ರಾಜ್ಯ ಸರ್ಕಾರ ಹಿಂದೂಗಳ ಹಕ್ಕನ್ನು ಕಸಿಯುತ್ತಿದೆ: ಬಜರಂಗದಳ ಆರೋಪ

ಕರಾವಳಿ ಕರ್ನಾಟಕ ವರದಿ

ಉಡುಪಿ:
ರಾಜ್ಯ ಸರಕಾರ ಬಹುಸಂಖ್ಯಾತ ಹಿಂದೂಗಳ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದೆ. ಹಿಂದೂಗಳ ಹಕ್ಕನ್ನು ಕಸಿಯುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ಬಜರಂಗದಳ ಮಂಗಳೂರು ವಿಭಾಗ ಸಹ ಸಂಚಾಲಕರಾದ ಸುನೀಲ್ ಕೆ. ಆರ್ ಆರೋಪಿಸಿದರು.

ಅವರು ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

ಕರಾವಳಿಯ ಜಿಲ್ಲೆಗಳಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿ ಯಾವುದೇ ಹಿಂದೂ ಹಬ್ಬಗಳನ್ನು ಸಾರ್ವಜನಿಕ ಸಭೆ ಸಮಾರಂಭಗಳನ್ನು ಹಾಗೂ ಪ್ರತಿಭಟನೆಗಳನ್ನು ನಡೆಸದಂತೆ ಸರ್ಕಾರ ಪೊಲೀಸ್ ಇಲಾಖೆಯ ಮುಖಾಂತರ ನಿರ್ಭಂಧವನ್ನು ಹೇರುತ್ತಿದೆ.


ಹಿಂದೂಗಳ ಆರಾಧ್ಯ ದೈವ, ಶ್ರದ್ಧಾಕೇಂದ್ರ ಕೋಟಿ ಚೆನ್ನಯ್ಯರವರ ತಾಯಿ ದೇಹಿ ಬೈದೆತಿಯವರ ಮೂರ್ತಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಹಿಂದೂಗಳ ಭಾವನೆಗೆ ಘಾಸಿಗೊಳಿಸುವ ಕೆಲಸ ಮಾಡಲಾಗಿದೆ.

ಅಲ್ಲದೇ ಈ ಕೃತ್ಯದಿಂದ ಅಪವಿತ್ರಗೊಂಡ ದೇವಸ್ಥಾನದ ಶುದ್ದೀಕರಣಕ್ಕಾಗಿ ತೆರಳಿದ ಸ್ಥಳೀಯ ಹಿಂದೂ ಮಹಿಳೆಯರಿಗೆ ಅಲ್ಲಿನ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಅಡ್ಡಿಪಡಿಸಿದ್ದು ಖಂಡನೀಯ ಎಂದರು.

ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಗೀತಾಂಜಲಿ ಸುವರ್ಣ, ದಿನೇಶ್ ಮೆಂಡನ್, ಸಂತೋಶ್ ಸುವರ್ಣ ಹಾಗೂ ಇತರರು ಇದ್ದರು.

ಇಂದು ಹೆಚ್ಚು ಓದಿದ ಸುದ್ದಿಗಳು
►►18 ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ 'ಅತ್ಯಾಚಾರ': ಸುಪ್ರೀಂ ಕೋರ್ಟ್‌:
http://bit.ly/2gu1Fgv
►►ಬೆಂಗಳೂರು ರಸ್ತೆಗುಂಡಿಗಳಿಗೆ ಯುವಕ, ಯುವತಿ ಬಲಿ: ಸರ್ಕಾರದ ವಿರುದ್ಧ ಜನಾಕ್ರೋಶ: http://bit.ly/2g0C3qK
►►ನೀನು ಮಹಾಪುರುಷ ಕಣಪ್ಪಾ! ಬೈಕ್ ಸವಾರನಿಗೆ ಇನ್ಸ್‌ಪೆಕ್ಟರ್ ದೊಡ್ಡ ನಮಸ್ಕಾರ: http://bit.ly/2xvLV73
►►ಬಿಜೆಪಿಯಿಂದ ಈಗ 'ಬೇಟಾ ಬಚಾವೊ' ಆಂದೋಲನ: ರಾಹುಲ್ ಗಾಂಧಿ: http://bit.ly/2xvTcUy

Related Tags: HJV, BD, VHP Protest, Against State Govt Anti-Hindu Policies, Sunil K R, Udupi, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ