ಖಿನ್ನತೆಗೊಳಗಾದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಕರಾವಳಿ ಕರ್ನಾಟಕ ವರದಿ

ಮೈಸೂರು:
ಖಿನ್ನತೆಗೊಳಗಾದ ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಸಿದ್ದಾರ್ಥ ನಗರದಲ್ಲಿ ವರದಿಯಾಗಿದೆ.

ಮೋನಿಕಾ (19) ಆತ್ಮಹತ್ಯೆಗೈದ ವಿದ್ಯಾರ್ಥಿನಿ.

ಕಳೆದ ಕೆಲ ದಿನಗಳಿಂದ ಮೋನಿಕಾ ಖಿನ್ನತೆಗೆ ಒಳಗಾಗಿದ್ದಳು ಎನ್ನಲಾಗಿದೆ. ಮೈಸೂರು ಜಿಲ್ಲೆಯ ಸಿದ್ದಾರ್ಥ ನಗರದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿನಿ ಮೋನಿಕಾ ಭಾನುವಾರ ತಡರಾತ್ರಿ ತನ್ನ ಕೋಣೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೈದಿದ್ದಾಳೆ.

ಮೋನಿಕಾ ಮೈಸೂರಿನ ಖಾಸಗಿ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು.

ವಿದ್ಯಾರ್ಥಿನಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ಗೆ ಗುದ್ದಿದ ಟೆಂಪೊ: ಹಿಂಬದಿ ಸವಾರ ದಾರುಣ ಮೃತ್ಯು
ಕರಾವಳಿ ಕರ್ನಾಟಕ ವರದಿ
ಕುಂದಾಪುರ:
ಬೈಕ್ ಹಾಗೂ ಟೆಂಪೊ ನಡುವಿನ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಖೇದಕರ ಘಟನೆ ಇಲ್ಲಿನ ಕಂಡ್ಲೂರಿನಲ್ಲಿ ಸಂಭವಿಸಿದೆ.

ಕಂಡ್ಲೂರು ಹಳ್ನಾಡು ನಿವಾಸಿ ನಾಗರಾಜ(35) ಅಪಘಾತದಲ್ಲಿ ಜೀವತೆತ್ತ ದುರ್ದೈವಿ.

ಭಾನುವಾರ ಸಂಜೆ ನಾಗರಾಜ್ ತನ್ನ ಸ್ನೇಹಿತ ವಿಜಯ್ ಬೈಕ್‌ನಲ್ಲಿ ಹಿಂಬದಿ ಕುಳಿತು ಅಂಪಾರು ಕಡೆಯಿಂದ ಬರುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಬೈಕ್ ಕಂಡ್ಲೂರು ಸಮೀಪಿಸುತ್ತಿದ್ದಂತೆ ಹಿಂಬದಿಯಿಂದ ಕೆಂಪು ಕಲ್ಲು ತುಂಬಿಕೊಂಡು ಸಾಗುತ್ತಿದ್ದ ಟೆಂಪೊ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ತೀವ್ರತೆಗೆ ಹಿಂಬದಿ ಸವಾರ ನಾಗರಾಜ್ ನಿಯಂತ್ರಣ ತಪ್ಪಿ ರಸ್ತೆಗಪ್ಪಳಿಸಿದ್ದರಿಂದ ಟೆಂಪೊ ಅವರ ಮೈಮೇಲೆ ಹರಿದು ಹೋದ ಪರಿಣಾಮ ಗಂಭೀರವಾಗಿ ಗಾಯಗೊಂಡ ನಾಗರಾಜ್ ಕೊನೆಯುಸಿರೆಳೆದಿದ್ದಾರೆ.

ಅಪಘಾತದ ವೇಳೆ ಬೈಕ್ ಚಲಾಯಿಸುತ್ತಿದ್ದ ವಿಜಯ್ ಅಪಾಯದಿಂದ ಪಾರಾಗಿದ್ದಾರೆ.

ಕುಂದಾಪುರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂದು ಹೆಚ್ಚು ಓದಿದ ಸುದ್ದಿಗಳು:
►►ಹಾಸ್ಟೆಲ್‌ ಶೌಚಾಲಯದಲ್ಲಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು:
http://bit.ly/2y9WLhW
►►ಜಮ್ಮು-ಕಾಶ್ಮೀರದಲ್ಲಿ ಗುಂಡು ಹಾರಿಸಿಕೊಂಡು ಕನ್ನಡಿಗ ಯೋಧ ಆತ್ಮಹತ್ಯೆ: http://bit.ly/2yyvXcl
►►ಕಳ್ಳನೆಂದು ಅನುಮಾನಿಸಿ ಕಾರ್ಮಿಕನನ್ನು ಹೊಡೆದು ಕೊಂದ ಗ್ರಾಮಸ್ಥರು: http://bit.ly/2hYvCIY

Related Tags: Mysore Student, Monika Suicide, Kannada News, Karnataka News, Coastal Karnataka News, Karavali News, Karavali Karnataka, Latest Kannada News, ಕರಾವಳಿ ಸುದ್ದಿ, ಕರಾವಳಿ ಕರ್ನಾಟಕ ಸುದ್ದಿ
 
comments powered by Disqus
Facebook Twitter Google Plus Youtube
ಪ್ರಮುಖ ಸುದ್ದಿಕರ್ನಾಟಕ
  
ಕರಾವಳಿಊರ ಸುದ್ದಿ
  
 
ಊರ ಮಣ್ಣ ಕಣಕಣದ ಕಣ್ಣು, ಜಗದಗಲ ನೋಟ