೀಚೆಗೆ ಮಹಿಳೆಯರನ್ನು ಗುಂಡಿಕ್ಕಿ ಕೊಲೆಗೈಯುವ ಹೇಯ ಘಟನೆಗಳು ಆಗಾಗ ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಗೌರಿ ಲಂಕೇಶ್ ಅವರಂತೆಯೇ ನಿರ್ಭೀತ ಪತ್ರಕರ್ತೆಯಾಗಿ ಖ್ಯಾತರಾಗಿದ್ದ ದಾಫ್ನೆ ಕರ್ವಾನಾ ಗಾಲಿಜಿಯ ಅವರನ್ನು ಉತ್ತರ ಆಫ್ರಿಕಾದ ತೀರದ ದ್ವೀಪ ರಾಷ್ಟ್ರದಲ್ಲಿ ಕಾರ್ ಬಾಂಬ್ ದಾಳಿ ನಡೆಸಿ ಹತ್ಯೆಗೈಯಲಾಗಿತ್ತು.

ಬಾಂಬ್ ಸ್ಫೋಟದ ತೀವ್ರತೆಗೆ ಅವರು ಪ್ರಯಾಣಿಸುತ್ತಿದ್ದ ಕಾರು ಛಿದ್ರಛಿದ್ರವಾಗಿ ಸುಟ್ಟು ಹೋಗಿದ್ದು, ರಸ್ತೆ ಬದಿಯ ಗದ್ದೆಗೆ ಹೋಗಿ ಬಿದ್ದಿದೆ. ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಪಟ್ಟಂತೆ ಮಾಲ್ಟಾ ದೇಶದಲ್ಲಿನ ಭ್ರಷ್ಟಾಚಾರ ಕುರಿತು ದಾಫ್ನೆ ಕರ್ವಾನಾ ಗಾಲಿಜಿಯ ತನಿಖೆ ನಡೆಸುತ್ತಿದ್ದರು. ದೇಶದಲ್ಲಿನ ಭ್ರಷ್ಟಾಚಾರ, ಅವ್ಯವಸ್ಥೆ ಕುರಿತು ಬ್ಲಾಗ್‌ನಲ್ಲಿ ಬರೆಯುತ್ತಿದ್ದ ದಾಫ್ನೆ ಅವರನ್ನು ಏಕ ಮಹಿಳೆ ವಿಕಿಲೀಕ್ಸ್ ಎಂದು ಬಣ್ಣಿಸಲಾಗುತ್ತಿತ್ತು.

ದಾಫ್ನೆ ಅವರ ನಿಧನವನ್ನು ಮಾಲ್ಟಾ ದೇಶದ ಪ್ರಧಾನಿ ಜೋಸೆಫ್ ಮಸ್ಕಟ್ ಅವರು, ಹೇಯ ಕೃತ್ಯ ಎಂದು ಖಂಡಿಸಿದ್ದು, ಕೃತ್ಯವೆಸಗಿದವರನ್ನು ಶೀಘ್ರ ಪತ್ತೆಹಚ್ಚಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಹೇಳಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►ನೋಟ್ ಬ್ಯಾನ್ ಬೆಂಬಲಿಸಿದ್ದಕ್ಕೆ ಕ್ಷಮೆ ಕೋರಿದ ಕಮಲ್ ಹಾಸನ್:
http://bit.ly/2ike3n1
►►ದೀಪಾವಳಿಗೆ ಈ ದೇಗುಲ ಸಿಂಗಾರಗೊಳ್ಳುವುದು ನೂರು ಕೋಟಿ ನೋಟಿನಲ್ಲಿ!: http://bit.ly/2hNwRHs
►►ವಿದ್ಯುತ್ ತಂತಿ ಸ್ಪರ್ಶ: ಕೋಳಿ ಅಂಗಡಿ ಮಾಲಕ ಸಾವು: http://bit.ly/2giINk5
►►ಬೈಕ್‌ಗೆ ಗುದ್ದಿದ ಬಸ್: ದಂಪತಿ ದಾರುಣ ಮೃತ್ಯು: http://bit.ly/2yu5tWD

Related Tags: Harshita Dahiya, Haryana, Singer, Shot Dead, ಹರ್ಷಿತಾ ದಹಿಯಾ, ಹರಿಯಾಣ, ಗಾಯಕಿ, ಗುಂಡಿಕ್ಕಿ ಕೊಲೆ, Kannada News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ