ಅಯೋಧ್ಯೆಯಲ್ಲಿ ರಾಮನ ಬೃಹತ್‌ ಪ್ರತಿಮೆ ಸ್ಥಾಪನೆಗೆ ಸಿದ್ದತೆ: ಯೋಗಿ ಸರ್ಕಾರ್

ಕರಾವಳಿ ಕರ್ನಾಟಕ ವರದಿ

ಲಖನೌ:
ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಬೃಹತ್‌ ಶ್ರೀರಾಮನ ಪ್ರತಿಮೆ ಪ್ರತಿಷ್ಠಾಪಿಸಲು ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದೆ.

ಉತ್ತರ ಪ್ರದೇಶದ ರಾಜ್ಯಪಾಲ ರಾಮ ನಾಯಕ್‌ ಅವರಿಗೆ ರಾಜ್ಯದ ಪ್ರವಾಸೋದ್ಯಮ ಇಲಾಖೆಯು ಈ ಕುರಿತ ಪ್ರಸ್ತಾವವನ್ನು ಸಲ್ಲಿಸಿದ್ದು, ರಾಜ್ಯದಲ್ಲಿ ಧಾರ್ಮಿಕ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಿಂದ ಅನುಮತಿ ಸಿಕ್ಕ ನಂತರವಷ್ಟೇ ಶ್ರೀರಾಮ ಪ್ರತಿಮೆ ಸ್ಥಾಪಿಸಲಾಗುತ್ತದೆ ಎನ್ನಲಾಗಿದೆ.

ಶ್ರೀರಾಮನ ಜನ್ಮಭೂಮಿ ಎನ್ನಲಾಗುವ ಅಯೋಧ್ಯೆಯನ್ನು ಪ್ರವಾಸಿ ಸ್ಥಳವಾಗಿ ಸೆಳೆಯಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೀಪಾವಳಿ ಸಂದರ್ಭದಲ್ಲಿ ಇಂಡೋನೇಷಿಯಾ ಹಾಗೂ ಥಾಯ್ಲೆಂಡ್‌ನ ಕಲಾವಿದರಿಂದ ರಾಮಲೀಲಾ ಪ್ರದರ್ಶನ ಆಯೋಜಿಸಲಾಗಿದೆ.

ಉತ್ತರ ಪ್ರದೇಶ ಪ್ರವಾಸೋದ್ಯ ಸಚಿವಾಲಯವು ಇತ್ತೀಚೆಗೆ ಬಿಡುಗಡೆ ಮಾಡಿದ್ದ ಟೂರಿಸಂ ಬುಕ್‌ಲೆಟ್‌ನಲ್ಲಿ ವಿಶ್ವವಿಖ್ಯಾತ ತಾಜ್‌ ಮಹಲನ್ನು ಕೈಬಿಟ್ಟಿರುವುದರಿಂದ ಉಂಟಾಗಿರುವ ವ್ಯಾಪಕ ವಿವಾದಗಳ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿಯನ್ನು ಸ್ಥಾಪಿಸುವ ಸರಕಾರದ ನಿರ್ಧಾರವು ಹೊಸ ವಿವಾದವನ್ನು ಹುಟ್ಟುಹಾಕಿದಂತಾಗಿದೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ನಟ ರೈಗೆ ಕಾರಂತ ಹುಟ್ಟೂರು ಪ್ರಶಸ್ತಿ: ಥೀಂ ಪಾರ್ಕ್‌ಗೆ ಬಿಗು ಪೊಲೀಸ್ ಬಂದೋಬಸ್ತ್:
http://bit.ly/2fZ7KRl
►►ಕಾರಂತಜ್ಜನ ಮೊಮ್ಮಗ ನಾನು ಎಂದು ನಗು ಬೀರಿದ ನಟ ಪ್ರಕಾಶ ರೈ: http://bit.ly/2y8cLzf
►►ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ರೈ ಬರುತ್ತಾರೆ: ಆನಂದ ಸಿ. ಕುಂದರ್: http://bit.ly/2ycrPNO
►►ಪಟಾಕಿ ಬೇಡ ಎಂದಾದರೆ ಬಕ್ರೀದ್‌ಗೆ ಕುರಿ ಕಡಿಯುವುದು ನಿಲ್ಲಿಸಿ: ಚೇತನ್‌ ಭಗತ್: http://bit.ly/2ycKAkj

Related Tags: UP Government, 100-Metre Statue, Lord Rama in Ayodhya, Yogi Adithyanath, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ