ಹಲವು ಕಳ್ಳತನಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ

ರವಿತೇಜ ಕಾರವಾರ/ಕರಾವಳಿ ಕರ್ನಾಟಕ ವರದಿ

ಕಾರವಾರ:
ಹಲವಾರು ಕಳ್ಳತನಗಳನ್ನು ನಡೆಸಿ ಇದುವರೆಗೂ ಸುಳಿವು ದೊರೆಯದಂತೆ ಮಾಡಿ ತಪ್ಪಿಸಿಕೊಳ್ಳುತ್ತಿದ್ದ ಕಳ್ಳನೊಬ್ಬನನ್ನು ಕಾರವಾರ ತಾಲೂಕಿನ ಕದ್ರಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂದ 6 ಲಕ್ಷ ರೂ. ಮೌಲ್ಯದ 250ಗ್ರಾಂ ಚಿನ್ನ, ಒಂದು ಕಾರು ಹಾಗೂ ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಕದ್ರಾದ ಇರ್ಪಾಗೆಯ ಸಂಜಯ ಪಾಟೀಲ್ (33) ಎಂಬಾತನೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದವನಾಗಿದ್ದಾನೆ.

ಮಲ್ಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಾಂಧಿನಗರದಲ್ಲಿ ಮನೆ ಕಳ್ಳನತ, ಕುರ್ನಿಪೇಟ್ ಹೆಗಡೆ ಏಜೆನ್ಸಿಯಲ್ಲಿ ಮೊಬೈಲ್ ಕಳ್ಳತನ ಪ್ರಕರಣ ಹಾಗೂ ಕೆರವಡಿ, ಇರ್ಪಾಗೆಗಳಲ್ಲಿ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

ಆರೋಪಿ ಸಂಜಯ ಪಾಟೀಲ್ ಇತ್ತೀಚೆಗೆ ತನ್ನ ಬೈಕ್ ಬಳಸಿಕೊಂಡು ತನ್ನ ಮನೆಯ ಪಕ್ಕದ ದತ್ತಾತ್ರೆಯ ನಾಯ್ಕ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಿದ್ದ. ಪ್ರಕರಣದ ದಾಖಲಿಸಿಕೊಂಡಿದ್ದ ಕದ್ರಾ ಠಾಣೆಯ ಸಿಪಿಐ ನಿತ್ಯಾನಂದ ಪಂಡಿತ ತನಿಖೆ ಕೈಗೊಂಡಿದ್ದರು.

ಆರೋಪಿ ಸಂಜಯ ಪಾಟೀಲ್ ಈತ ಸೆಪ್ಟೆಂಬರ್ 29ರಂದು ರಾಜೇಶ ಎನ್ನುವವರ ಮನೆಯ ಅಡುಗೆ ಕೋಣೆಯ ಮೇಲ್ಚಾವಣಿ ಹೆಂಚು ತೆಗೆದು ಬಂಗಾರದ ಕಿವಿಯೋಲೆ ಸೇರಿದಂತೆ ಎರಡು ಬಂಗಾರದ ಸರ, ನಾಲ್ಕ ಸಾವಿರ ನಗದು ಸೇರಿ ಒಟ್ಟೂ 24 ಸಾವಿರ ರೂ. ಮೊತ್ತನ್ನು ದೋಚಿದ್ದ.
 
ಇದಕ್ಕೂ ಮೊದಲು ಸೆ.14ರಂದು ಮಲ್ಲಿಕಾ ಭೋವಿ ಎನ್ನುವವರ ಮನೆಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ ಬಂಗಾದ ಸರ, ನೆಕ್ಲೇಸ್, ಕಿವಿಯೊಲೆ ಸೇರಿದಂತೆ ಇನ್ನಿತರ ಚಿನ್ನದ ಆಭರಣ ಹಾಗೂ 40 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದ.

ಇದೇ ಅವಧಿಯಲ್ಲಿ ಮಲ್ಲಾಪುರದ ನಿವಾಸಿ ಅರುಣ ಕುಮಾರ ಹೆಗಡೆ ಎನ್ನುವವರ ಮೊಬೈಲ್ ಅಂಗಡಿಯ ಹಿಂಭಾಗದ ಬಾಗಿಲು ಮುರಿದು ಒಟ್ಟೂ 33,615 ರೂ. ಮೌಲ್ಯದ 6 ಮೊಬೈಲ್ ಹಾಗೂ 10,900 ನಗದು ಕದ್ದು ಪರಾರಿಯಾಗಿದ್ದನು.

ಅದರಂತೆ ಕೈಗಾದ ಬಾಬುರಾವ್ ರಾಯ್ ಎನ್ನುವವರ ಮನೆಯಲ್ಲಿ ಎರಡು ಮಂಗಲಸೂತ್ರ, ಒಂದು ನೆಕ್ಲೆಸ್, ಒಂದು ಚೈನ್, ಎರಡು ಬಳೆ, ಐದು ಉಂಗುರ ಹಾಗೂ 3.40ಲಕ್ಷರೂ. ನಗದು ಕದ್ದ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ತನಿಖೆ ಕೈಗೊಂಡ ಪೊಲೀಸರು ಬಲೆ ಬೀಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಮುಂದುವರೆದಿದೆ.

ಇಂದು ಓದಿದ ಹೆಚ್ಚು ಓದಿದ ಸುದ್ದಿಗಳು
►►ಆರುಷಿ ಹತ್ಯೆ: ಹೆತ್ತವರನ್ನು ಖುಲಾಸೆಗೊಳಿಸಿದ ಹೈಕೋರ್ಟ್:
http://bit.ly/2gglH0V
►►‘ಉಪ್ಪಿನಕಾಯಿ’ ಎಂದು ಗಾಂಜಾ ನೀಡಿದವನ ಬಂಧನ: http://bit.ly/2yeb6rN
►►ಶ್ಲೋಕ ತಪ್ಪಾಗಿ ಹಾಡಿದ ಮುಸ್ಲಿಂ ಗಾಯಕನ ಹತ್ಯೆ: ಭೀತಿಯಿಂದ ಊರು ತೊರೆದ ಮುಸ್ಲಿಮರು: http://bit.ly/2hCJIfp
►►ಟ್ರಕ್-ಬೈಕ್ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು: http://bit.ly/2zhioLu

Related Tags: Karwar News, Kadra Police, Theft Accused Arrested, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ