‘ಉಪ್ಪಿನಕಾಯಿ’ ಎಂದು ಗಾಂಜಾ ನೀಡಿದವನ ಬಂಧನ
ಉಪ್ಪಿನಕಾಯಿ ಎಂದು ಗಾಂಜಾ ಪ್ಯಾಕೆಟ್‌ಗಳನ್ನು ದೋಹಾ ಕತಾರ್ ದೇಶಕ್ಕೆ ಸಾಗಿಸಿ ಅಮಾಯಕನೋರ್ವ ಜೈಲು ಪಾಲಾದ ಪ್ರಕರಣ.

ಕರಾವಳಿ ಕರ್ನಾಟಕ ವರದಿ

ಕಾಸರಗೋಡು:
ಉಪ್ಪಿನಕಾಯಿ ಎಂದು ಗಾಂಜಾ ಪ್ಯಾಕೆಟ್‌ಗಳನ್ನು ದೋಹಾ ಕತಾರ್ ದೇಶಕ್ಕೆ ಸಾಗಿಸಿ ಅಮಾಯಕನೋರ್ವ ಜೈಲು ಪಾಲಾದ ಪ್ರಕರಣದಲ್ಲಿ ಇಲ್ಲಿನ ವಂಚಕನೋರ್ವನನ್ನು ಬುಧವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಕೊಡ್ಯಾಮೆಯ ಸೂಫಿ(36) ಎಂಬಾತನನ್ನು ಹೆಚ್ಚುವರಿ ಎಸ್‌ಐ ಬಾಬು ಥೊಮಸ್ ಬುಧವಾರ ರಾತ್ರಿ ಬಂಧಿಸಿದ್ದಾರೆ. ಈತನಿಂದ ವಂಚನೆಗೊಳಗಾದ ಮೊಹಮದ್ ಬಶೀರ್ ಎಂಬವರ ಪತ್ನಿ ಮುಮ್ತಾಜ್ ಪೊಲೀಸ್ ದೂರು ದಾಖಲಿಸಿದ್ದರು.

ಸೂಫಿ ಕತಾರ್ ವಿಮಾನ ನಿಲ್ದಾಣಕ್ಕೆ ಬರುವ ವ್ಯಕ್ತಿಯೋರ್ವನಿಗೆ ಉಪ್ಪಿನಕಾಯಿ ಕೊಡು ಎಂದು ಸೂಟ್‌ಕೇಸ್ ಒಂದನ್ನು ಬಶೀರ್ ಅವರಿಗೆ ನೀಡಿದ್ದ. ಉದ್ಯೋಗಾವಕಾಶದ ನಿರೀಕ್ಷೆಯಲ್ಲಿದ್ದ ಬಶೀರ್ ಅವರಿಗೆ ಸೂಫಿ ವೀಸಾ ಮತ್ತು ಪ್ರಯಾಣ ವ್ಯವಸ್ಥೆಯನ್ನು ಉಚಿತವಾಗಿ ಒದಗಿಸಿದ್ದ ಎನ್ನಲಾಗಿದೆ.

ತನಗೆ ಸಹಾಯ ಮಾಡಿದ ವ್ಯಕ್ತಿ ಉಪ್ಪಿನ ಕಾಯಿ ಪಾರ್ಸೆಲ್ ಎಂದು ಹೇಳಿ ಗಾಂಜಾ ನೀಡಿದ್ದರ ಅರಿವಿರದ ಮೊಹಮದ್ ಬಶೀರ್ ಕತಾರ್ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆ. ಬಶೀರ್ ಅವರು ತಾನು ಅಮಾಯಕ ಎಂದು ಗೋಗರೆದರೂ ಅವರ ಮಾತನ್ನು ಕಿವಿ ಮೇಲೆ ಹಾಕಿಕೊಳ್ಳದ ಅಧಿಕಾರಿಗಳು ನೇರವಾಗಿ ಅವರನ್ನು ಸೆರೆಮನೆಗೆ ತಳ್ಳಿದ್ದರು.

ಜೂನ್ 28, 2016 ರಂದು ಬಶೀರ್ ಕತಾರ್ ತಲುಪಿದ್ದು, ತಲುಪಿದ ದಿನದಿಂದಲೂ ಜೈಲಲ್ಲೇ ಇರುವ ಕರುಣಾಜನಕ ಸಂಗತಿ ಇದಾಗಿದೆ. ಬಶೀರ್ ಅವರನ್ನು ಕತಾರ್ ಜೈಲಿನಿಂದ ಬಿಡುಗಡೆಗೊಳಿಸಲು ಕುಟುಂಬವು ಹರಸಾಹಸ ನಡೆಸುತ್ತಿದ್ದು, ವಂಚಕ ಸೂಫಿಯ ಬಂಧನದಿಂದ ಅವರಿಗೆ ಭರವಸೆಯ ಹೊಸ ಬೆಳಕು ಸಿಕ್ಕಿದಂತಾಗಿದೆ.

ಈ ಬಂಧನದ ವಿವರಗಳನ್ನು ಕತಾರ್ ಅಧಿಕಾರಿಗಳಿಗೆ ಒದಗಿಸಿ ಬಶೀರ್ ಅವರನ್ನು ಬಂಧ ಮುಕ್ತಗೊಳಿಸುವ ದಿಸೆಯಲ್ಲಿ ಅವರ ಪ್ರಯತ್ನಗಳು ಸಾಗಿವೆ.

ನೆಂಟರಿಸ್ಟರು, ಗೆಳೆಯರು ನೀಡಿದ ಪಾರ್ಸೆಲ್ ಅನ್ನು, ಅವರ ಮೇಲಿನ ನಂಬಿಕೆಯಿಂದ ತೆರೆಯದೇ ಗಲ್ಫ್ ದೇಶಗಳಿಗೆ ಕೊಂಡುಹೋಗಿ ಜೈಲು ಪಾಲಾದವರ ಸುದ್ದಿಗಳು ಹಲವು ಸಲ ಕೇಳಿಬರುತ್ತಿವೆ.

ಕರ್ನಾಟಕದ ಕಾರ್ಕಳ ನಿವಾಸಿ ಮೆಲ್ವಿನ್ ಫೆರ್ನಾಂಡಿಸ್ ಎಂಬವರು ಪಕ್ಕದ ಮನೆಯವರು ನೀಡಿದ ನಿಷೇಧಿತ ಮಾತ್ರೆಗಳನ್ನು ಕುವೈಟ್ ದೇಶಕ್ಕೆ ಕೊಂಡುಹೋಗಿ ಅಲ್ಲಿ ಎಂಟು ತಿಂಗಳು ಜೈಲು ಪಾಲಾಗಿದ್ದರು.

ಪಕ್ಕದ ಮನೆಯ ರಿಚ್ಚರ್ಡ್ ಕ್ಯಾಸ್ಟಲಿನೊ ಬಂಧನದೊಂದಿಗೆ ಮೆಲ್ವಿನ್ ಅವರು ಅಮಾಯಕ ಎಂಬುದು ಸಾಬೀತಾಗಿದ್ದರೂ ಮೆಲ್ವಿನ್ ಮತ್ತು ಅವರ ಪತ್ನಿ ಈ ಪ್ರಕರಣದಿಂದ ಪಟ್ಟ ಕಷ್ಟ ಅಪಾರ ಎಂಬುದು ಗಮನಾರ್ಹ.

ಇದನ್ನೂ ಓದಿ:
►►ಕುವೈಟ್ ಕೋರ್ಟ್‌ನಿಂದ ಮೆಲ್ವಿನ್ ದೋಷಮುಕ್ತಿ:
http://bit.ly/1PmxV0o
►►ಕುವೈಟ್‌ಗೆ ನಿಷೇಧಿತ ಮಾತ್ರೆ: ಅಸಲಿ ವಂಚಕ ಸೆರೆ: http://bit.ly/1ioBUfD

ಇಂದು ಓದಿದ ಹೆಚ್ಚು ಓದಿದ ಸುದ್ದಿಗಳು
►►ಶ್ಲೋಕ ತಪ್ಪಾಗಿ ಹಾಡಿದ ಮುಸ್ಲಿಂ ಗಾಯಕನ ಹತ್ಯೆ: ಭೀತಿಯಿಂದ ಊರು ತೊರೆದ ಮುಸ್ಲಿಮರು:
http://bit.ly/2hCJIfp
►►ಟ್ರಕ್-ಬೈಕ್ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು: http://bit.ly/2zhioLu
►►ಉಡುಪಿ ಬಾರ್ ಮಾಲಕರಿಗೆ ತಲವಾರ್‌ನಿಂದ ಹಲ್ಲೆ, ಜೀವ ಬೆದರಿಕೆ: http://bit.ly/2hCNHsm
►►ಉಳ್ಳಾಲ ಝುಬೈರ್ ಕೊಲೆ: ಐವರು ಆರೋಪಿಗಳ ಸೆರೆ: http://bit.ly/2z1QmTg

Related Tags: Kasargod Man in Qatar Jail, Ganja Peddle Arrested, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚಿನ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ