ಬಿಜೆಪಿಯಿಂದ ಈಗ 'ಬೇಟಾ ಬಚಾವೊ' ಆಂದೋಲನ: ರಾಹುಲ್ ಗಾಂಧಿ

ಕರಾವಳಿ ಕರ್ನಾಟಕ ವರದಿ

ಅಹಮದಾಬಾದ್‌:
ಬೇಟಿ ಬಚಾವೊ ಎಂದು ಅಭಿಯಾನ ಶುರು ಮಾಡಿದ್ದ ಬಿಜೆಪಿ ನಾಯಕರು ಈಗ ‘ಬೇಟಾ ಬಚಾವೊ’ ಎಂಬ ಹೊಸ ಮಂತ್ರ ಪಠಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಲೇವಡಿ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಪುತ್ರ ಜಯ್‌ ಷಾ ಅಕ್ರಮ ವಹಿವಾಟು ಹಗರಣದಲ್ಲಿ ಸಿಲುಕಿರುವ ಕುರಿತು ಮಾಧ್ಯಮದಲ್ಲಿ ಬಂದ ವರದಿಯ ಬಳಿಕ ಜಯ್ ಷಾ ಅವರನ್ನು ರಕ್ಷಿಸಲು ಹೆಣಗಾಡುತ್ತಿರುವ ಬಿಜೆಪಿ ನಾಯಕರನ್ನು ಬಗ್ಗೆ ರಾಹುಲ್ ಈ ರೀತಿ ಟೀಕೆ ಮಾಡಿದ್ದಾರೆ.

ತಮ್ಮ ಟ್ವೀಟ್‍ನಲ್ಲಿ ರಾಹುಲ್ ಗಾಂಧಿ, ಜಯ್‌ ಷಾ ಅವರನ್ನು ಶೆಹಝಾದಾ ಎಂದು ಕರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಸ್ಟಾರ್ಟ್‌ ಅಪ್‌ ಇಂಡಿಯಾ’ ಯೋಜನೆಯ ಅತಿ ದೊಡ್ಡ ಫಲಾನುಭವಿ ಯಾರು ಗೊತ್ತೆ? ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ ಅವರು, ‘ಅದು ಜಯ್‌ ಷಾ ಅವರ ಸ್ಟಾರ್ಟ್ ಅಪ್‌ ಎಂದರು.

ಷಾ ಪುತ್ರನ ಬೆಂಬಲಕ್ಕೆ ನಿಂತ ರಾಜನಾಥ್‌  ಸಿಂಗ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮಗ ಜಯ್‌ ಷಾ ಅವರನ್ನು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಸಮರ್ಥಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಜಯ್‌ ಅವರ ವಹಿವಾಟಿನಲ್ಲಿ ಭಾರಿ ಪ್ರಮಾಣ ಏರಿಕೆಯಾಗಿದೆ ಎಂಬ ಆರೋಪ ಆಧಾರರಹಿತವಾಗಿದ್ದು ಯಾವುದೇ ತನಿಖೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕಾಲ ಕಾಲಕ್ಕೆ ಇಂತಹ ಆರೋಪಗಳು ಕೇಳಿ ಬರುತ್ತಿರುತ್ತವೆ. ಈ ಹಿಂದೆಯೂ ಇಂತಹ ಆರೋಪ ಕೇಳಿ ಬಂದಿದ್ದವು’ ಎಂದು ಅವರು ಹೇಳಿದ್ದಾರೆ.

Related Tags: Rahul Gandhi, Beta Bachavo, Beti Bachavo, Jay Shah, Amit Shah
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ