ಗೋಹತ್ಯೆ ವಿರುದ್ದ ದನಿ ಎತ್ತಿದ ಮಹಿಳೆಗೆ ಹಲ್ಲೆ

ಕರಾವಳಿ ಕರ್ನಾಟಕ ವರದಿ

ಬೆಂಗಳೂರು:
ತಲಘಟ್ಟಪುರ ಬಳಿಯ ಟಿಪ್ಪು ಸರ್ಕಲ್ ಕಸಾಯಿಖಾನೆ ಬಳಿ ಅಕ್ರಮ ಗೋಹತ್ಯೆ ವಿರುದ್ಧ ದನಿ ಎತ್ತಿದ ಮಹಿಳಾ ಟೆಕ್ಕಿ ಮೇಲೆ ರಾತ್ರಿ ಮಾರಕ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ.

ಪ್ರತಿಷ್ಠಿತ ಸಾಫ್ಟ್ ವೇರ್ ಸಂಸ್ಥೆಯೊಂದರಲ್ಲಿ ಹಿರಿಯ ಅಧಿಕಾರಿಯಾಗಿರುವ ನಂದಿನಿಯವರು ಗೋಹತ್ಯೆ ಬಗ್ಗೆ ದೂರು ನೀಡಿದ್ದಕ್ಕಾಗಿ ಮಾರಕ ಹಲ್ಲೆ ನಡೆದಿದೆ.

ಗೋಹತ್ಯೆ ಬಗ್ಗೆ ದೂರು ನೀಡಿ ಸ್ಥಳಕ್ಕೆ ಇಬ್ಬರು ಪೊಲೀಸ್ ಪೇದೆಗಳೊಂದಿಗೆ ನಂದಿನಿ ಹೋಗಿದ್ದಾಗ ನೂರಕ್ಕೂ ಅಧಿಕ ಜನರು ಹಲ್ಲೆಗೆ ಮುಂದಾಗಿದ್ದರು ಎನ್ನಲಾಗಿದೆ.

ನಂದಿನಿಯವರ ಮೇಲೆ ಹಲ್ಲೆ ನಡೆಯುವಾಗ ಜತೆಯಲ್ಲಿದ್ದ ಇಬ್ಬರು ಪೇದೆಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಈ ಬಗ್ಗೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Related Tags: deadly attack, women techie, Cow slaughter, Woman software engineer, Talaghattapura station, ಬೆಂಗಳೂರು, ಮಾರಣಾಂತಿಕ ಹಲ್ಲೆ, ಮಹಿಳಾ ಟೆಕ್ಕಿ, ಅಕ್ರಮ ಗೋಹತ್ಯೆ, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ,
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ