ನೀನು ಮಹಾಪುರುಷ ಕಣಪ್ಪಾ! ಬೈಕ್ ಸವಾರನಿಗೆ ಇನ್ಸ್‌ಪೆಕ್ಟರ್ ದೊಡ್ಡ ನಮಸ್ಕಾರ
ಸವಾರನೊಬ್ಬ ಕುಟುಂಬ ಸಮೇತರಾಗಿ ಬೈಕ್‌ನಲ್ಲಿ ಸವಾರಿ ಹೋಗುತ್ತಿದ್ದುದ್ದನ್ನು ಕಂಡ ಸರ್ಕಲ್ ಇನ್ಸ್‌ಪೆಕ್ಟರ್ ಆತನಿಗೆ ನಮಸ್ಕರಿಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರಾವಳಿ ಕರ್ನಾಟಕ ವರದಿ

ಅನಂತಪುರ:
ಪದೇಪದೆ ಎಚ್ಚರಿಸಿದರೂ ಮತ್ತೆಮತ್ತೆ ಕುಟುಂಬದ ನಾಲ್ಕು ಜನರೊಂದಿಗೆ ಬೈಕ್‌ನಲ್ಲಿ ಸವಾರಿ ಮಾಡುತ್ತಿದ್ದ ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ವ್ಯಕ್ತಿಯೋರ್ವ ಮತ್ತೆ ಎದುರಾದಾಗ ಅಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಓರ್ವರು ನಮಸ್ಕಾರ ಮಾಡುತ್ತಿರುವ ಫೋಟೊ ಈಗ ವೈರಲ್ ಆಗಿದೆ.

ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಮಡಕಶಿರ ಸರ್ಕಲ್ ಇನ್ಸ್‌ಪೆಕ್ಟರ್  ಬಿ ಶುಭಾ ಕುಮಾರ್ ಬೈಕ್ ಸವಾರನಿಗೆ ನಮಸ್ಕಾರ ಮಾಡುತ್ತಿರುವ ಈ ಫೋಟೊ ಈಗ ವೈರಲ್ ಆಗಿದೆ.

ಸಂಚಾರಿ ನಿಮಯ ಉಲ್ಲಂಘಿಸಿದ್ದ ಬೈಕ್ ಸವಾರ ತನ್ನ ಇಬ್ಬರು ಮಕ್ಕಳನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿದ್ದ ಹಾಗೂ ತನ್ನ ಹೆಂಡತಿಯನ್ನು ಬೈಕ್ ಹಿಂಬದಿ ಕೂರಿಸಿದ್ದು ಇವರಿಬ್ಬರ ಮಧ್ಯೆ ಬಾಲಕಿಯೊಬ್ಬಳನ್ನು ಕೂರಿಸಿದ್ದು ಒಟ್ಟಾರೆ ಒಂದು ಬೈಕ್‌ನಲ್ಲಿ ಐವರು ಪ್ರಯಾಣಿಸುತ್ತಿದ್ದರು.

ಸ್ವತಃ ಬೈಕ್ ಸವಾರ ಹೆಲ್ಮೆಟ್ ಧರಿಸಿರಲೂ ಇಲ್ಲ.  ಆಗ ಬೈಕ್ ತಡೆದ ಶುಭಾ ಕುಮಾರ್ ಅವರು ಸುರಕ್ಷತೆ ಬಗ್ಗೆ ಯಾವುದೇ ಪರಿವೇ ಇಲ್ಲದೆ ಈ ರೀತಿ ಪ್ರಯಾಣ ಮಾಡುತ್ತಿರುವುದು ಅಪಾಯದ ಸಂಕೇತ ಇನ್ನು ಮುಂದಾದರೂ ಸಂಚಾರಿ ನಿಮಯ ಪಾಲಿಸಿವಂತೆ ಬುದ್ದಿ ಮಾತು ಹೇಳಿದರು.

ಈ ಬೈಕ್ ಸವಾರ ಅದಾಗಲೇ ಒಂದೂವರೆ ಗಂಟೆ ಸಂಚಾರಿ ಸುರಕ್ಷತೆ ಬಗ್ಗೆ ಸೆಮಿನಾರ್‌ನಲ್ಲಿ ಭಾಗವಹಿಸಿ ನಂತರ ಐವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ ಎನ್ನುವುದು ಮಾತ್ರ ವಿಪರ್ಯಾಸವೇ ಸರಿ. ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ಬೈಕ್ ಸವಾರನಿಗೆ ಇದಕ್ಕೂ ಮೊದಲೇ ಪೊಲೀಸರು ಎಚ್ಚರಿಕೆ ನೀಡಿದ್ದರು. ಆದರೂ ಬೈಕ್ ಸವಾರ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಇಂದು ಹೆಚ್ಚು ಓದಿದ ಸುದ್ದಿಗಳು
►►ಬಿಜೆಪಿಯಿಂದ ಈಗ 'ಬೇಟಾ ಬಚಾವೊ' ಆಂದೋಲನ: ರಾಹುಲ್ ಗಾಂಧಿ:
http://bit.ly/2xvTcUy
►►ಸಮಾಜದಲ್ಲಿ ಕ್ರೌರ್ಯಕ್ಕಿಂತ ಭಯ ದೊಡ್ಡ ರೋಗವಾಗಿ ಹುಟ್ಟಿಕೊಳುತ್ತಿದೆ: http://bit.ly/2yamZPB
►►ಖಿನ್ನತೆಗೊಳಗಾದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು: http://bit.ly/2kA1CUM

Related Tags: Offender Bike Rider, Anantpur, Madakasira, Circle Inspector, Shubha Kumar
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ