ಉಡುಪಿ ಬಾರ್ ಮಾಲಕರಿಗೆ ತಲವಾರ್‌ನಿಂದ ಹಲ್ಲೆ, ಜೀವ ಬೆದರಿಕೆ

ಕರಾವಳಿ ಕರ್ನಾಟಕ ವರದಿ

ಉಡುಪಿ:
ಮದ್ಯ ಸೇವನೆ ಬಳಿಕ ಬಾರ್ ಮಾಲಕರೋರ್ವರಿಗೆ ತಲವಾರ್ ಹಲ್ಲೆಗೈಯಲು ಯತ್ನಿಸಿದ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಂಚರತ್ನ ಬಾರ್‌ನಲ್ಲಿ ಉಡುಪಿ ಬೈಲಕೆರೆಯ ಕಿರಣ್ ಕುಮಾರ್(31) ಮತ್ತಿಬ್ಬರು ಮದ್ಯ ಸೇವನೆ ಬಳಿಕ ಬಿಲ್ ಪಾವತಿ ಸಂದರ್ಭ ಹಣ ನೀಡುವುದಿಲ್ಲ ಎಂದು ಗಲಾಟೆ ಮಾಡಿ ಬಾರ್ ಮಾಲಕ ಸಂತೋಷ್ ಶೆಟ್ಟಿಯವರನ್ನು ತಲವಾರ್ ಹಿಡಿದು ಕಡಿಯಲು ಮುಂದಾಗಿದ್ದರು ಎನ್ನಲಾದ ಘಟನೆ ವರದಿಯಾಗಿದೆ.

ಬಾರ್ ಮಾಲಕ ಸಂತೋಷ್ ಶೆಟ್ಟಿಯವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ, ಅವರಿಗೆ ಹಲ್ಲೆಗೈಯಲು ಮುಂದಾದಾಗ ಬಾರ್ ಸಿಬ್ಬಂದಿ ಅವರನ್ನು ಹಲ್ಲೆಕೋರರಿಂದ ರಕ್ಷಿಸಿದ್ದರು ಎನ್ನಲಾಗಿದೆ.

ಘಟನೆಯಿಂದ ಹೃದ್ರೋಗಿ ಬಾರ್ ಮಾಲಕ ಸಂತೋಷ್ ಶೆಟ್ಟಿಯವರು ಆಘಾತಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಕೆಲಸಗಾರ ಮಂಜುನಾಥ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.


ಈ ಘಟನೆಗೆ ಸಂಬಂಧಿಸಿ ಪ್ರತಿದೂರು ನೀಡಲಾಗಿದ್ದು, ಕಿರಣ್ ಕುಮಾರ್, ಸ್ನೇಹಿತ ಅನ್ವರ್ ಕುಂಜಿಬೆಟ್ಟು ಎಂಬವರೊಂದಿಗೆ ಪಂಚರತ್ನ ಬಾರ್‌ನಿಂದ ಹೊರಬರುವಾಗ ಬಾರ್ ಮಾಲಕ ಸಂತೋಷ್ ಮತ್ತು ಸುಜಿತ್ ಮತ್ತು ಸಿಬ್ಬಂದಿ ಮರದ ತುಂಡು ಮತ್ತು ಅಡುಗೆ ಕೋಣೆಯಲ್ಲಿದ್ದ ಚೂರಿಯಿಂದ ಇರಿದು ಕೊಲೆಗೈಯಲು ಯತ್ನಿಸಿದ್ದಾರೆ.

ಕಿರಣ್ ಸರ, ಉಂಗುರ, ಐ ಫೋನ್ ಕಿತ್ತುಕೊಂಡಿದ್ದು, ಅನ್ವರ್ ಅವರಿಗೆ ಹಲ್ಲೆಗೈದು ಇಪ್ಪತ್ತು ಸಾವಿರ ರೂ. ಎಗರಿಸಿರುವುದಾಗಿ ನಗರ ಪೊಲೀಸರಿಗೆ ಪ್ರತಿದೂರು ನೀಡಲಾಗಿದೆ. ಕಿರಣ್ ಮತ್ತು ಅನ್ವರ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಉಳ್ಳಾಲ ಝುಬೈರ್ ಕೊಲೆ: ಐವರು ಆರೋಪಿಗಳ ಸೆರೆ:
http://bit.ly/2z1QmTg
►►18 ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ 'ಅತ್ಯಾಚಾರ': ಸುಪ್ರೀಂ ಕೋರ್ಟ್‌: http://bit.ly/2gu1Fgv
►►ಬೆಂಗಳೂರು ರಸ್ತೆಗುಂಡಿಗಳಿಗೆ ಯುವಕ, ಯುವತಿ ಬಲಿ: ಸರ್ಕಾರದ ವಿರುದ್ಧ ಜನಾಕ್ರೋಶ: http://bit.ly/2g0C3qK
►►ನೀನು ಮಹಾಪುರುಷ ಕಣಪ್ಪಾ! ಬೈಕ್ ಸವಾರನಿಗೆ ಇನ್ಸ್‌ಪೆಕ್ಟರ್ ದೊಡ್ಡ ನಮಸ್ಕಾರ: http://bit.ly/2xvLV73

Related Tags: Bailakere Kiran Kumar, Anwar Kunjibettu, Santhosh Shetty, Pancharathna Paradise, Vandalism at bar, Owner hospitalized, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಪಂಚರತ್ನ ಪ್ಯಾರಡೈಸ್, ಕನ್ನಡ ಸುದ್ದಿ, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ, ಇತ್ತೀಚ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ