ರಟ್ಟಿನ ಪೆಟ್ಟಿಗೆಯಲ್ಲಿ ಯೋಧರ ಶವ. ಸೇನೆಯ ವಿರುದ್ಧ ಆಕ್ರೋಶ

ಕರಾವಳಿ ಕರ್ನಾಟಕ ವರದಿ

ನವದೆಹಲಿ:
ಭಾರತೀಯ ಸೇನೆಯ ಹೆಲಿಕಾಪ್ಟರ್ ಪತನಗೊಂಡು ಮರಣವನ್ನಪ್ಪಿದ ಯೋಧರ ಮೃತದೇಹಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ ರಟ್ಟಿನ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಬಂದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.

ಅರುಣಾಚಲ ಪ್ರದೇಶದ ತವಾಂಗ್‍ನಲ್ಲಿ ಹೆಲಿಕಾಪ್ಟರ್ ಪತನಗೊಂಡು ಸಾವಿಗೀಡಾದ ಭಾರತೀಯ ವಾಯುಪಡೆ ಮತ್ತು ಸೇನಾಪಡೆಯ ಏಳು ಯೋಧರ ಮೃತದೇಹವನ್ನು ರಟ್ಟಿನ ಪೆಟ್ಟಿಗೆಯಲ್ಲಿ ತೆಗೆದುಕೊಂಡು ಬಂದಿರುವ ಫೋಟೊ ಇದೀಗ ವೈರಲ್ ಆಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಯೋಧರ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ರಟ್ಟಿನ ಪೆಟ್ಟಿಗೆಯಲ್ಲಿರಿಸಿರುವ ಫೋಟೊವನ್ನು ಸೇನಾ ಕಮಾಂಡರ್ ಲೆ.ಜನರಲ್ ಎಚ್. ಎಸ್ ಪನಾಗ್ ಟ್ವಿಟರ್‍‍ನಲ್ಲಿ ಶೇರ್ ಮಾಡಿದ್ದರು. ಅಲ್ಲದೇ ಇದೋ ನೋಡಿ ದೇಶಕ್ಕಾಗಿ ಮಡಿದ ಯೋಧರಿಗೆ ಸಿಗುವ ಗೌರವ ಎಂದು ಬರಹವನ್ನೂ ಪ್ರಕಟಿಸಿದ್ದರು.

ಈ ಫೋಟೊ ಶೇರ್ ಆಗುತ್ತಿದ್ದಂತೆ ಯೋಧರಿಗೆ ಗೌರವ ಸಲ್ಲಿಸುವ ರೀತಿ ಇದೇನಾ ಎಂದು ನೆಟ್ಟಿಗರು ಸೇನಾಪಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೇನೆ ಸ್ಥಳೀಯವಾಗಿ ಸಿಕ್ಕಿರುವ ಸಂಪನ್ಮೂಲದಿಂದ ಮೃತದೇಹಗಳನ್ನು ಸುತ್ತಲಾಗಿತ್ತು. ಅಪಘಾತದಲ್ಲಿ ಮಡಿದ ಯೋಧರಿಗೆ ಸಕಲ ಸೇನಾ ಗೌರವಗಳನ್ನು ನೀಡಲಾಗುತ್ತದೆ.

ಸಮುದ್ರ ಮಟ್ಟದಿಂದ 17000 ಎತ್ತರದಲ್ಲಿ ಅಷ್ಟೊಂದು ಶವಪೆಟ್ಟಿಗಗಳನ್ನು ಹೊತ್ತುಕೊಂಡು ಹಾರಲು ಹೆಲಿಕಾಪ್ಟರ್ ಗೆ ಸಾಧ್ಯವಿಲ್ಲ. ಹೀಗಾಗಿ ರಟ್ಟಿನ ಪೆಟ್ಟಿಗೆ ಬಳಸಲಾಗಿದೆ.

ತವಾಂಗ್‌ನಂತಹ ದೂರದ ಪ್ರದೇಶದಲ್ಲಿ ಅತ್ಯಗತ್ಯ ವಸ್ತುಗಳನ್ನು ಮಾತ್ರವೇ ಇರಿಸಲಾಗುತ್ತದೆ. ಬಾಡಿ ಬ್ಯಾಗ್‌ಗಳ ವ್ಯವಸ್ಥೆ ಸುಸಜ್ಜಿತ ಮಿಲಿಟರಿ ಕೇಂದ್ರಗಳಲ್ಲಿ ಮಾತ್ರ ಇರುತ್ತದೆ ಎಂದು ಸ್ಪಷ್ಟಪಡಿಸಿದೆ.

ಗುರುವಾರ ಬೆಳಗ್ಗೆ ಅರುಣಾಚಲ ಪ್ರದೇಶದಲ್ಲಿ ತರಬೇತಿ ಹಾರಾಟದ ವೇಳೆ ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್‌ ಪತನಗೊಂಡಿದ್ದು, ಹೆಲಿಕಾಪ್ಟರ್‌ನಲ್ಲಿದ್ದ  7 ಮಂದಿ ಯೋಧರು ಮೃತಪಟ್ಟಿದ್ದರು.

ಇದನ್ನೂ ಓದಿ:
►►ಐಎಎಫ್ ಹೆಲಿಕಾಪ್ಟರ್‌ ಪತನ: 7 ಯೋಧರ ಸಾವು:
http://bit.ly/2y4atmn

ಇಂದು ಹೆಚ್ಚು ಓದಿದ ಸುದ್ದಿಗಳು:
►►ಖಿನ್ನತೆಗೊಳಗಾದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು:
http://bit.ly/2kA1CUM
►►ಹಾಸ್ಟೆಲ್‌ ಶೌಚಾಲಯದಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು: http://bit.ly/2y9WLhW
►►ಜಮ್ಮು-ಕಾಶ್ಮೀರದಲ್ಲಿ ಗುಂಡು ಹಾರಿಸಿಕೊಂಡು ಕನ್ನಡಿಗ ಯೋಧ ಆತ್ಮಹತ್ಯೆ: http://bit.ly/2yyvXcl
►►ಕಳ್ಳನೆಂದು ಅನುಮಾನಿಸಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು: http://bit.ly/2hYvCIY

Related Tags: Soldier''s Dead Body, Card Board Boxes, Taiwang Air Crash
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ