ನಟ ಪ್ರಕಾಶ್ ರೈಗೆ ವಿರೋಧ: ಪ್ರತಿಭಟನಾಕಾರರು ಪೊಲೀಸ್ ವಶ

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಬಹುಭಾಷಾ ನಟ, ಪ್ರಕಾಶ ರೈ ಅವರಿಗೆ ಕಾರಂತ ಹುಟ್ಟೂರು ಪ್ರಶಸ್ತಿ ನೀಡುವುದನ್ನು ವಿರೋಧಿಸಿ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಪ್ರತಿಭಟನಾಕಾರರನ್ನು ಪೊಲಿಸರು ವಸಕ್ಕೆ ಪಡೆದಿದ್ದಾರೆ.

ಕೋಟಾದ ಕಾರಂತ ಥೀಂ ಪಾರ್ಕ್ ಬಳಿ ಜಮಾಯಿಸಿದ್ದ ಹಿಂದೂಪರ ಸಂಘಟನೆಗಳು, ಜೈ ಭಾರ್ಗವ ಬಳಗ, ಬಿಜೆಪಿ ಯುವಮೋರ್ಚಾ ಧಿಕ್ಕಾರಗಳನ್ನು ಕೂಗುತ್ತಾ ಪ್ರತಿಭಟನೆಗೆ ಮುಂದಾದರು. ಈ ವೇಳೆಯಲ್ಲಿ ನಾಥ ಪಂಥದವರು ಕಪ್ಪು ಬಾವುಟ ಪ್ರದರ್ಶಿಸಿದ್ದು, ಕೂಡಲೇ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.

ಇವೆಲ್ಲದರ ನಡುವೆ ನಟ ಪ್ರಕಾಶ ರೈ ಅವರನ್ನು ಕೆಲ ಸಂಘಟನೆಗಳ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು. ಇದೀಗ ನಟ ರೈ ಥೀಂ ಪಾರ್ಕ್ ತಲುಪಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.


ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಗಳವಾರ ಮುಂಜಾನೆಯಿಂದಲೇ ಸುಮಾರು 160ಕ್ಕೂ ಅಧಿಕ ಪೊಲೀಸರು ಕಾರಂತ ಥೀಂ ಪಾರ್ಕ್ ಬಂದೋಬಸ್ತಿನಲ್ಲಿ ತೊಡಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ ಪಾಟೀಲ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್‌ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ನಾಡಿನ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮೌನದ ಕುರಿತು ಕೆಲ ದಿನಗಳ ಹಿಂದೆ ಡಿವೈಎಫ್ ರಾಜ್ಯ ಸಮ್ಮೇಳನದಲ್ಲಿ ನಟ ಪ್ರಕಾಶ್ ರೈ ಟೀಕಿಸಿದ್ದರು.

ಮೋದಿಯನ್ನು ಟೀಕಿಸಿದ್ದ ರೈ ವಿರುದ್ದ ಬಿಜೆಪಿಗರು ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಹಿಂದೂಪರ ಸಂಘಟನೆಗಳು ರೈ ಪ್ರಶಸ್ತಿ ಸ್ವೀಕರಿಸಲು ಬಂದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂಬ ಹೇಳಿಕೆಗಳನ್ನು ನೀಡಿತ್ತು.

ಇದನ್ನೂ ಓದಿ:
►►ನಟ ರೈಗೆ ಕಾರಂತ ಹುಟ್ಟೂರು ಪ್ರಶಸ್ತಿ: ಥೀಂ ಪಾರ್ಕ್‌ಗೆ ಬಿಗು ಪೊಲೀಸ್ ಬಂದೋಬಸ್ತ್:
http://bit.ly/2fZ7KRl

ಇಂದು ಓದಿದ ಹೆಚ್ಚು ಸುದ್ದಿಗಳು:
►►ಅಯೋಧ್ಯೆಯಲ್ಲಿ ರಾಮನ ಬೃಹತ್‌ ಪ್ರತಿಮೆ ಸ್ಥಾಪನೆಗೆ ಸಿದ್ದತೆ: ಯೋಗಿ ಸರ್ಕಾರ್: http://bit.ly/2kCw8gO
►►ಕಾರಂತಜ್ಜನ ಮೊಮ್ಮಗ ನಾನು ಎಂದು ನಗು ಬೀರಿದ ನಟ ಪ್ರಕಾಶ ರೈ:
http://bit.ly/2y8cLzf
►►ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ರೈ ಬರುತ್ತಾರೆ: ಆನಂದ ಸಿ. ಕುಂದರ್: http://bit.ly/2ycrPNO
►►ಪಟಾಕಿ ಬೇಡ ಎಂದಾದರೆ ಬಕ್ರೀದ್‌ಗೆ ಕುರಿ ಕಡಿಯುವುದು ನಿಲ್ಲಿಸಿ: ಚೇತನ್‌ ಭಗತ್: http://bit.ly/2ycKAkj

Related Tags: Police Arrest Protesters, Black Flags, Actor Prakash Rai, Karantha Award, Prakash Rai, Controversy, Muneer Katipalla, Anandh C Kunder, SP Sanjeev Pateel, Karanth Theme Park, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ