ನಟ ರೈಗೆ ಕಾರಂತ ಹುಟ್ಟೂರು ಪ್ರಶಸ್ತಿ: ಥೀಂ ಪಾರ್ಕ್‌ಗೆ ಬಿಗು ಬಂದೋಬಸ್ತ್

ಕರಾವಳಿ ಕರ್ನಾಟಕ ವರದಿ

ಕುಂದಾಪುರ:
ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮಂಗಳವಾರ ಮುಂಜಾನೆಯಿಂದಲೇ ಸುಮಾರು 160ಕ್ಕೂ ಅಧಿಕ ಪೊಲೀಸರು ಕಾರಂತ ಥೀಂ ಪಾರ್ಕ್ ಬಂದೋಬಸ್ತಿನಲ್ಲಿ ತೊಡಗಿದ್ದಾರೆ. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ ಪಾಟೀಲ್ ಅವರ ನೇತೃತ್ವದಲ್ಲಿ ಕಾರಂತ ಥೀಂ ಪಾರ್ಕ್‌ನ ಭದ್ರತೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂದು ಕೋಟತಟ್ಟು ಪಂಚಾಯತ್ ಮತ್ತು ಕಾರಂತ ಹುಟ್ಟೂರ ಪ್ರತಿಷ್ಠಾನ ನೀಡುವ ಕಾರಂತ ಹುಟ್ಟೂರ ಪ್ರತಿಷ್ಠಾನ ವಿಚಾರವಾಗಿ ಎದ್ದಿರುವ ವಿವಾದ ಹಿನ್ನೆಲೆಯಲ್ಲಿ ಮಂಗಳವಾರ ವಿಶೇಷ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. 13ನೇ ವರ್ಷದ ಪ್ರಶಸ್ತಿಗೆ ಬಹು ಭಾಷಾ ನಟ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದ ಬಳಿಕ ಅವರು ಸಾರ್ವಜನಿಕ ಸಭೆಯಲ್ಲಿ ನೀಡಿದ ಹೇಳಿಕೆಯನ್ನು ಗಮನಿಸಿ ಹಿಂದೂಪರ ಸಂಘಟನೆಗಳು, ಬಿಜೆಪಿಯವರು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸುವ ಕುರಿತು ಹೇಳಿಕೆ ನೀಡಿದ್ದರು. ಅಲ್ಲದೇ ಪ್ರಶಸ್ತಿಗೆ ಈ ಬಾರಿ ಆಯ್ಕೆ ಮಾಡಿದ ಪ್ರಕಾಶ್ ರೈ ಅವರಿಗೆ ಕಾರಂತರ ಹೆಸರಿನ ಪ್ರಶಸ್ತಿ ನೀಡದಂತೆ ಒತ್ತಾಯಿಸಿತ್ತು.

ಆದರೆ ಪ್ರಶಸ್ತಿ ಆಯ್ಕೆ ಸಮಿತಿ ನಟ ನಿರ್ದೇಶಕ ಪ್ರಕಾಶ್ ರೈ ಆಯ್ಕೆಯನ್ನು ಸಮರ್ಥಿಸಿದ್ದು, ನಿರ್ಧರಿತ ದಿನದಂದೆ ಪ್ರಶಸ್ತಿ ನೀಡುವ ಕುರಿತು ಹೇಳಿಕೆ ನೀಡಿದ ಬೆನ್ನಲ್ಲೇ ಪರ ಮತ್ತು ವಿರೋಧದ ಕಾವು ಏರಿತ್ತು.

ಇನ್ನೊಂದೆಡೆ ಅಖಿಲ ಕರ್ನಾಟಕ ನಾಥಪಂತ ಜೋಗಿ ಸಮಾಜ ಸೇವಾ ಸಮಿತಿ(ರಿ) ಅಧ್ಯಕ್ಷ ಡಾ.ಕೇಶವ ಕೋಟೇಶ್ವರ ನೇತೃತ್ವದಲ್ಲಿ ಜೋಗಿ ಸಮುದಾಯದ ಪ್ರಮುಖರು ಒಟ್ಟಾಗಿ ಕೋಟ ಅಮೃತೇಶ್ವರಿ ದೇವಸ್ಥಾನ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.


ಉಳಿದಂತೆ ವಿವಿಧ ಸಂಘಟನೆಯವರು ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿಭಟನೆಗೆ ತಯಾರಿಸಿ ನಡೆಸುತ್ತಿದ್ದಾರೆ.

ಇಂದು ಓದಿದ ಹೆಚ್ಚು ಸುದ್ದಿಗಳು:
►►ಕಾರಂತಜ್ಜನ ಮೊಮ್ಮಗ ನಾನು ಎಂದು ನಗು ಬೀರಿದ ನಟ ಪ್ರಕಾಶ ರೈ:
http://bit.ly/2y8cLzf
►►ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಲು ರೈ ಬರುತ್ತಾರೆ: ಆನಂದ ಸಿ. ಕುಂದರ್: http://bit.ly/2ycrPNO
►►ಪಟಾಕಿ ಬೇಡ ಎಂದಾದರೆ ಬಕ್ರೀದ್‌ಗೆ ಕುರಿ ಕಡಿಯುವುದು ನಿಲ್ಲಿಸಿ: ಚೇತನ್‌ ಭಗತ್: http://bit.ly/2ycKAkj

Related Tags: Karantha Award, Prakash Rai, Controversy, Muneer Katipalla, Anandh C Kunder, SP Sanjeev Pateel, Karanth Theme Park, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ