ಶ್ಲೋಕ ತಪ್ಪಾಗಿ ಹಾಡಿದ ಮುಸ್ಲಿಂ ಗಾಯಕನ ಹತ್ಯೆ: ಭೀತಿಯಿಂದ ಊರು ತೊರೆದ ಮುಸ್ಲಿಮರು

ಕರಾವಳಿ ಕರ್ನಾಟಕ ವರದಿ

ಜೈಪುರ:
ಹಿಂದೂ ಧರ್ಮಗ್ರಂಥದ ಶ್ಲೋಕಗಳನ್ನು ತಪ್ಪಾಗಿ ಹಾಡಿದ ಮುಸ್ಲಿಂ ಜನಪದ ಗಾಯಕರೊಬ್ಬರನ್ನು ಬರ್ಬರವಾಗಿ ಹತ್ಯೆಗೈದ ಬಳಿಕ ಭಯಭೀತರಾಗಿರುವ 200ಕ್ಕೂ ಹೆಚ್ಚು ಮುಸ್ಲಿಮರು ಗ್ರಾಮ ತೊರೆದಿರುವ ಘಟನೆ ರಾಜಸ್ಥಾನದ ದಾಂತಲ್‌ನಲ್ಲಿ ನಡೆದಿದೆ.

ಪಾಕ್ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ರಾಜಸ್ಥಾನದ ಜೈಪುರದ ದಾಂತಲ್ ಗ್ರಾಮದಲ್ಲಿ ಮುಸ್ಲಿಂರು ಪಲಾಯನಗೈದಿದ್ದು ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳ ಬಳಿ ಆಶ್ರಯ ಪಡೆದಿದ್ದಾರೆ.
 
ಸೆಪ್ಟೆಂಬರ್ 27ರಂದು ಮುಸ್ಲಿಂ ಜನಪದ ಗಾಯಕ 45ರ ಹರೆಯದ ಅಹಮದ್ ಖಾನ್ ಎನ್ನುವವರು ಸಮಾರಂಭವೊಂದರಲ್ಲಿ ಹಾಡುತ್ತಿರುವ ವೇಳೆ ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಪಠಿಸಿದ್ದಾರೆ. ತನ್ನ ಮೈ ಮೇಲೆ ದೇವಿಯ ಆವಾಹನೆಯಾಗದೆ ಇರಲು ಅಹ್ಮದ್ ಖಾನ್ ಶ್ಲೋಕ ತಪ್ಪಾಗಿ ಹಾಡಿದ್ದೇ ಕಾರಣ ಎಂದು ಈ ವೇಳೆ ತಕರಾರು ತೆಗೆದ ಅರ್ಚಕ ರಮೇಶ್ ಸುತಾರ್, ಅಹ್ಮದ್ ಖಾನ್‌ನನ್ನು ಥಳಿಸಿದ್ದ.

ಬಳಿಕ ರಾತ್ರಿ ಇನ್ನಿಬ್ಬರ ಜೊತೆ ಅಹ್ಮದ್ ಖಾನ್ ಮನೆಗೆ ತಡರಾತ್ರಿಯಲ್ಲಿ ಹೋಗಿ ಅಹ್ಮದ್ ಖಾನ್‌ನನ್ನು ಮನೆಯಿಂದ ಹೊರಗೆಳೆದು ಥಳಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ.

ಹತ್ಯೆಯ ಬಳಿಕ ಅಹ್ಮದ್ ಖಾನ್ ಕುಟುಂಬದವರಿಗೆ ಬೆದರಿಕೆ ಹಾಕಿದ್ದ ಅರ್ಚಕ ಸುತಾರ್ ಪೊಲೀಸರಿಗೆ ದೂರು ನೀಡಿದರೆ ಊರಿನಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದ. ಹೀಗಾಗಿ ಖಾನ್ ಕುಟುಂಬಿಕರು ಅಹ್ಮದ್ ಶರೀರವನ್ನು ಪೊಲೀಸ್ ದೂರು ನೀಡದೆಯೆ ಹೂತು ಹಾಕಿದ್ದರು.

ಬಳಿಕ ಅಕ್ಟೋಬರ್ 1ರಂದು ಧೈರ್ಯ ಮಾಡಿದ ಅಹ್ಮದ್ ಕುಟುಬಿಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದರು. ಪೊಲೀಸರು ಅಹ್ಮದ್ ಶರೀರವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಅಹ್ಮದ್ ತೀವ್ರ ಥಳಿತದಿಂದ ಮೃತಪಟ್ಟಿದ್ದಾರೆಂದು ಖಚಿತಪಡಿಸಿಕೊಂಡಿದ್ದರು.

ದೂರು ನೀಡಿದ ಬಳಿಕ ರಮೇಶ್ ಸುತಾರ್‌ನನ್ನು ಪೊಲೀಸರು ಬಂಧಿಸಿದ್ದು ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಪೊಲೀಸರಿಗೆ ದೂರು ನೀಡಿದ ಬಳಿಕ ಊರಿನಲ್ಲೀಗ ಮುಸ್ಲಿಮರಿಗೆ ಬಹಿಷ್ಕಾರ ಹಾಕಲಾಗಿದ್ದು ಭೀತಿಯಿಂದ ಮುಸ್ಲಿಮರು ಊರು ತೊರೆಯುತ್ತಿದ್ದಾರೆ.

ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ. ಗ್ರಾಮಕ್ಕೆ ಸರ್ಕಾರ ಅರೆಸೇನಾ ಪಡೆಗಳನ್ನು ಕಳುಹಿಸಿ ಭದ್ರತೆ ನೀಡಿದೆ.

ಲಾಂಗ ಮಂಗನಿಯಾರ್ ಜನಾಂಗಕ್ಕೆ ಸೇರಿದ ಗಾಯಕ ಅಮಹದ್ ಖಾನ್ ಅವರು ಹಿಂದೂ ದೇವರ ಗೀತೆಗಳನ್ನು ದೇವಾಲಯಗಳಲ್ಲಿ ಹಾಡುತ್ತಿದ್ದರು. ತಲೆಮಾರುಗಳಿಂದ ಅವರ ಕುಟುಂಬ ಈ ಸಂಪ್ರದಾಯ ಆಚರಿಸಿಕೊಂಡು ಬಂದಿತ್ತು.

ಇಂದು ಓದಿದ ಹೆಚ್ಚು ಓದಿದ ಸುದ್ದಿಗಳು
►►ಟ್ರಕ್-ಬೈಕ್ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು:
http://bit.ly/2zhioLu
►►ಉಡುಪಿ ಬಾರ್ ಮಾಲಕರಿಗೆ ತಲವಾರ್‌ನಿಂದ ಹಲ್ಲೆ, ಜೀವ ಬೆದರಿಕೆ: http://bit.ly/2hCNHsm
►►ಉಳ್ಳಾಲ ಝುಬೈರ್ ಕೊಲೆ: ಐವರು ಆರೋಪಿಗಳ ಸೆರೆ: http://bit.ly/2z1QmTg
►►18 ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ 'ಅತ್ಯಾಚಾರ': ಸುಪ್ರೀಂ ಕೋರ್ಟ್‌: http://bit.ly/2gu1Fgv

Related Tags: Muslim Singer Killed, Rajasthan, Shlok, Ahmed Khan, Muslims Flee Village, Kannada nes, Karavalkarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ