ಪ್ರೊ.ರಿಚರ್ಡ್‌ ಎಚ್‌ ಥಲೇರ್‌ಗೆ ಅರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ

ಕರಾವಳಿ ಕರ್ನಾಟಕ ವರದಿ

ಸ್ಟಾಕ್‌ಹೋಮ್‌:
ಈ ವರ್ಷದ ಅರ್ಥಶಾಸ್ತ್ರ ವಿಭಾಗದ ನೊಬೆಲ್‌ ಪ್ರಶಸ್ತಿಗೆ ಅಮೆರಿಕದ ಪ್ರೊ.ರಿಚರ್ಡ್‌ ಎಚ್‌ ಥಲೇರ್‌ ಅವರನ್ನು ಆಯ್ಕೆ ಮಾಡಲಾಗಿದೆ.

‘ಬಿಹೇವಿಯರಲ್‌ ಎಕನಾಮಿಕ್ಸ್‌’ ಸಂಬಂಧಿಸಿದ ಕೊಡುಗೆಯನ್ನು ಪರಿಗಣಿಸಿ ರಿಚರ್ಡ್‌ ಎಚ್‌ ಥೇಲರ್‌ ಅವರನ್ನು ನೊಬೆಲ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅಂಡರ್ಸ್ಟಾಂಡಿಂಗ್ ದಿ ಸೈಕಾಲಜಿ ಆಫ್ ಎಕೆನಾಮಿಕ್ಸ್ ಗಾಗಿ ರಿಚರ್ಡ್ ಥಲೇರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸ್ವೀಡಿಶ್ ಅಕಾಡೆಮಿ ಆಫ್ ಸೈನ್ಸಸ್ ನ ಕಾರ್ಯದರ್ಶಿ ಗೋರನ್ ಹ್ಯಾನ್ಸನ್ ತಿಳಿಸಿದ್ದಾರೆ.

ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಥಲೇರ್ ‌ಅರ್ಥಶಾಸ್ತ್ರ ಹಾಗೂ ಮನಃಶಾಸ್ತ್ರ ಸಂಯೋಜನೆಯೊಂದಿಗೆ ವಿಶ್ಲೇಷಣೆ ನಡೆಸಿದ್ದಾರೆ.

ಸೀಮಿತ ವಿಚಾರ ಶಕ್ತಿ, ಸಾಮಾಜಿಕ ಆದ್ಯತೆ ಹಾಗೂ ಸ್ವನಿಯಂತ್ರಣದಲ್ಲಿ ಕೊರತೆಯಿಂದಾಗಿ ವೈಯಕ್ತಿಕ ನಿರ್ಧಾರದ ಜತೆಗೆ ಮಾರುಕಟ್ಟೆ ಫಲಿತಾಂಶದ ಮೇಲೂ ಪ್ರಭಾವ ಬೀರಬಲ್ಲದು ಎಂಬುದನ್ನು ಸಂಶೋಧಿಸಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಬಿಜೆಪಿ ಸ್ಥಿತಿ ನೀರಿನಿಂದ ಹೊರತೆಗೆದ ಮೀನಿನಂತಾಗಿದೆ: ರಮನಾಥ ರೈ ಲೇವಡಿ:
http://bit.ly/2yazbSa
►►ರಟ್ಟಿನ ಪೆಟ್ಟಿಗೆಯಲ್ಲಿ ಯೋಧರ ಶವ. ಸೇನೆಯ ವಿರುದ್ಧ ಆಕ್ರೋಶ: http://bit.ly/2y9yVTH
►►ಖಿನ್ನತೆಗೊಳಗಾದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು: http://bit.ly/2kA1CUM
►►ಹಾಸ್ಟೆಲ್‌ ಶೌಚಾಲಯದಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು: http://bit.ly/2y9WLhW

Related Tags: Nobel Prize, Economics Award, Richard Thaler, Kannada News, Karavalikarnataka News
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ