18 ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ 'ಅತ್ಯಾಚಾರ': ಸುಪ್ರೀಂ ಕೋರ್ಟ್‌

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಪತ್ನಿಯ ಜೊತೆ ಸೆಕ್ಸ್ ನಡೆಸಿದರೆ ಅದು ಅತ್ಯಾಚಾರ ಎಂದು ಪರಿಗಣಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಮದುವೆ ನಂತರ ಪತಿಯು ಪತ್ನಿಯ ಮೇಲೆ ನಡೆಸುವ ಅತ್ಯಾಚಾರ ಅಪರಾಧ ಎಂದು ಘೋಷಿಸುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಬುಧವಾರ ಈ ಆದೇಶ ನೀಡಿದೆ.

ಹದಿನೈದರಿಂದ ಹದಿನೆಂಟು ವರ್ಷದೊಳಗಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಐಪಿಸಿ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಅಪ್ರಾಪ್ತ ವಯಸ್ಸಿನ ಪತ್ನಿಯು ಲೈಂಗಿಕ ಸಂಪರ್ಕ ಹೊಂದಿದ ಕುರಿತು ಒಂದು ವರ್ಷದೊಳಗೆ ದೂರು ದಾಖಲಿಸಿದರೆ ಪತಿ ವಿರುದ್ಧ ಅತ್ಯಾಚಾರದ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ನ್ಯಾಯಮೂರ್ತಿ ಮದನ್‌ ಬಿ ಲೋಕೂರ್‌ ಹಾಗೂ ನ್ಯಾ.ದೀಪಕ್‌ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ಭಾರತೀಯ ದಂಡ ಸಂಹಿತೆ(ಐಪಿಸಿ) ಸೆಕ್ಷನ್‌ 375 ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯೊಂದಿಗೆ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರವೆನಿಸುತ್ತದೆ. ಆದರೆ 15 ವರ್ಷಕ್ಕಿಂತ ಮೇಲ್ಪಟ್ಟ ಹುಡುಗಿಯೊಂದಿಗೆ ಆಕೆಯ ಪತಿ ಲೈಂಗಿಕ ಸಂಪರ್ಕ ಹೊಂದಿದರೆ ಅದು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ.

ಇದರಿಂದಾಗಿ ಈ ಹಿಂದೆ ಪುರುಷ 15 ರಿಂದ 18 ವರ್ಷದೊಳಗಿನ ತನ್ನ ಪತ್ನಿಯೊಂದಿಗೆ ಸೆಕ್ಸ್ ಅಪರಾಧವಾಗಿರಲಿಲ್ಲ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಬೆಂಗಳೂರು ರಸ್ತೆಗುಂಡಿಗಳಿಗೆ ಯುವಕ, ಯುವತಿ ಬಲಿ: ಸರ್ಕಾರದ ವಿರುದ್ಧ ಜನಾಕ್ರೋಶ:
http://bit.ly/2g0C3qK
►►ನೀನು ಮಹಾಪುರುಷ ಕಣಪ್ಪಾ! ಬೈಕ್ ಸವಾರನಿಗೆ ಇನ್ಸ್‌ಪೆಕ್ಟರ್ ದೊಡ್ಡ ನಮಸ್ಕಾರ: http://bit.ly/2xvLV73
►►ಬಿಜೆಪಿಯಿಂದ ಈಗ 'ಬೇಟಾ ಬಚಾವೊ' ಆಂದೋಲನ: ರಾಹುಲ್ ಗಾಂಧಿ: http://bit.ly/2xvTcUy
►►ಸಮಾಜದಲ್ಲಿ ಕ್ರೌರ್ಯಕ್ಕಿಂತ ಭಯ ದೊಡ್ಡ ರೋಗವಾಗಿ ಹುಟ್ಟಿಕೊಳುತ್ತಿದೆ: http://bit.ly/2yamZPB

Related Tags: Sex With Minor, Rape, Child Marriage, Supreme Court, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ