ಪಟಾಕಿ ಬೇಡ ಎಂದಾದರೆ ಬಕ್ರೀದ್‌ಗೆ ಕುರಿ ಕಡಿಯುವುದು ನಿಲ್ಲಿಸಿ: ಚೇತನ್‌ ಭಗತ್‌

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟ ಮತ್ತು ಸಿಡಿಸುವುದಕ್ಕೆ ನಿಷೇಧ ಹೇರಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಲೇಖಕ ಹಾಗೂ ಕಾದಂಬರಿಕಾರ ಚೇತನ್‌ ಭಗತ್‌, ಪಟಾಕಿಯನ್ನು ಸಂಪೂರ್ಣ ನಿಷೇಧಿಸಬೇಡಿ, ನಿಯಂತ್ರಿಸಿ ಎಂದು ಹೇಳಿದ್ದಾರೆ.

ಪಟಾಕಿ ನಿಷೇಧಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿರುವ ಚೇತನ್ ಭಗತ್ ಅವರು, ಯಾವಾಗಲೂ ಹಿಂದೂ ಹಬ್ಬಗಳ ಮೇಲೆ ಮಾತ್ರ ಇಂತಹ ನಿರ್ಧಾರ ಕೈಗೊಳ್ಳಲಾಗುತ್ತದೆ. ಇತರೆ ಕೋಮುಗಳ ಹಬ್ಬಗಳ ಮೇಲೆ ಯಾರೂ ಚಕಾರ ಎತ್ತುವುದಿಲ್ಲ ಎಂದಿದ್ದಾರೆ.

ಮಕ್ಕಳಿಗೆ ದೀಪಾವಳಿ ಎಂದರೆ ಪಟಾಕಿ ಸಿಡಿಸುವ ಸಂಭ್ರಮ! ಆದರೆ ಪಟಾಕಿನೇ ಇಲ್ಲ ಎಂದ ಮೇಲೆ ಅದು ಹೇಗೆ ದೀಪಾವಳಿ ಹಬ್ಬವಾಗುತ್ತದೆ ಎಂದು ಚೇತನ್‌ ಬೇಸರ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಹಬ್ಬದಂದು ಪಟಾಕಿ ನಿಷೇಧಿಸಿದಂತೆ ಬಕ್ರೀದ್‌ ಹಬ್ಬದಂದು ಕುರಿ ಕಡಿಯುವುದನ್ನು ಮತ್ತು ಕ್ರಿಸ್‌ ಮಸ್‌ ಸಮಯದಲ್ಲಿ ಕ್ರಿಸ್‌ಮಸ್ ಟ್ರೀ ಮಾರಾಟ ಮಾಡುವುದನ್ನು ನಿಷೇಧಿಸಬೇಕು ಎಂದು ಚೇತನ್‌ ಟ್ವೀಟ್ ಮಾಡಿದ್ದಾರೆ.

ದೀಪಾವಳಿ ಹಬ್ಬದಂದು ಉಂಟಾಗುವ ವಾಯುಮಾಲಿನ್ಯವನ್ನು ತಡೆಯಲು ಈ ರೀತಿ ಮಾಡಲಾಗುತ್ತದೆ. ಆದರೆ ದೆಹಲಿಯಲ್ಲಿ ಪ್ರತಿ ದಿನ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಯಾರು ಕೂಡ ಮಾತನಾಡುವುದಿಲ್ಲ, ಆದರೆ ದೀಪಾವಳಿ ಹಬ್ಬದ ದಿನ ಉಂಟಾಗುವ ವಾಯುಮಾಲಿನ್ಯದ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಾರೆ ಎಂದು ಚೇತನ್‌ ತಮ್ಮ ಸರಣಿ ಟ್ವೀಟ್‌ಗಳಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Related Tags: Chetan Bhagat, Deepavali, Fire Crackers Ban, Supreme Court, New Delhi, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ