ಉಳ್ಳಾಲ ಝುಬೈರ್ ಕೊಲೆ: ಐವರು ಆರೋಪಿಗಳ ಸೆರೆ

ಕರಾವಳಿ ಕರ್ನಾಟಕ ವರದಿ

ಮಂಗಳೂರು:
ಉಳ್ಳಾಲ ಮುಕ್ಕಚ್ಚೇರಿಯಲ್ಲಿ ನಡೆದ ಝುಬೈರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ.

ಸುಹೈಲ್, ನಿಜಾಮುದ್ದೀನ್, ಮೊಹ್ಮದ್ ಮುಸ್ತಾಫ, ತಾಝುದ್ದೀನ್ ಮತ್ತು ಆಸಿಫ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನಾಲ್ವರು ಕೊಲೆಯಲ್ಲಿ ನೇರ ಭಾಗಿಯಾಗಿದ್ದು, ಇನ್ನೋರ್ವ ಹತ್ಯೆಗೆ ಸಹಕರಿಸಿದ್ದಾನೆ.

ಅಲ್ತಾಫ್ ಎಂಬವನ ವಿರುದ್ಧ ಝುಬೈರ್ ಕಳೆದ ವರ್ಷ ದೂರು ನೀಡಿದ್ದು, ಗೂಂಡ ಕಾಯ್ದೆಯಡಿ ಅಲ್ತಾಫ್ ಬಂಧನವಾಗಿತ್ತು.

ಮೂರು ತಿಂಗಳ ಹಿಂದೆ ಅಲ್ತಾಫ್‌ಗೆ ಬೇಲ್ ಲಭಿಸಿತ್ತು. ಇದಕ್ಕೆ ಪ್ರತೀಕಾರವಾಗಿ  ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಕಮಿಷನರ್ ಟಿ. ಆರ್. ಸುರೇಶ್ ಮಾಹಿತಿ ನೀಡಿದರು.

ಝುಬೈರ್ ಹತ್ಯೆಗೆ ಯಾವುದೇ ರಾಜಕೀಯ ಆಯಾಮ ಇಲ್ಲ ಎಂದು ಕಮಿಷನರ್ ಹೇಳಿದರು.

ಝುಬೈರ್ ಸಹೋದರ ಆಸಿಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳ ಪತ್ತೆಗಾಗಿ ನಾಲ್ಕು ಪೊಲೀಸ್ ತಂಡ ರಚಿಸಲಾಗಿತ್ತು.
ಝುಬೈರ್ ಅವರನ್ನು ಕೊಚ್ಚಿ ಕೊಲೆಗೈಯ್ಯುತ್ತಿರುವ ಭೀಕರ ದೃಶ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಲಿಯಾಸ್ ಎಂಬವರು ಝುಬೈರ್ ಕೊಲೆಯಾದ ಸಂದರ್ಭ ದುಷ್ಕರ್ಮಿಗಳ ಹಲ್ಲೆಯಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►18 ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ 'ಅತ್ಯಾಚಾರ': ಸುಪ್ರೀಂ ಕೋರ್ಟ್‌:
http://bit.ly/2gu1Fgv
►►ಬೆಂಗಳೂರು ರಸ್ತೆಗುಂಡಿಗಳಿಗೆ ಯುವಕ, ಯುವತಿ ಬಲಿ: ಸರ್ಕಾರದ ವಿರುದ್ಧ ಜನಾಕ್ರೋಶ: http://bit.ly/2g0C3qK
►►ನೀನು ಮಹಾಪುರುಷ ಕಣಪ್ಪಾ! ಬೈಕ್ ಸವಾರನಿಗೆ ಇನ್ಸ್‌ಪೆಕ್ಟರ್ ದೊಡ್ಡ ನಮಸ್ಕಾರ: http://bit.ly/2xvLV73

Related Tags: Youth Hacked to Death, Police arrest five in Zubair murder case, Zubair Death Ullal Police, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ